Kodagu : ಕೊಡಗಿನ(Kodagu) ವೀರ ಕಲಿ ‘ಫೀಲ್ಡ್ ಮಾರ್ಷಲ್ ಕಾರ್ಯಪ್ಪ’(Field Marshall Cariappa) ಹೆಸರಲ್ಲಿ ‘ಕ್ರೀಡಾ ವಿಶ್ವವಿದ್ಯಾಲಯದ’ ಸ್ಥಾಪನೆಯ ಆಶ್ವಾಸನೆ ಸಿಕ್ಕಿತ್ತು 2018 ರಲ್ಲಿ. ಭರವಸೆ ಇಂದಿಗೂ ಕೇವಲ ಭರವಸೆಯಾಗಿಯೇ ಉಳಿದಿದೆ.

ಕೊಡಗಿನ ಕ್ರೀಡಾ ಕಲಿಗಳ ಕನಸು ಕನಸಾಗಿಯೇ ಇದೆ ಯಾಕೆ? ಎಂದು ರಾಜ್ಯ ಕಾಂಗ್ರೆಸ್(State Congress) ಪ್ರಧಾನಿ ಮೋದಿಯವರ ವಿರುದ್ದ ವಾಗ್ದಾಳಿ ನಡೆಸಿದೆ. ಈ ಕುರಿತು ಟ್ವೀಟ್(Tweet) ಮೂಲಕ ವಾಗ್ದಾಳಿ ನಡೆಸಿರುವ ಕಾಂಗ್ರೆಸ್(Congress),
2018ರ ಆಶ್ವಾಸನೆ ಬೆಂಗಳೂರಿನಂತೆ(Bengaluru) ರಾಜ್ಯದ ಐದು ನಗರಗಳಲ್ಲಿ ಸ್ಟಾರ್ಟ್ ಅಪ್ ಹಬ್ ನಿರ್ಮಾಣ ಇದರಿಂದ ಯುವಜನತೆಗೆ ಭರಪೂರ ಉದ್ಯೋಗಾವಕಾಶ 2022 ನಿರ್ಮಾಣಗೊಂಡ ಸ್ಟಾರ್ಟ್ ಅಪ್ ಹಬ್ ಸಂಖ್ಯೆ ಸೊನ್ನೆ! ಮೋದಿ ಮೋಸದಿಂದಾಗಿ ‘ಸ್ಟಾರ್ಟ್’ ಆಗದ ಸ್ಟಾರ್ಟ್ ಅಪ್ ಹಬ್ ಗಳು ಎಂದು ಟೀಕಿಸಿದೆ.

ಮೋದಿ ಬೆಂಗಳೂರಿಗರಿಗೆ ‘ಕೆಂಪೇಗೌಡರ’ ಬೆಂಗಳೂರನ್ನು ಪುನಃ ಸೃಷ್ಟಿಸಿ ಕೊಡುವುದಾಗಿ 2018 ರಲ್ಲಿ ಆಶ್ವಾಸನೆ ನೀಡಿದ್ದರು, 2022 ರಲ್ಲಿ ರಸ್ತೆಗಳು ಪುನಃ ನದಿ, ಕೆರೆ, ಹಳ್ಳ ಕೊಳ್ಳಗಳಾಗಿವೆ. ಮೀನುಗಾರಿಕೆ ಮಾಡಬಹುದು ಬೋಟ್ ನಲ್ಲಿ ಪ್ರಯಾಣಿಸಬಹುದು. ಇದೇನಾ ಕೆಂಪೇಗೌಡರ ಕನಸಿನ ಬೆಂಗಳೂರು?
2022ರ ಒಳಗೆ ಮನೆಯಿಲ್ಲದ ಎಲ್ಲಾ ಬಡವರಿಗೆ ಮನೆ ನೀಡುವುದಾಗಿ ಘೋಷಿಸಿದ್ದಿರಿ, ಈಗಲೂ ಕರ್ನಾಟಕದಲ್ಲಿ ಸರಿ ಸುಮಾರು 18 ಲಕ್ಷ ಕುಟುಂಬಗಳಿಗೆ ಇರಲು ಮನೆಯಿಲ್ಲ. ನಿಮ್ಮ ಶ್ರೀಮಂತ ಸ್ನೇಹಿತರಿಗೆ ಜೇನಿನ ಸವಿ ನೀಡಿದ್ದೀರಿ. ಬಡವರ ಮೂಗಿಗೆ ಮಾತ್ರ ತುಪ್ಪ ಸವರಿದ್ದೀರಿ.

