- ಮತ್ತೊಂದು ಭ್ರಷ್ಟಾಚಾರಕ್ಕೆ (corruption) ಮುಂದಾಗಿರುವ ರಾಜ್ಯ ಸರ್ಕಾರ (State Government) ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (B.Y. Vijayendra) ಆರೋಪ
- ಕೆಪಿಟಿಸಿಎಲ್ನ (KPTCL) ಸಾವಿರಾರು ಕೋಟಿ ರೂ.ಆಸ್ತಿಯನ್ನು ಕಡಿಮೆ ಲೆಕ್ಕ ತೋರಿಸಿ ಮಾರಾಟ ಮಾಡಿ, (Congress Govt will sell KPTCL) ದುಡ್ಡು ಹೊಡೆಯಲು ಮುಂದಾಗಿದೆ.
- ಬೆದರುಗೊಂಬೆಯಾದ ಜಾತಿ ಗಣತಿ
Yallapur: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ (Congress Government) ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ಆಸ್ತಿಯ ಮೌಲ್ಯ ಕುಗ್ಗಿಸಿ ಮಾರಾಟ ಮಾಡಲು ಹೊರಡುವ ಮೂಲಕ ಮತ್ತೊಂದು ಭ್ರಷ್ಟಾಚಾರಕ್ಕೆ ಮುಂದಾಗಿದೆ (Prone to corruption) ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರದಲ್ಲಿ (Yellapur) ಶುಕ್ರವಾರ ಬಿಜೆಪಿಯ ಜನಾಕ್ರೋಶ ಯಾತ್ರೆ ಉದ್ಘಾಟಿಸಿ ಮಾತನಾಡಿದ ವಿಜಯೇಂದ್ರ, ಕೆಪಿಟಿಸಿಎಲ್ನ ಸಾವಿರಾರು ಕೋಟಿ (Thousands of crores) ರೂ.ಆಸ್ತಿಯನ್ನು ಕಡಿಮೆ ಲೆಕ್ಕ ತೋರಿಸಿ ಮಾರಾಟ ಮಾಡಿ, ದುಡ್ಡು ಹೊಡೆಯಲು ಮುಂದಾಗಿದೆ ಎಂದು ಗಂಭೀರ ಆರೋಪ (Serious charge) ಮಾಡಿದ್ದಾರೆ.
ಈಗಾಗಲೇ ಈ ಸರ್ಕಾರ ಗ್ಯಾರಂಟಿ ಹೆಸರಿನಲ್ಲಿ ಜನರ ಕಣ್ಣಿಗೆ ಬೂದಿ ಎರಚಿದೆ. ಸಿದ್ಧರಾಮಯ್ಯ (Siddaramaiah) ಅಧಿಕಾರಕ್ಕೆ ಬಂದ ಮೇಲೆ 50ಕ್ಕೂ ಹೆಚ್ಚಿನ ದಿನಬಳಕೆಯ ವಸ್ತುಗಳ ಬೆಲೆ ಏರಿಸಲಾಗಿದೆ (Price has been raised) . ಶಕ್ತಿ ಯೋಜನೆಯ ಮೂಲಕ ಕೆಎಸ್ಆರ್ಟಿಸಿಯನ್ನು (KSRTC) ಸರ್ಕಾರವೇ ದಿವಾಳಿ ಮಾಡಿದ್ದು, ಈಗ ₹6,500 ಕೋಟಿ ಬಾಕಿ ಉಳಿಸಿಕೊಂಡಿದೆ.

