Dentification Pratyastra by ‘Kai’ as Counter to Muda Astra: Difficulty for HDK-Yeddi
Bengaluru: ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ದ ಮುಡಾ ಹಗರಣವನ್ನು ಮುಂದಿಟ್ಟು ತೀವ್ರ ವಾಗ್ದಾಳಿ ನಡೆಸುತ್ತಿದ್ದ ಬಿಜೆಪಿ ಹಾಗೂ ಜೆಡಿಎಸ್ ವಿರುದ್ದ ಇದೀಗ ಕಾಂಗ್ರೆಸ್ ನಾಯಕರು ಡಿನೋಟಿಫಿಕೇಷನ್ ಅಸ್ತ್ರವನ್ನು ಪ್ರಯೋಗಿಸಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ (Yadiyurappa) ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರು ಡಿನೋಟಿಫಿಕೇಷನ್ ಮೂಲಕ ಭೂಮಿ ಕಬಳಿಸಿದ್ದಾರೆ ಎಂಬ ಗಂಭೀರ ಆರೋಪ ಮಾಡಲಾಗಿದೆ.
ಈ ಕುರಿತು ಮಾತನಾಡಿರುವ ಸಚಿವ ಕೃಷ್ಣ ಭೈರೇಗೌಡ (Krishna Byregowda) ಅವರು, ನೂರಾರು ಕೋಟಿ ಬೆಲೆ ಬಾಳುವ 1.11 ಎಕರೆ ಜಮೀನನ್ನು ಡಿ ನೋಟಿಫಿಕೇಶನ್ ಮಾಡಿ, ಬಿಡಿಎ ಬಡವರಿಗೆ ಎಂದು ಮೀಸಲಿಟ್ಟಿದ್ದ ಭೂಮಿಯನ್ನು ನುಂಗಿ ಹಾಕಿರುವುದು ನ್ಯಾಯವೇ? ಬಿಡಿಎ ಬಡಾವಣೆ ನಿರ್ಮಾಣಕ್ಕಾಗಿ 30 ವರ್ಷಗಳ ಹಿಂದೆಯೇ ಗಂಗೇನಹಳ್ಳಿಯ 1 ಎಕರೆ 11 ಗುಂಟೆ ಜಮೀನನ್ನು ಸ್ವಾಧೀನ ಮಾಡಿಕೊಳ್ಳಲಾಗಿರುತ್ತದೆ.
ಡಿನೋಟಿಫಿಕೇಷನ್ (De–Notification) ಆದ ಗಂಗೇನಳ್ಳಿಯ 1 ಎಕರೆ 11 ಗುಂಟೆ ಜಮೀನು ಕೆಲವೇ ದಿನಗಳಲ್ಲಿ ಕುಮಾರಸ್ವಾಮಿ ಅವರ ಭಾಮೈದನ ಹೆಸರಿಗೆ ರಿಜಿಸ್ಟರ್ ಆಗುತ್ತದೆ. ಇದೊಂದು ವ್ಯವಸ್ಥಿತವಾದ ದರೋಡೆ. ಈ ಭೂಸ್ವಾಧೀನ ಆಗಿರುವ ಭೂಮಿಯ ನಿಜವಾದ ಮಾಲೀಕರಾದ 21 ಜನರ ಜೊತೆಗೆ ಕುಮಾರಸ್ವಾಮಿ ಅವರ ಅತ್ತೆ ಜಿಪಿಎ (GPA) ಮಾಡಿಕೊಂಡಿದ್ದಾರೆ ಎಂದಿದ್ದಾರೆ.
ಇನ್ನೊಂದೆಡೆ ಸಚಿವ ಗುಂಡೂರಾವ್ (Dinesh Gundu Rao) ಅವರು, ಈ ಪ್ರಕರಣ ಡಿ ನೋಟಿಫಿಕೇಶನ್ಗೆ ಅರ್ಹವಲ್ಲ ಎಂಬ ಅಧಿಕಾರಿಗಳ ಎಲ್ಲಾ ಸೂಚನೆಗಳನ್ನು ಗಾಳಿಗೆ ತೂರಿದ ಯಡಿಯೂರಪ್ಪ ಅವರು 2009 ರಲ್ಲಿ ಈ ಭೂಮಿಯನ್ನು ಭೂಸ್ವಾಧೀನದಿಂದ ಕೈ ಬಿಡುತ್ತಾರೆ. ಯಾವ ಜಮೀನನ್ನು ಡಿ-ನೋಟಿಫಿಕೇಷನ್ ಮಾಡಲು ಸಾಧ್ಯವೇ ಇಲ್ಲವೋ ಅದನ್ನು ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ಅವರು ಇಬ್ಬರೂ ಸೇರಿಕೊಂಡು ಡಿ-ನೋಟಿಫೈ ಮಾಡಿದ್ದಾರೆ.
ಈ ಲೂಟಿಯಲ್ಲಿ ಯಾರ್ಯಾರು ಎಷ್ಟೆಷ್ಟು ಪಾಲು ಪಡೆದಿದ್ದಾರೆ? ಇದರ ಬಗ್ಗೆ ಇಬ್ಬರೂ ಉತ್ತರ ನೀಡಬೇಕು. ದಾಖಲೆ ಸಮೇತ ನಾವು ಮಾಡಿದ ಆರೋಪಗಳಿಗೆ ಹೆಚ್.ಡಿ ಕುಮಾರಸ್ವಾಮಿ (H D Kumaraswamy), ಬಿ.ಎಸ್ ಯಡಿಯೂರಪ್ಪ ಹಾಗೂ ಬಿಜೆಪಿಯವರು ಉತ್ತರ ನೀಡಬೇಕು. ಡಿನೋಟಿಫಿಕೇಷನ್ ಅಕ್ರಮದ ಮುಖ್ಯ ರೂವಾರಿ ಕುಮಾರಸ್ವಾಮಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಯಡಿಯೂರಪ್ಪನವರು ಉತ್ತರ ಕೊಡಬೇಕು ಎಂದು ಆಗ್ರಹಿಸಿದ್ದಾರೆ.