ಟ್ವೀಟ್ರ್ನಲ್ಲಿ ಕಾಂಗ್ರೆಸ್(Congress) ಮತ್ತು ಬಿಜೆಪಿ(BJP) ನಡುವೆ ದಲಿತರ ವಿಚಾರವಾಗಿ ಭಾರೀ ವಾಗ್ವಾದ ನಡೆಯುತ್ತಿದೆ. ಎರಡು ಪಕ್ಷಗಳು ದಲಿತರ ವಿಚಾರವಾಗಿ ಪರಸ್ಪರ ಟೀಕಿಸುತ್ತಿವೆ.
ಬಿಜೆಪಿ ಮಾಜಿ ಸಿಎಂ ಸಿದ್ದರಾಮಯ್ಯ(Siddarmaiah) ವಿರುದ್ದ ವಾಗ್ದಾಳಿ ನಡೆಸಿದ್ದರೆ, ಇತ್ತ ಕಾಂಗ್ರೆಸ್ ಬಿಜೆಪಿ ಪಕ್ಷದಲ್ಲಿ ದಲಿತ ನಾಯಕರನ್ನು ಹತ್ತಿಕ್ಕಲಾಗುತ್ತಿದೆ. ಸಂಘಪರಿವಾರದ ಕುತಂತ್ರದಿಂದ ಬಿಜೆಪಿಯಲ್ಲಿ ದಲಿತ ನಾಯಕರಿಗೆ ನ್ಯಾಯ ಸಿಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದೆ. ಇದರ ವಿವರ ಇಲ್ಲಿದೆ ನೋಡಿ.
ಕಾಂಗ್ರೆಸ್ ಬಿಟ್ಟ ಟ್ವೀಟ್ ಬಾಣ : ಏಪ್ರಿಲ್ 1 2020 ರಿಂದ ಮಾರ್ಚ್ 31 2021 ರವರೆಗೆ ನಿಮ್ಮ ಆಡಳಿತದ 1 ವರ್ಷದ ಅವಧಿಯಲ್ಲಿ ದಲಿತರ ಮೇಲೆ 2327 ಪ್ರಕರಣ ದಾಖಲಾಗಿವೆ. ಇದರಲ್ಲಿ 2775 ಜನ ಅರೆಸ್ಟ್ ಆಗಿ 2945 ಚಾರ್ಜ್ ಶೀಟ್ ದಾಖಲಾಗಿದ್ದರೂ ಶಿಕ್ಷೆ ದೊರೆತಿದ್ದು ಕೇವಲ 50 ಮಂದಿಗೆ ದಲಿತರಿಗೆ ನ್ಯಾಯ ಒದಗಿಸಲಾಗದವರು ದಲಿತಪರ ಎನ್ನುವುದು ಹಾಸ್ಯಾಸ್ಪದವೇ ಸರಿ.
ಪರಿಶಿಷ್ಟ ಪಂಗಡದ ಶ್ರೀರಾಮುಲು ಅವರನ್ನು ಉಪಮುಖ್ಯಮಂತ್ರಿ ಮಾಡುತ್ತೇವೆಂದು ಹೇಳಿ ಪರಿಶಿಷ್ಟ ಪಂಗಡದ ವೋಟು ಗಿಟ್ಟಿಸಿಕೊಂಡು ಇದ್ದ ಆರೋಗ್ಯ ಇಲಾಖೆಯನ್ನು ಕಿತ್ತುಕೊಂಡು ಕೈ ಎತ್ತಿದವರು ನೀವು.
ಸಂಚುಗಾರಸಂಘಪರಿವಾರಮೋಸಗಾರಬಿಜೆಪಿ. ಅರೆರೆ! ನಿಮ್ಮ ಪಕ್ಷದ ಕೇಂದ್ರ ಸಚಿವ ನಾರಾಯಣಸ್ವಾಮಿಯವರು ಮೊನ್ನೆ ತಾನೆ ದಲಿತ ಸಿಎಂ ವಿಚಾರ ಹುಚ್ಚುತನದ ಹೇಳಿಕೆ ಎಂದಿದ್ದಾರೆ. ನಿಮ್ಮ ಕೇಂದ್ರ ಸಚಿವರಿಗೆ ಮನವರಿಕೆಯಾದಂತಿದೆ ಬಿಜೆಪಿಯಲ್ಲಿರುವ ಮೀರ್ ಸಾದಿಕ್ಗಳು ದಲಿತ ಸಿಎಂ ಮಾಡಲು ಬಿಡುವುದಿಲ್ಲ ಅಂತ.
ನಿಮ್ಮಲ್ಲಿರುವ ದಲಿತ ನಾಯಕರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿ ಮೊದಲು.” ಎಂದು ಕಾಂಗ್ರೆಸ್ ಬಿಜೆಪಿಯನ್ನು ಟೀಕಿಸಿದೆ.