New Delhi : ಮಣಿಪುರ ವಿಷಯಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಲು ಕಾಂಗ್ರೆಸ್ (Congress BRS vs BJP) ಮತ್ತು

ಭಾರತ್ ರಾಷ್ಟ್ರ ಸಮಿತಿ (BRS) ನೋಟಿಸ್ಗಳನ್ನು(Congress BRS vs BJP) ಸಲ್ಲಿಸಿವೆ.
ಲೋಕಸಭೆಯಲ್ಲಿ ಕಾಂಗ್ರೆಸ್ನ ಉಪ ನಾಯಕ ಗೌರವ್ ಗೊಗೊಯ್ ಅವರು ಲೋಕಸಭೆಯ ಪ್ರಧಾನ ಕಾರ್ಯದರ್ಶಿ ಕಚೇರಿಗೆ ನೋಟಿಸ್ ಸಲ್ಲಿಸಿದ್ದಾರೆ. ಇನ್ನೊಂದೆಡೆ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಪ್ರತ್ಯೇಕ
ನೋಟಿಸ್ ಅನ್ನು ತೆಲಂಗಾಣದ ಭಾರತ್ ರಾಷ್ಟ್ರ ಸಮಿತಿ (ಬಿಆರ್ಎಸ್) ಪಕ್ಷದ ಪರವಾಗಿ ಸಂಸದ ನಾಗೇಶ್ವರ ರಾವ್ ಅವರು ಸ್ಪೀಕರ್ಗೆ ಸಲ್ಲಿಸಿದ್ದಾರೆ.
ಮಣಿಪುರ ಹಿಂಸಾಚಾರವನ್ನೇ ಮುಂದಿಟ್ಟುಕೊಂಡು ಕೇಂದ್ರ ಸರ್ಕಾರವನ್ನು ಹಣಿಯಲು ವಿಪಕ್ಷಗಳು ಸಿದ್ದತೆ ಮಾಡಿಕೊಂಡಿವೆ. ಈಗಾಗಲೇ ಇಂಡಿಯಾ ಭಾಗವಾಗಿರುವ ಸುಮಾರು 21 ಪ್ರಾದೇಶಿಕ ಪಕ್ಷಗಳ ಜೊತೆಗೆ
ಇನ್ನು ಕೆಲವು ಪಕ್ಷಗಳು ಮಣಿಪುರ ವಿಷಯದಲ್ಲಿ ಕಾಂಗ್ರೆಸ್ಗೆ ಸಾಥ್ ನೀಡುವ ಸಾಧ್ಯತೆಗಳಿವೆ.

ಕೇಂದ್ರ ಸರ್ಕಾರದ ವಿರುದ್ದ ವಿಪಕ್ಷಗಳು ಮಂಡಿಸುವ ಅವಿಶ್ವಾಸ ನಿರ್ಣಯಕ್ಕೆ ಸದ್ಯಕ್ಕೆ ಯಾವುದೇ ಮಹತ್ವವಿಲ್ಲ. ಏಕೆಂದರೆ ಲೋಕಸಭೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತವನ್ನು ಹೊಂದಿದೆ. ಇದರೊಂದಿಗೆ ಬಿಜೆಪಿ ಕೆಲ
ಮಿತ್ರಪಕ್ಷಗಳ ಬೆಂಬಲವಿದ್ದು, ಲೋಕಸಭೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ 335 ಸದಸ್ಯ ಬಲವನ್ನು ಹೊಂದಿದೆ. ಹೀಗಾಗಿ ಸರ್ಕಾರ ಸದೃಢವಾಗಿರಲಿದೆ.
ಇದನ್ನು ಓದಿ: ನಾಳೆ ಜುಲೈ 26ರಂದು ನಡೆಯುವ 24ನೇ ಕಾರ್ಗಿಲ್ ವಿಜಯೋತ್ಸವಕ್ಕೆ ಭಾರತ ಹೇಗೆ ಸಿದ್ಧತೆ ನಡೆಸಿದೆ : ಹೇಗಿರಲಿದೆ ಈ ಬಾರಿ ಸಂಭ್ರಮ?
ಇನ್ನು ಮಣಿಪುರ ಹಿಂಸಾಚಾರ ವಿಷಯಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಅಮಿತ್ ಶಾ ಲೋಕಸಭೆಗೆ ವಿವರಣೆ ನೀಡಲು ಮುಂದಾಗಿದ್ದ ವೇಳೆ ವಿಪಕ್ಷಗಳ ಸದಸ್ಯರು ಭಾರೀ ಗದ್ದಲು ಉಂಟು ಮಾಡಿದ್ದು,
ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಮಿತ್ ಶಾ ಅವರು, ಈಗ ಯಾರೂ ಘೋಷಣೆಗಳನ್ನು ಕೂಗುತ್ತಿದ್ದಾರೆ, ಅವರಿಗೆ ಸರ್ಕಾರ ಅಥವಾ ಸಹಕಾರದಲ್ಲಿ ಆಸಕ್ತಿ ಇಲ್ಲ. ಅವರಿಗೆ ದಲಿತರ ಬಗ್ಗೆ ಅಥವಾ ಮಹಿಳೆಯರ
ಕಲ್ಯಾಣದ ಬಗ್ಗೆ ಆಸಕ್ತಿ ಇಲ್ಲ. ನಾನು ಅದನ್ನು ಪುನರುಚ್ಚರಿಸಲು ಬಯಸುತ್ತೇನೆ. ಯಾವುದೇ ರೀತಿಯ ಸುದೀರ್ಘ ಚರ್ಚೆಗೆ ನಾವು ಸಿದ್ಧರಿದ್ದೇವೆ. ಈ ಕುರಿತು ನಾನು ಇಂದು ಉಭಯ ಸದನಗಳ ನಾಯಕರಿಗೆ ಪತ್ರ
ಬರೆದಿದ್ದೇನೆ ಎಂದಿದ್ದಾರೆ. ಸಂಸತ್ತಿನ ಮುಂಗಾರು ಅಧಿವೇಶನ ಜುಲೈ 20 ರಂದು ಪ್ರಾರಂಭವಾಗಿದ್ದು, ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ವಿಡಿಯೋ ವೈರಲ್
ಆಗಿರುವ ಹಿನ್ನೆಲೆಯಲ್ಲಿ ಸಂಸತ್ತಿನಲ್ಲಿ ತೀವ್ರ ಪ್ರತಿಭಟನೆ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆ ಮತ್ತು ಮಣಿಪುರದ ಹಿಂಸಾಚಾರದ ಬಗ್ಗೆ ಚರ್ಚೆಗೆ ಒತ್ತಾಯಿಸಿ ವಿರೋಧ ಪಕ್ಷಗಳಿಂದ
ತೀವ್ರ ಪ್ರತಿಭಟನೆಗಳನ್ನು ಕಂಡು ಬರುತ್ತಿದೆ.