Visit Channel

ಕಾಂಗ್ರೆಸ್ ಜಾತ್ಯಾತೀತತೆ VS ಜೆಡಿಎಸ್ ಜಾತ್ಯಾತೀತತೆ!

congress

ರಾಜ್ಯದಲ್ಲಿ ರಾಜ್ಯಸಭಾ ಚುನಾವಣೆ(Rajyasabha Election) ತೀವ್ರ ಕುತೂಹಲ ಕೆರಳಿಸಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಜೆಡಿಎಸ್‍ನ ‘ಜಾತ್ಯಾತೀತ’ ನಿಲುವಿಗೆ ಅಗ್ನಿಪರೀಕ್ಷೆ ಒಡ್ಡಿದ್ದರೆ, ಇತ್ತ ಎಚ್‍ಡಿಕೆ(HDK) ಸಿದ್ದರಾಮಯ್ಯನವರ ‘ಓಲೈಕೆ’ ನಿಲುವಿಗೆ ಸವಾಲು ಹಾಕಿದ್ದಾರೆ.

HDK

ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಬೆಂಬಲಿಸುವ ಮೂಲಕ ಜೆಡಿಎಸ್ ತನ್ನ ಜಾತ್ಯಾತೀತ ನಿಲುವನ್ನು ಸ್ಪಷ್ಟಪಡಿಸಬೇಕೆಂದು ಸಿದ್ದರಾಮಯ್ಯ ಬಹಿರಂಗವಾಗಿ ಹೇಳಿದ್ದರೆ, ಜಾತ್ಯಾತೀತ ಪಕ್ಷದ ಉಳಿವಿಗಾಗಿ ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸಬೇಕೆಂದು ಎಚ್‍ಡಿಕೆ ಮನವಿ ಮಾಡಿದ್ದಾರೆ. ಇಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಸ್ವಘೋಷಿತ ಜಾತ್ಯಾತೀತ ಪಕ್ಷಗಳು. ರಾಜಕೀಯವಾಗಿ ‘ಜಾತ್ಯಾತೀತ’ ಎಂಬ ಪದ ಬಹಳ ಸಂಕುಚಿತ ಮನೋಭಾವವನ್ನು ಹೊಂದಿದೆ. ಭಾರತದಲ್ಲಿ ‘ಜಾತ್ಯಾತೀತತೆ’ ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿದೆ.

ಪ್ರಬಲ ಮತಬ್ಯಾಂಕ್ ಸೃಷ್ಟಿಸಲು ಕಾಂಗ್ರೆಸ್ ರೂಪಿಸಿದ ರಾಜಕೀಯ ಕಾರ್ಯತಂತ್ರದ ಭಾಗವಾಗಿ ಭಾರತದಲ್ಲಿ ‘ಜಾತ್ಯಾತೀತತೆ’ ರೂಪಗೊಂಡಿದೆ. ಒಂದು ಸಮುದಾಯಕ್ಕೆ ನಾವು ನೀಡುವ ರಾಜಕೀಯ ಅವಕಾಶಗಳೇ ಜಾತ್ಯಾತೀತತೆ ಎನ್ನುವ ಮನೋಭಾವ ಇಂದಿಗೂ ಭಾರತದಲ್ಲಿದೆ. ಇದು ಕಾಂಗ್ರೆಸ್‍ನ ಪುರಾತನ ಬಳುವಳಿಯಾಗಿದ್ದು, ಇದನ್ನೇ ಪ್ರಾದೇಶಿಕ ಪಕ್ಷಗಳು ಕೂಡಾ ಬಳಸುತ್ತಿವೆ. ಇದಕ್ಕೆ ತದ್ವಿರುದ್ದವಾಗಿ ‘ಕೋಮುವಾದ’ ಎಂಬ ಪದವನ್ನು 1960ರ ನಂತರ ರಾಜಕೀಯದಲ್ಲಿ ಹೆಚ್ಚಾಗಿ ಬಳಸಲಾಯಿತು.