ಗ್ರಾಮೀಣ ಭಾಗದಲ್ಲಿ (Rural areas) ಪ್ರಯಾಣಿಸುತ್ತಿದ್ದ ಬಸ್ಗಳನ್ನು ನಿಲ್ಲಿಸಿದ್ದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಎಸ್ಸಿ, ಎಸ್ಟಿ (SC, ST) ಸಮುದಾಯದ 38,500 ಕೋಟಿ ರೂ.ಹಣವನ್ನು ಬೇರೆ ಕಾರ್ಯಕ್ರಮಕ್ಕೆ ಬಳಸಿ, ಅದರಲ್ಲಿಯೂ ಭ್ರಷ್ಟಾಚಾರವೆಸಗಿದೆ (Corruption) ಎಂದು ಆರೋಪಿಸಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ಜಾತಿ ಗಣತಿ ಪ್ರಸ್ತಾಪಿಸಿದ (Caste census proposed) ವಿಜಯೇಂದ್ರ, ಯಾವ್ಯಾವಾಗ ಮುಖ್ಯಮಂತ್ರಿಯ ಕುರ್ಚಿ ಅಲುಗಾಡುತ್ತೋ ಆವಾಗಲೆಲ್ಲಾ ಜಾತಿಗಣತಿ ನೆನಪಾಗುತ್ತದೆ. ಮುಖ್ಯಮಂತ್ರಿಯವರು (Chief Minister) ಜಾತಿ ಗಣತಿಯನ್ನು ಬೆದರುಗೊಂಬೆಯಂತೆ ಬಳಕೆ ಮಾಡುತ್ತಿದ್ದಾರೆ. ಜಾತಿಗಣತಿ ಬಿಡುಗಡೆ ಮಾಡಿ ಆಯಾ ಸಮುದಾಯಗಳಿಗೆ ನ್ಯಾಯ (Justice for communities) ಕೊಡಬೇಕೆಂಬ ಕಳಕಳಿ ಮುಖ್ಯಮಂತ್ರಿಗೆ ಇಲ್ಲ.
ಬೆಲೆ ಏರಿಕೆಯಿಂದ ಜನತೆ ಸರ್ಕಾರಕ್ಕೆ (People to government) ಹಿಡಿಶಾಪ ಹಾಕುತ್ತಿರುವ ಸಂದರ್ಭದಲ್ಲಿ ಜನರ ಗಮನವನ್ನು ಬೇರೆಡೆ ಹೊರಳಿಸಲು ಜಾತಿ ಗಣತಿಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ. ಇನ್ನು ತಮ್ಮ ಕ್ಷೇತ್ರದಲ್ಲೇ ಸಮಾವೇಶ ನಡೆದರೂ, ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್ (BJP MLA Shivaram Hebbar) ಅವರು ಸಮಾವೇಶಕ್ಕೆ ಆಗಮಿಸಲಿಲ್ಲ. ಆದರೆ, ವಿಜಯೇಂದ್ರ (Vijayendra) ಅವರು ತಮ್ಮ ಭಾಷಣದಲ್ಲಿ ಹೆಬ್ಬಾರ್ ಹೆಸರನ್ನು ಪ್ರಸ್ತಾಪಿಸಿದರು.
ಇದನ್ನು ಓದಿ : http://ನೀರಿನ ದರ ಏರಿಕೆಗೆ ಜನಸಾಮಾನ್ಯರಿಂದ , ಕೈಗಾರಿಕೆಗಳಿಂದ ಆಕ್ರೋಶ; ಸರಕಾರಕ್ಕೆ ಹಿಡಿಶಾಪ!
ಹೆಬ್ಬಾರ್ ಅವರು ಈ ಕ್ಷೇತ್ರದಲ್ಲಿ ಯಾವುದಾದರೂ ಅಭಿವೃದ್ಧಿ ಕಾರ್ಯಕ್ರಮಗಳ (Development programs) ಉದ್ಘಾಟನೆ ಮಾಡಿದ್ದರೆ, ಅದು ಯಡಿಯೂರಪ್ಪ ಸರ್ಕಾರ ನೀಡಿದ್ದ ಅನುದಾನದಿಂದ ಮಾತ್ರ. ಮುಂದಿನ ಚುನಾವಣೆಯಲ್ಲಿ ಯಲ್ಲಾಪುರದಲ್ಲಿ (Elections in Yellapur) ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ, ಬಿಜೆಪಿಯ (Congress Govt will sell KPTCL) ಧ್ವಜ ಹಾರಿಸೋಣ ಎಂದು ಹೇಳಿದ್ದಾರೆ.