ಬಡವರ ಕಾಳಜಿ ಮತ ಗಳಿಕೆಯ ತನಕ ಮಾತ್ರವೇ? ಬಡವರಿಗೇಕೆ ಈ ಮೋಸ? ಮೋದಿ ಆಶ್ವಾಸನೆಗಳು ಕೇಳಲು ಕರ್ಣಾನಂದ, ಮೋದಿ ಮಾಡುವ ದ್ರೋಹಗಳಿಂದ ಅಭಿವೃದ್ದಿಯೇ ಮಂದ. ಕರ್ನಾಟಕವನ್ನು ಸಂಪೂರ್ಣ ಅಭಿವೃದ್ಧಿ ಮಾಡುತ್ತೇವೆ ಎಂದಿದ್ದರು. ಆದರೆ ಈಗ ರಾಜ್ಯದಲ್ಲಿ ವೇಗದ ಭ್ರಷ್ಟಾಚಾರ, ಸಂಪೂರ್ಣ ಭ್ರಷ್ಟಾಚಾರ ಎನ್ನುವಂತಾಗಿದೆ.
ಮೋದಿ ಮೋಸಕ್ಕೆ ರಾಜ್ಯದ ಜನತೆ ಎಂದೂ ಕ್ಷಮಿಸಲಾರರು ಎಂದಿದೆ. ಮೋದಿ ಹೇಳಿದ್ದು, ರೈತರಿಗೆ ಆಪರೇಷನ್ ಗ್ರೀನ್ ಯೋಜನೆ ರೈತರ ಆದಾಯ ಡಬಲ್. ಮೋದಿ ಮಾಡಿದ್ದು, ಆಪರೇಷನ್ ಕಮಲದ ಸರ್ಕಾರ, ರೈತರ ಸಂಕಷ್ಟ ಡಬಲ್, ಕೃಷಿ ಖರ್ಚು ಡಬಲ್, ಕೃಷಿ ಯಂತ್ರಗಳ ಮೇಲೆ GST ಹೊರೆ, ಗೊಬ್ಬರದ ಬೆಲೆ ಡಬಲ್ ಎಂದಿ ವಾಗ್ದಾಳಿ ನಡೆಸಿದೆ.

ಮೋದಿ ಮೋಸಕ್ಕೆ ಎಣೆಯಿಲ್ಲ, ರೈತರಿಗೆ ಬದುಕಿಲ್ಲ. ಈ ದ್ರೋಹವೆಸಗಿದ್ದೇಕೆ?. ಮೋದಿ ರೈಲಿಗೆ ಹಳಿ ಇಲ್ಲ, ಸಬ್ ಅರ್ಬನ್ ರೈಲು ಬರಲೇ ಇಲ್ಲ. ಬೆಂಗಳೂರು ಸಬ್ ಅರ್ಬನ್ ರೈಲಿಗೆ 2018 ರಲ್ಲಿ 17 ಸಾವಿರ ಕೋಟಿ ಕೊಡುತ್ತೇನೆ ಎಂದಿದ್ದಿರಿ, ಇದುವರೆಗೂ ಕೊಟ್ಟಿದ್ದು, 450 ಕೋಟಿ ಮಾತ್ರ. ಮಾತಿನ ರೈಲು ಕೃತಿಯ ರೈಲು ಆಗಲಿಲ್ಲ! ಮೋದಿ ಮೋಸದ ಬತ್ತಳಿಕೆಯಲ್ಲಿ ಇನ್ನೆಷ್ಟು ದ್ರೋಹದ ಬಾಣಗಳಿವೆ ಎಂದು ವ್ಯಂಗ್ಯವಾಡಿದೆ.