Life Threat to Rahul Gandhi: Congress filed a Complaint Against BJP
New Delhi: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ (Rahul Gandhi) ಜೀವ ಬೆದರಿಕೆ ಹಾಗೂ ದೈಹಿಕ ಹಾನಿಯೆಸಗುವ ಬೆದರಿಕೆ ಹಾಕುತ್ತಿರುವ ಆರೋಪದ ಹಿನ್ನೆಲೆ ಬಿಜೆಪಿ ನಾಯಕರು ಹಾಗೂ ಅದರ ಮೈತ್ರಿ ಪಕ್ಷಗಳ ನಾಯಕರ ವಿರುದ್ಧ ಹೊಸದಿಲ್ಲಿಯ ತುಘಲಕ್ ರಸ್ತೆಯ ಪೊಲೀಸ್ ಠಾಣೆಯಲ್ಲಿ ಕಾಂಗ್ರೆಸ್ ನಾಯಕ ಅಜಯ್ ಮಾಕೆನ್ (Ajay Maken) ದೂರು ದಾಖಲಿಸಿದ್ದಾರೆ.
ಸೆ.11, 2024ರಂದು ನಡೆದ ಕಾರ್ಯಕ್ರಮದಲ್ಲಿ ಬಿಜೆಪಿಯ (BJP) ನಾಯಕ ಮಾರ್ವಾ ಅವರು, ರಾಹುಲ್ ಗಾಂಧಿ ಅವರಿಗೆ ಬಹಿರಂಗವಾಗಿ ಜೀವ ಬೆದರಿಕೆ ಒಡ್ಡಿದ್ದು, “ರಾಹುಲ್ ಗಾಂಧಿ ಸರಿಯಾಗಿ ವರ್ತಿಸು, ಇಲ್ಲವಾದರೆ ನಿನ್ನ ಅಜ್ಜಿಗೆ ಆದ ಗತಿಯೇ ನಿನಗೂ ಆಗುತ್ತದೆ” ಎಂದು ಬೆದರಿಕೆ ಒಡ್ಡಿದ್ದರು ಎಂದು ತಮ್ಮ ದೂರಿನಲ್ಲಿ ಹೇಳಿದ್ದಾರೆ.
ಸೆಪ್ಟೆಂಬರ್ (September) 16ರಂದು ಸಾರ್ವಜನಿಕವಾಗಿ ರಾಹುಲ್ ಗಾಂಧಿಯವರ ನಾಲಿಗೆ ಕತ್ತರಿಸುವವರಿಗೆ ರೂ.11 ಲಕ್ಷ ಬಹುಮಾನ ನೀಡುವುದಾಗಿ ಶಿವಸೇನೆಯ ಶಾಸಕ ಸಂಜಯ್ ಗಾಯಕ್ವಾಡ್ (Sanjay Gaikwad) ಅವರು ಘೋಷಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದರೊಂದಿಗೆ, ಸೆಪ್ಟೆಂಬರ್ 15, 2024ರಂದು ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ ರವನೀತ್ (Ravaneeth) ಬಿಟ್ಟು, ರಾಹುಲ್ ಗಾಂಧಿ ಅವರನ್ನು ನಂ. 1 ಭಯೋತ್ಪಾದಕ ಎಂದು ಜರಿದಿದ್ದರು” ಎಂದೂ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ. ಇನ್ನೂ ಹಲವಾರು ಬಿಜೆಪಿ ನಾಯಕರು ರಾಹುಲ್ ಗಾಂಧಿಗೆ ಜೀವ ಬೆದರಿಕೆ ಒಡ್ಡುವಂತಹ ಹೇಳಿಕೆ ನೀಡುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಬೆದರಿಕೆ ಒಡ್ಡಿರುವ ಎಲ್ಲರಿಗೂ ಆಡಳಿತಾರೂಢ ಬಿಜೆಪಿಯೊಂದಿಗೆ ಸಾಮಾನ್ಯ ಸಂಬಂಧವಿದ್ದು, ಪರಿಚಿತ ಮತ್ತು ಅಪರಿಚಿತ ವ್ಯಕ್ತಿಗಳೊಂದಿಗೆ ಇಂತಹ ಕೃತ್ಯ ನಡೆಸಲು ವ್ಯವಸ್ಥಿತಿ ಪಿತೂರಿಯನ್ನು ನಡೆಸುತ್ತಿದ್ದಾರೆ. ಹೀಗಾಗಿ ದೂರಿನಲ್ಲಿ ಉಲ್ಲೇಖಿಸಿರುವ ವ್ಯಕ್ತಿಗಳು ಹಾಗೂ ಅವರ ಸಹಚರರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 351, 352, 353 ಹಾಗೂ 61ರ ಅಡಿ ಶೀಘ್ರ ಕ್ರಮ ಕೈಗೊಳ್ಳಬೇಕು” ಎಂದು ಅಜಯ್ ಮಾಕೇನ್ ಮನವಿ ಮಾಡಿದ್ದಾರೆ.
Congress Filed a Complaint Against BJP Viral News
New Delhi: Congress leader Ajay Maken has filed a complaint against the BJP leaders and the leaders of its alliance parties at the Tughlaq Road police station in New Delhi for allegedly threatening life and bodily harm to Congress leader Rahul Gandhi
In the event held on September 11, 2024, BJP leader Marwa has stated in his complaint that Rahul Gandhi openly threatened his life and said, “Rahul Gandhi behave properly, otherwise what happened to your grandmother will happen to you.”
In the complaint, Shiv Sena MLA Sanjay Gaikwad has announced that he will give a reward of Rs.11 lakh to those who publicly cut Rahul Gandhi’s tongue on September 16.
Along with this, Ravaneeth, Minister of State for Railways, who spoke to the media on September 15, 2024, left Rahul Gandhi as the no. 1 was accused as a terrorist” in his complaint. Several more BJP leaders are making statements threatening Rahul Gandhi’s life.
In this background, all those who have been threatened have a common connection with the ruling BJP and are systematically conspiring with known and unknown persons to carry out such an act. Thus against the persons mentioned in the complaint and their accomplices Ajay Maken requested that action be taken under Sections 351, 352, 353 and 61 of the Indian Penal Code.