ತುಮಕೂರು ಸೆ 21: ಕೆಲವು ದಿನಗಳ ಹಿಂದೆ ತುಮಕೂರು ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಿಲೋಮೀಟರ್ ಗಟ್ಟಲೆ ಬಿದ್ದಿದ್ದ ಕಾಂಡೋಮ್ಗಳಿಗೆ ಹೊಸ ತಿರುವು ಸಿಕ್ಕಿದ್ದು, ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ರಹಸ್ಯ ಅಡಗುತಾಣವೊಂದನ್ನು ಪತ್ತೆಹಚ್ಚಿದ್ದಾರೆ.
ನಗರದ ಕ್ಯಾತಸಂದ್ರ ವಸತಿ ಗೃಹದಲ್ಲಿ ಸುರಂಗ ಕೊರೆದು ಯುವತಿಯರನ್ನ ಬಚ್ಚಿಟ್ಟು ವೇಶ್ಯಾವಾಟಿಕೆ ನಡೆಸುತ್ತಿರುವುದು ಪತ್ತೆಯಾಗಿದ್ದು, ಪೊಲೀಸರು ದಾಳಿ ಮಾಡಲು ತೆರಳಿದ ಸಮಯದಲ್ಲಿ ಸೂಚನೆ ನೀಡುವ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಈ ಸೂಚನೆ ಬರುತ್ತಿದ್ದಂತೆ ಯುವತಿಯರು ಹಾಗೂ ಪುರುಷರನ್ನು ಗುಹೆಯಲ್ಲಿ ಬಚ್ಚಿಡಲಾಗುತಿತ್ತು. ಸುರಂಗ ಮಾರ್ಗ ಇರುವುದು ಗೊತ್ತಾಗದಂತೆ ನೋಡಿಕೊಳ್ಳಲಾಗಿತ್ತು ಎನ್ನಲಾಗಿದೆ.
ಅದರೆ ಖಚಿತ ಮಾಹಿತಿಮೇರೆಗೆ ವಸತಿ ಗೃಹವೊಂದರ ಮೇಲೆ ದಾಳಿ ನಡೆಸಿದ ಪೊಲೀಸರು ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಇಬ್ಬರು ಯುವತಿಯರನ್ನ ಹಾಗೂ ಐವರು ಪುರುಷರನ್ನು ಬಂಧಿಸಿದ್ದಾರೆ. ಈ ಸಮಯದಲ್ಲಿ ಒಬ್ಬ ಯುವತಿ ತಪ್ಪಿಸಿಕೊಂಡು ಪರಾರಿಯಾಗಿದ್ದಾಳೆ.
ಕೆಲವು ದಿನಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ 48 ರ ಕ್ಯಾತಸಂದ್ರ ಸೇತುವೆ ಸಮೀಪ ಕಾಂಡೋಮ್ಗಳ ರಾಶಿ ಪತ್ತೆಯಾಗಿತ್ತು. ಈ ಮಾಹಿತಿಯ ಜಾಡು ಹಿಡಿದು ವಿವರ ಸಂಗ್ರಹಿಸಿದಾಗ ವಸತಿ ಗೃಹದಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವುದುಬೆಳಕಿಗೆ ಬಂದಿತ್ತು. ಖಚಿತ ಮಾಹಿತಿ ಮೇರೆಗೆ ಎಸ್ಪಿ ನೇತೃತ್ವದಲ್ಲಿ ದಾಳಿ ನಡೆದಿದ್ದು ಈ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.