Bengaluru : ರಾಜ್ಯದಲ್ಲಿ ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಮತದಾರರನ್ನು ಓಲೈಸಲು ಲಂಚದ ಆಮಿಷ ಒಡ್ಡಿದ ಆರೋಪದಲ್ಲಿ ಬಿಜೆಪಿ ರಾಷ್ಟ್ರೀಯ (Congress filed a complaint) ಅಧ್ಯಕ್ಷ ಜೆ.ಪಿ ನಡ್ಡಾ(JP Nadda),
ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಮತ್ತು ಶಾಸಕ ರಮೇಶ್ ಜಾರಕಿಹೊಳಿ(Ramesh Jarakiholi) ವಿರುದ್ಧ ರಾಜ್ಯ ಕಾಂಗ್ರೆಸ್ ಬುಧವಾರ ಪೊಲೀಸರಿಗೆ ದೂರು ನೀಡಿದೆ.

ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಮತದಾರರನ್ನು ಓಲೈಸಲು ಲಂಚದ ಆಮಿಷ ಒಡ್ಡಿದ ಆರೋಪದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ,
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ಕರ್ನಾಟಕ ಕಾಂಗ್ರೆಸ್ ಬುಧವಾರ ಪೊಲೀಸರಿಗೆ ದೂರು ನೀಡಿದ್ದು, ದೂರಿಗೆ ಸಹಿ ಹಾಕಿರುವ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ ಶಿವಕುಮಾರ್(DK Shiva Kumar),
ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ(Siddaramaiah) ಅವರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಪೊಲೀಸರಿಗೆ ಮನವಿ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಬಹಿಷ್ಕಾರ ಕೂಗುವವರೇ ಬಾಯ್ಮುಚ್ಚಿ!, ಕಿಂಗ್ ಖಾನ್ ಇಸ್ ಬ್ಯಾಕ್ : ಪ್ರಕಾಶ್ ರಾಜ್
ಮೇ ತಿಂಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಗೋಕಾಕ್ ಬಿಜೆಪಿ ಶಾಸಕ ಜಾರಕಿಹೊಳಿ ಅವರು ಪ್ರತಿ ಮತಕ್ಕೆ 6,000 ರೂ. ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ದೂರು ನೀಡಲಾಗಿದೆ.
ಲೈಂಗಿಕ ಹಗರಣದಲ್ಲಿ ಭಾಗಿಯಾಗಿರುವ ಆರೋಪದ ಹಿನ್ನೆಲೆಯಲ್ಲಿ 2021 ರಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯಿಸಲ್ಪಟ್ಟ ರಮೇಶ್ ಜಾರಕಿಹೊಳಿ, ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ರ‍್ಯಾಲಿಯಲ್ಲಿ ಭಾಗವಹಿಸಿದ ವೇಳೆ,
ಹಾಲಿ ಕಾಂಗ್ರೆಸ್ ಶಾಸಕರೊಬ್ಬರು ಮತದಾರರಿಗೆ 3,000 ರೂ.ವರೆಗೆ ಉಡುಗೊರೆ ಮತ್ತು ನಗದು ನೀಡಿದರೆ ಮತದಾರರಿಗೆ 6,000 ರೂ. ನೀಡುವುದಾಗಿ ಹೇಳಿದ್ದರು.
ಆದ್ರೆ, ರಾಜ್ಯ ಬಿಜೆಪಿ ಘಟಕವು ಶಾಸಕ ರಮೇಶ್ ಜಾರಕಿಹೊಳಿ ಹೇಳಿಕೆಯಿಂದ ಸದ್ಯ ದೂರ ಉಳಿದಿದೆ.

