New Delhi: ಸ್ವಾತಂತ್ರ್ಯ ನಂತರ ಇದೇ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷ ಒಂದು ದಶಕಗಳ ಕಾಲ ಕೇಂದ್ರದಲ್ಲಿ ಅಧಿಕಾರ ನಡೆಸಲು ಸಾಧ್ಯವಾಗದೇ (Congress 2004 formula) ಅಧಿಕಾರದಿಂದ ದೂರ ಉಳಿದಿದೆ.

ಈ ವನವಾಸಕ್ಕೆ ಇತಿಶ್ರೀ ಹಾಡಲು 2024ರಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಶತಾಯಗತಾಯ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಭಾರೀ ರಣತಂತ್ರಗಳನ್ನು ಹೆಣೆಯುತ್ತಿದೆ.
2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ 2004ರಲ್ಲಿ ಪ್ರಯೋಗಿಸಿದ್ದ ಫಾರ್ಮುಲಾವನ್ನು (Congress 2004 formula) ಪ್ರಯೋಗಿಸಿಲು ಸಿದ್ದತೆ ನಡೆಸಿದೆ.
ಇದನ್ನು ಓದಿ: ಫಸ್ಟ್ ಪೀರಿಯೆಡ್ : ಹೆಣ್ಣುಮಕ್ಕಳಲ್ಲಾಗುವ ಬದಲಾವಣೆಗಳೇನು ? ಸ್ವಯಂ ಆರೈಕೆ ಹೇಗೆ?
2004ರ ಫಾರ್ಮುಲಾ ಏನು..?
2004ರಲ್ಲಿ ಸೋನಿಯಾ ಗಾಂಧಿ ಅವರು, ಎನ್ಡಿಎ ವಿರುದ್ದ ಬಲಿಷ್ಠ ಒಕ್ಕೂಟ ರಚನೆ ಮಾಡುವ ಸಲುವಾಗಿ ಐದು ದೊಡ್ಡ ರಾಜ್ಯಗಳಲ್ಲಿ ಕಾಂಗ್ರೆಸ್ನೊಂದಿಗೆ ಸೈದ್ದಾಂತಿಕವಾಗಿ ಹೊಂದಾಣಿಕೆಯಾಗುವ ಪ್ರಾದೇಶಿಕ
ಪಕ್ಷಗಳೊಂದಿಗೆ ಚುನಾವಣಾಪೂರ್ವ ಮೈತ್ರಿ ಮಾಡಿಕೊಂಡಿತು. ಬಿಹಾರದಲ್ಲಿ ಆರ್ಜೆಡಿ-ಎಲ್ಜೆಪಿ, ಜಾರ್ಖಂಡ್ನಲ್ಲಿ ಜೆಎಂಎಂ, ಮಹಾರಾಷ್ಟ್ರದಲ್ಲಿ ಎನ್ಸಿಪಿ, ಆಂಧ್ರಪ್ರದೇಶದಲ್ಲಿ ಟಿಆರ್ಎಸ್ ಮತ್ತು ತಮಿಳುನಾಡಿನ
ಡಿಎಂಕೆ ಜೊತೆಗೆ ಮೈತ್ರಿ ಸಾಧಿಸಿತು. ಇದರಿಂದ ಭಾರೀ ಫಲಿತಾಂಶವನ್ನೇ ಕಾಂಗ್ರೆಸ್ ಪಡೆಯಿತು. ಕಾಂಗ್ರೆಸ್ ಒಟ್ಟು 417 ಅಭ್ಯರ್ಥಿಗಳನ್ನು ಕಣಕ್ಕಿಳಿಸಿತು. ಅದರಲ್ಲಿ ಅವರು 145 ಸ್ಥಾನಗಳನ್ನು ಗೆದ್ದಿತು.
ಮೈತ್ರಿ ಮಾಡಿಕೊಂಡ ಐದು ರಾಜ್ಯಗಳ ಒಟ್ಟು 188 ಸ್ಥಾನಗಳಲ್ಲಿ, ಕಾಂಗ್ರೆಸ್ 114 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತು.

ಈ ಸೂತ್ರದಿಂದಾಗಿ ಕಾಂಗ್ರೆಸ್ ಏಕೈಕ ದೊಡ್ಡ ಪಕ್ಷವಾಗಿ ಅಧಿಕಾರಕ್ಕೇರಿತು. ಕಾಂಗ್ರೆಸ್ನ ಈ ತಂತ್ರದಿಂದಾಗಿ ಐದು ರಾಜ್ಯಗಳಲ್ಲಿ ಎನ್ ಡಿಎಗೆ ನೂರರ ಗಡಿ ದಾಟಲೂ ಸಾಧ್ಯವಾಗದೇ, ಕಾಂಗ್ರೆಸ್ ಪ್ರಾಬಲ್ಯ ಸಾಧಿಸಿತು.
ನಂತರ ಇದೇ ಸೂತ್ರವನ್ನ ಪಾಲಿಸುತ್ತಲೇ 2014ರ ವರೆಗೆ ಕಾಂಗ್ರೆಸ್ ಅಧಿಕಾರದಲ್ಲಿತ್ತು.
ಇನ್ನು ಕಾಂಗ್ರೆಸ್ 2004ರ ಫಾರ್ಮುಲಾ ಪ್ರಯೋಗಿಸಲು ಸಿದ್ದತೆ ನಡೆಸುವ ಭಾಗವಾಗಿಯೇ ಪಾಟ್ನಾದಲ್ಲಿ 17ಕ್ಕೂ ಹೆಚ್ಚು ವಿಪಕ್ಷ ನಾಯಕರೊಂದಿಗೆ ಸಭೆ ನಡೆಸಿದೆ. ಆದರೆ ಈಗ ಪರಿಸ್ಥಿತಿ ಸ್ವಲ್ಪ ಭಿನ್ನವಾಗಿದೆ.
2014ರ ನಂತರ ಹಲವು ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್ ಸಖ್ಯವನ್ನು ತೊರೆದಿವೆ. ಎಲ್ಜೆಪಿ, ಬಿಎಸ್ಪಿ, ಟಿಆರ್ಎಸ್, ಟಿಡಿಪಿ, ಬಿಜೆಡಿ ಸೇರಿದಂತೆ ಹಲವು ಪಕ್ಷಗಳು ಕಾಂಗ್ರೆಸ್ನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಸಿದ್ದವಿಲ್ಲ.
ಹೀಗಾಗಿ ಕೆಲ ರಾಜ್ಯಗಳಲ್ಲಿ ಹಿನ್ನಡೆಯಾಗುವ ಸಾಧ್ಯತೆಗಳಿವೆ. ಆದರೂ ಕೂಡಾ ಪ್ರಾದೇಶಿಕ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡರೆ ಮಾತ್ರ ಬಿಜೆಪಿಯನ್ನು ಸೋಲಿಸಬಹುದು ಎಂಬ ಸೂತ್ರವನ್ನಂತು ಕಾಂಗ್ರೆಸ್ ಪ್ರಯೋಗಿಸಲು ಮುಂದಾಗಿದೆ.