congress

2014 ನಂತರ ‘ಕೋಮುವಾದ’ ಎಂಬುದು ರಾಜಕೀಯ ಭಾಷಣಗಳ ಸಿದ್ದ ಸೂತ್ರವಾಯಿತು. ಸದ್ಯ ರಾಜಕೀಯ ವಿರೋಧಿಗಳ ವಿರುದ್ದ ಸುಲಭವಾಗಿ ಬಳಸಬಹುದಾದ ಅಸ್ತ್ರವಾಗಿ ‘ಕೋಮುವಾದ’ ಪದ ಚಾಲ್ತಿಯಲ್ಲಿದೆ. ಆದರೆ ಭಾರತದ ಪ್ರಜ್ಞಾವಂತ ಮತದಾರರು ಒಲೈಕೆಯ ‘ಜಾತ್ಯಾತೀತ’ವನ್ನು ತಿರಸ್ಕರಿಸುತ್ತಾ, ರಾಷ್ಟ್ರೀಯತೆ ಆಧಾರಿತ ‘ಕೋಮುವಾದ’ಕ್ಕೆ ಬೆಂಬಲ ನೀಡುತ್ತಿದ್ದಾರೆ. ಹೀಗಾಗಿ ರಾಜಕೀಯ ಪರಿಭಾಷೆಯಲ್ಲಿ ಜಾತ್ಯಾತೀತತೆ ಅರ್ಥಹೀನವಾಗುತ್ತಿದ್ದು, ಅದು ಸಾಹಿತ್ಯಿಕವಾಗಿ ಮಾತ್ರ ಮೌಲಿಕವಾಗಲಿದೆ.

ಒಂದು ಸಮುದಾಯಕ್ಕೆ ಟಿಕೆಟ್ ನೀಡುವುದೇ ‘ಜಾತ್ಯಾತೀತತೆ’ ಎನ್ನುವ ಸಿದ್ದರಾಮಯ್ಯನವರ ಮನೋಭಾವ ಸಂಕುಚಿತ ವ್ಯಾಪ್ತಿಯದ್ದು. ಈ ಪದವನ್ನು ಮೂಲಭೂತವಾಗಿ ಸಾಮಾಜಿಕವಾಗಿ ಬಳಕೆ ಮಾಡಬಹುದೇ ಹೊರತು, ರಾಜಕೀಯವಾಗಿ ಇದೊಂದು ಅರ್ಥಹೀನ ಪದವಾಗುತ್ತದೆ.

Latest News

E-Shram Card
ಪ್ರಮುಖ ಸುದ್ದಿ

ಇ-ಶ್ರಮ ಕಾರ್ಡ್ ಉಪಯೋಗದ ಬಗ್ಗೆ ನಿಮಗೆ ತಿಳಿದಿಲ್ಲವೆ ?  

ಅಸಂಘಟಿತ ವಲಯದ ಕಾರ್ಮಿಕರಿಗೆ  ಸಂಪೂರ್ಣವಾಗಿ  ವೃತ್ತಿ ಮಾಹಿತಿ  ಮತ್ತು   ಸರ್ಕಾರದ  ಯೋಜನೆಗಳು  ಕಾರ್ಮಿಕರಿಗೆ ನೇರವಾಗಿ ತಲುಪಿಸುವ ,ಹಾಗೂ ದತ್ತಾಂಶ ಸಂಗ್ರಹಿಸುವ ಉದ್ದೇಶದಿಂದ 26  ಆಗಸ್ಟ್‌  2021 ರಂದು  ಕೇಂದ್ರ ಸರ್ಕಾರವು ಈ ಯೋಜನೆಯನ್ನು  ಜಾರಿಗೊಳಿಸಿದೆ. 

inflation
ದೇಶ-ವಿದೇಶ

ಅಗತ್ಯ ವಸ್ತುಗಳ ಬೆಲೆ ತಗ್ಗಿದ ಪರಿಣಾಮ: ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.6.7 ಇಳಿಕೆ ನಿರೀಕ್ಷೆ

ಅಂದು 100 ರೂಪಾಯಿಗೆ ಖರೀದಿಸುವ ಸಾಮಾನು ಈಗ 500 ಕೊಟ್ಟರು ಬರುವುದಿಲ್ಲ. ಕಾರಣ ಹಣದ ಮೌಲ್ಯ ಕಡಿಮೆಯಾಗಿದೆ, ಈ ಹಣದ ಮೌಲ್ಯ ಕಡಿಮೆಯಾಗಿರುವುದನ್ನೇ ನಾವು ಹಣದುಬ್ಬರ ಎನ್ನುತ್ತೇವೆ.