`ಜನೋತ್ಸವ’ ಎನ್ನುತ್ತಿದ್ದ ಬಿಜೆಪಿ ಸರ್ಕಾರಕ್ಕೆ ಜನಾಕ್ರೋಶೋತ್ಸವದ ದರ್ಶನವಾಗಿದೆ : ಕಾಂಗ್ರೆಸ್‌

ಹರ್ಷ ಹತ್ಯೆ(Harsha Murder) ಆರೋಪಿಗಳಿಗೆ ಜೈಲಿನಲ್ಲಿ ಬಿರಿಯಾನಿ ಸೇವೆ ಸಲ್ಲಿಸಿದ ಬಿಜೆಪಿ ಸರ್ಕಾರದ(BJP Government) ಅಸಲಿ ಅಜೆಂಡಾ ಏನೆಂದು ಜನತೆ ಅರ್ಥ ಮಾಡಿಕೊಂಡಿದ್ದಾರೆ. ಸರ್ಕಾರದ ಬಿರಿಯಾನಿ ಸೇವೆಯೇ ಕ್ರಿಮಿನಲ್ಗಳಿಗೆ ಭಯದ ಬದಲು ಪ್ರೇರಣೆ ನೀಡುತ್ತಿದೆ. ರಾಜ್ಯದಲ್ಲಿ ಜನಸಾಮಾನ್ಯರ ಬದಲು ಕ್ರಿಮಿನಲ್ಗಳಿಗೆ ರಕ್ಷಣೆ, ಗೌರವ ಸಿಗುತ್ತಿದೆ. ಬಿಜೆಪಿ ಸರ್ಕಾರದ ಅಸಾಮರ್ಥ್ಯ, ದುರಾಡಳಿತ, ಕಾನೂನು ಸುವ್ಯವಸ್ಥೆಯ ವೈಫಲ್ಯಕ್ಕೆ ಅವರದ್ದೇ ಪಕ್ಷದ ಕಾರ್ಯಕರ್ತರೆ ರಾಜೀನಾಮೆ(Resign) ಪತ್ರಗಳ ಮೂಲಕ ಉತ್ತರ ಕೊಡುತ್ತಿದ್ದಾರೆ.

ಯಾವ ಮುಖ ಇಟ್ಟುಕೊಂಡು ಉತ್ಸವ ಮಾಡುತ್ತೀರಿ? ಲಜ್ಜೆಬಿಟ್ಟ ಬಿಜೆಪಿ ಇನ್ನೂ ಸಹ ಬುದ್ದಿ ಕಲಿಯದಿದ್ದರೆ, ಅವರ ಕಾರ್ಯಕರ್ತರೇ ಕಲಿಸುತ್ತಾರೆ ಎಂದು ಕಾಂಗ್ರೆಸ್‌(Congress) ವ್ಯಂಗ್ಯವಾಡಿದೆ.
ಈ ಕುರಿತು ಸರಣಿ ಟ್ವೀಟ್‌(Tweet) ಮಾಡಿರುವ ಕಾಂಗ್ರೆಸ್‌, ಬಿಜೆಪಿ ಸರ್ಕಾರ ಇಷ್ಟು ದಿನ ಜನವಿರೋಧಿ ನೀತಿಗಳಿಂದ ಜನಸಾಮಾನ್ಯರ ಆಕ್ರೋಶವನ್ನು ಎದುರಿಸುತ್ತಿತ್ತು. ಈಗ ತಮ್ಮದೇ ಕಟ್ಟರ್ ಕಾರ್ಯಕರ್ತರ ಆಕ್ರೋಶ ಎದುರಿಸುತ್ತಿದೆ. ಬಿಜೆಪಿಯ ಭ್ರಷ್ಟೋತ್ಸವದ ಮೆರವಣಿಗೆಯನ್ನೇ ನಡೆಸುತ್ತಿರುವ ಸರ್ಕಾರದ ವೈಫಲ್ಯಗಳಿಗೆ ಇದಕ್ಕಿಂತ ಬೇರೆ ಇನ್ಯಾವ ಸಾಕ್ಷಿಯೂ ಬೇಡ.

ಅಲ್ಲವೇ ಅತಿಯಾದರೆ ಅಮೃತವೂ ವಿಷವಾಗುತ್ತದೆ ಎನ್ನುವಂತೆ ಬಿಜೆಪಿ ಬಿತ್ತಿದ ದ್ವೇಷ ಬೀಜ ಅತಿಯಾಗಿ ಬಿಜೆಪಿಯನ್ನೇ ಸುಡುತ್ತದೆ, ಇದು ನಿಶ್ಚಿತ. ಬಿಜೆಪಿ ಸರ್ಕಾರ ಜನೋತ್ಸವ ನಡೆಸುವುದಲ್ಲ, ಜನಾಕ್ರೋಶೋತ್ಸವ ಎದುರಿಸುತ್ತಿದೆ. ಸರ್ಕಾರದ ವೈಫಲ್ಯಕ್ಕೆ ಅವರದ್ದೇ ಪಕ್ಷದ ಕಾರ್ಯಕರ್ತರು ಕನ್ನಡಿ ಹಿಡಿದಿದ್ದಾರೆ ಎಂದಿದೆ.
ಪ್ರವೀಣ್ ಹತ್ಯೆ(Praveen Nettaru Murder) ಹಿನ್ನೆಲೆಯಲ್ಲಿ ಯಾರೇ ಸಮಾಜವನ್ನು ಪ್ರಚೋದನೆ ಮಾಡಲು ಪ್ರಯತ್ನಿಸುವವರನ್ನು ಮುಲಾಜಿಲ್ಲದೆ ನಿಗ್ರಹಿಸುವ ಕೆಲಸವನ್ನು ಸರ್ಕಾರ ಮಾಡಬೇಕು.