ಜನವರಿ 22, 2023 ರಂದು, ಬಿಜೆಪಿಯ ಹಿರಿಯ ನಾಯಕ, ಮಾಜಿ ಕ್ಯಾಬಿನೆಟ್ ಸಚಿವ ಮತ್ತು ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಕರ್ನಾಟಕದ ಬೆಳಗಾವಿಯಲ್ಲಿ ಮತದಾರರಿಗೆ 6,000 ರೂ. ನೀಡುವುದಾಗಿ ಘೋಷಿಸಿದ್ದಾರೆ.
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಪ್ರತಿ ಮತದಾರರಿಗೆ ಬಿಜೆಪಿ ಪ್ರತಿ ಮತಕ್ಕೆ 6,000 ರೂ. ನೀಡಲಿದೆ ಎಂದು ಹೇಳಿರುವುದು ಕ್ಯಾಮರಾದಲ್ಲಿ(Camera) ಸೆರೆಯಾಗಿದೆ ಎಂದು ದೂರಿನಲ್ಲಿ ಕಾಂಗ್ರೆಸ್(Congress) ತಿಳಿಸಿದ್ದು,
ವಿಡಿಯೊ ದೃಶ್ಯಾವಳಿಯ ಪ್ರತಿಯನ್ನು ದೂರಿಗೆ ಸಾಕ್ಷಿಯಾಗಿ ಲಗತ್ತಿಸಲಾಗಿದ್ದು, ರಮೇಶ್ ಜಾರಕಿಹೊಳಿ ಅವರು ಮುಂದಿನ ಚುನಾವಣೆಯಲ್ಲಿ ಮತ ಯಾಚನೆ ಮಾಡುವ
ಪ್ರತಿಯೊಬ್ಬ ಮತದಾರರಿಗೆ ಪ್ರತಿ ಮತಕ್ಕೆ 6,000 ರೂ. ನಗದು ನೀಡುವುದನ್ನು ವೀಡಿಯೊದಲ್ಲಿ ಸ್ಪಷ್ಟವಾಗಿ ತೋರಿಸಲಾಗಿದೆ ಮತ್ತು ಇದನ್ನು ಎಲ್ಲರೂ ನೋಡಿ ತಿಳಿಯಬಹುದಾಗಿದೆ ಎಂದು ಕಾಂಗ್ರೆಸ್ ಉಲ್ಲೇಖಿಸಿದೆ.
ಇದನ್ನೂ ಓದಿ: 3,455.39 ಕೋಟಿ ರೂ ಮೌಲ್ಯದ 59 ಕೈಗಾರಿಕಾ ಯೋಜನೆಗಳಿಗೆ ಕರ್ನಾಟಕ ಒಪ್ಪಿಗೆ ನೀಡಿದೆ : ಮುರುಗೇಶ್ ನಿರಾಣಿ
ಈ ಬಗ್ಗೆ ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ಪಕ್ಷದ ಇತರ ಮುಖಂಡರೊಂದಿಗೆ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದು ಸಿಎಂ ಹಾಗೂ ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಬೊಮ್ಮಾಯಿ, ಜೆ.ಪಿ ನಡ್ಡಾ ಮತ್ತು ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್(Nalin Kumar Kateel)
ಅವರ ಮೌನ ಒಪ್ಪಿಗೆಯೊಂದಿಗೆ ಬಿಜೆಪಿಯ ಉನ್ನತ ಮಟ್ಟದಲ್ಲಿ ನಡೆಸಲಾದ ಸಂಯೋಜಿತ ಷಡ್ಯಂತ್ರದ ಭಾಗವಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ನಿಸ್ಸಂಶಯವಾಗಿ, ಮತದಾರರಿಗೆ ಲಂಚ ನೀಡಲು ಈ ಸಂಘಟಿತ ವಿನ್ಯಾಸದ ಹಿಂದೆ ಬಿಜೆಪಿ ನಾಯಕರ ಗುಂಪಿದೆ. ಇದು ಪ್ರಜಾಪ್ರಭುತ್ವವನ್ನು ಹೈಜಾಕ್ ಮಾಡುವ ಅಬ್ಬರದ ಮತ್ತು ಲಜ್ಜೆಗೆಟ್ಟ ಪ್ರಯತ್ನವಾಗಿದೆ!

ಇದು ಭಾರತೀಯ ದಂಡ ಸಂಹಿತೆ 1860ರ 107, 120 ಬಿ, 506ರ 171 ಬಿ ಸೆಕ್ಷನ್‌ಗಳ ಅಡಿಯಲ್ಲಿ ಸ್ಪಷ್ಟ ಕ್ರಿಮಿನಲ್ ಅಪರಾಧಗಳಾಗಿವೆ. 1951 ರ ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 123(1) ರ ನಿಬಂಧನೆಗಳ ಪ್ರಕಾರ ಕೇಸ್ ದಾಖಲಿಸಿಕೊಳ್ಳಲಾಗಿದೆ.
ಇದು ಮತದಾರರಿಗೆ ಲಂಚದ ಕೊಡುಗೆಯಾಗಿದೆ ಎಂದು ಪ್ರಕರಣ ಹೇಳಿದೆ.ಕರ್ನಾಟಕದಲ್ಲಿ(Karnataka) ಸುಮಾರು ಐದು ಕೋಟಿ ಮತದಾರರಿದ್ದಾರೆ ಎಂದಿರುವ ಕಾಂಗ್ರೆಸ್,
ಚುನಾವಣೆಯಲ್ಲಿ ಗೆಲ್ಲಲು 30 ಸಾವಿರ ಕೋಟಿ ರೂ. ಹಂಚಿ ಮತದಾರರನ್ನು ಓಲೈಸಲು ಬಿಜೆಪಿ ನಾಯಕರು ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಆರೋಪಿಸಿದೆ.
ಮತದಾರರಿಗೆ ಲಂಚ ನೀಡಿ ಚುನಾವಣೆಯನ್ನು ಹೈಜಾಕ್ ಮಾಡಲು ಬಿಜೆಪಿ(BJP) ನಾಯಕರು 30,000 ಕೋಟಿ ರೂ.ಗೂ ಹೆಚ್ಚು ಅಕ್ರಮ ಹಣ ಸಂಪಾದಿಸಿದ್ದಾರೆ ಎಂಬುದು ಇದರಿಂದ ತಿಳಿಯುತ್ತದ ಎಂದು ಬಿಜೆಪಿ ವಿರುದ್ಧ ಆರೋಪಿಸಿದೆ.