ಇನ್ನಷ್ಟು ಅನಾಹುತಗಳಿಗೆ ಕಾರಣವಾಗದಂತೆ ನೋಡಿಕೊಳ್ಳಬೇಕಿದೆ. ಜನೋತ್ಸವ ಎನ್ನುತ್ತಿದ್ದ ಬಿಜೆಪಿಸರ್ಕಾರಕ್ಕೆ ಜನಾಕ್ರೋಶೋತ್ಸವದ ದರ್ಶನವಾಗಿದೆ. ಸರ್ಕಾರದ ವೈಫಲ್ಯಕ್ಕೆ ಇನ್ನೆಷ್ಟು ಜೀವಗಳು ಬಲಿಯಾಗಬೇಕು? ಬೆಳ್ಳಾರೆಯ ಪ್ರವೀಣ್ ಹತ್ಯೆ ಅತ್ಯಂತ ಆಘಾತಕಾರಿಯಾದುದು, ಪೊಲೀಸರು(Police) ಶೀಘ್ರವಾಗಿ ಕೊಲೆಗಾರರನ್ನು ಬಂಧಿಸಿ, ತನಿಖೆ ನಡೆಸಬೇಕು, ಯಾವುದೇ ಅಹಿತಕರ ವಾತಾವರಣಕ್ಕೆ ಆಸ್ಪದ ಕೊಡದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಸರ್ಕಾರದ್ದು ಎಂದಿದೆ.

Latest News

ಆರೋಗ್ಯ

ಸಕ್ಕರೆ ಖಾಯಿಲೆ ಇರುವವರು ಈ ಹಣ್ಣುಗಳನ್ನು ಸೇವಿಸಬಹುದು ; ತಪ್ಪದೇ ಈ ಮಾಹಿತಿ ಓದಿ

ತಜ್ಞರ ಪ್ರಕಾರ, ಸಕ್ಕರೆ ಕಾಯಿಲೆ ಇರುವವರು ಈ 5 ವಿಧದ ಹಣ್ಣುಗಳನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. ಅಂತಹ ಹಣ್ಣುಗಳ ವಿವರ ಇಲ್ಲಿದೆ ನೋಡಿ.

ದೇಶ-ವಿದೇಶ

ದೇಶದ ಹೆಮ್ಮೆ ತ್ರಿವರ್ಣ ಧ್ವಜವೂ ಕೂಡ ಬಿಜೆಪಿಗೆ ವ್ಯಾಪಾರದ ಸರಕಾಗಿದೆ : ಬಿ.ಕೆ.ಹರಿಪ್ರಸಾದ್

38×11,80,000=4.484 ಕೋಟಿ, ಹೇಗಿದೆ ಮೋದಿ ಸರ್ಕಾರದ ಲೂಟಿ? ಕೇಂದ್ರದ ಮೋದಿ ಸರ್ಕಾರ ವಸೂಲಿ ಬಾಜಿತನಕ್ಕೆ ರಾಷ್ಟ್ರಧ್ವಜವನ್ನ ಬಳಸಿಕೊಂಡಿರುವುದು ಅಕ್ಷಮ್ಯ ಅಪರಾಧ

ಕ್ರೀಡೆ

ಕಾಮನ್‌ವೆಲ್ತ್ ಗೇಮ್ಸ್‌ 2022 ; ಕಂಚಿನ ಪದಕ ಗೆದ್ದ ಪತ್ನಿಯನ್ನು ಅಭಿನಂದಿಸಿದ ದಿನೇಶ್ ಕಾರ್ತಿಕ್

ಭಾರತದ ಸ್ಕ್ವ್ಯಾಶ್ ಆಟಗಾರ್ತಿ ದೀಪಿಕಾ ಪಲ್ಲಿಕ್ಕಲ್(Deepika Pallikal) ಮಿಕ್ಸೆಡ್ ಡಬಲ್ಸ್ ವಿಭಾಗದಲ್ಲಿ ಕಂಚಿನ ಪದಕ(Bronze Medal) ಗೆದ್ದುಕೊಂಡಿದ್ದಾರೆ.

ಆರೋಗ್ಯ

ದೇಹ ನೀಡುವ `ಈ’ ಸೂಚನೆಗಳು ಕಿಡ್ನಿ ವೈಪಲ್ಯವನ್ನು ಸೂಚಿಸುತ್ತವೆ ; ಇಲ್ಲಿದೆ ಮಾಹಿತಿ ಓದಿ

ಕಿಡ್ನಿ(Kidney) ನಮ್ಮ ದೇಹದ ಪ್ರಮುಖ ಅಂಗವಾಗಿದೆ. ದೇಹದಲ್ಲಿ ಶುದ್ಧ ರಕ್ತವನ್ನು ಪರಿಚಲನೆ ಮಾಡುವಲ್ಲಿ ಮೂತ್ರಪಿಂಡಗಳು ಮುಖ್ಯ ಪಾತ್ರವಹಿಸುತ್ತವೆ.