New Delhi : ಭಾರತ ಐಕ್ಯತಾ ಯಾತ್ರೆ (Bharat Jodo Yatra) 1000 ಕಿಲೋಮೀಟರ್ ನಡಿಗೆಯನ್ನು ಪೂರೈಸಿದೆ. ಸ್ವತಂತ್ರ ಹೋರಾಟದಲ್ಲಿ ಮಹಾತ್ಮ ಗಾಂಧಿಯವರು (Mahatma Gandhi) 1000 ಕಿಲೋಮೀಟರ್ ಪದಯಾತ್ರೆಯನ್ನು ನಡೆಸಿದ್ದರು.

ಅಂದು ಬ್ರಿಟಿಷರಿಂದ (British) ಸ್ವತಂತ್ರಕ್ಕೆ ಯಾತ್ರೆ, ಇಂದು ದ್ವೇಷ, ಸರ್ವಾಧಿಕಾರ, ಜನವಿರೋಧಿಗಳಿಂದ ಭಾರತವನ್ನು ಬಿಡಿಸಿಕೊಳ್ಳಲು ಯಾತ್ರೆ ಎಂದು ಕಾಂಗ್ರೆಸ್ (Congress is not only a Party) ಹೇಳಿದೆ.
ಬಳ್ಳಾರಿಯಲ್ಲಿ (Bellary) ಸಾಗುತ್ತಿರುವ ಭಾರತ್ ಜೋಡೋ ಯಾತ್ರೆಯ ಕುರಿತು ಟ್ವೀಟ್ ಮಾಡಿರುವ (Congress is not only a Party) ರಾಜ್ಯ ಕಾಂಗ್ರೆಸ್,
ಇದನ್ನೂ ಓದಿ : https://vijayatimes.com/kharagpur-student-decomposed-body-found/
“ನಡೆ ಮುಂದೆ ನಡೆ ಮುಂದೆ, ನುಗ್ಗಿ ನಡೆ ಮುಂದೆ. ಜಗ್ಗದೆಯೆ ಕುಗ್ಗದೆಯೆ ಹಿಗ್ಗಿ ನಡೆ ಮುಂದೆ. ಉದ್ಯೋಗಕ್ಕಾಗಿ, ಸಾಮರಸ್ಯಕ್ಕಾಗಿ , ಉತ್ತಮ ಸಮಾಜಕ್ಕಾಗಿ, ಭಾರತ ಐಕ್ಯತಾ ಯಾತ್ರೆಯಲ್ಲಿ ನಡೆಯೋಣ ಎಂದು ಕರೆ ನೀಡಿದೆ. “ಬಳ್ಳಾರಿ + ಪಾದಯಾತ್ರೆ” ಇವೆರಡೂ ಸೇರಿ ರಾಜಕೀಯ ಕ್ರಾಂತಿ ಸೃಷ್ಟಿಯಾಗಿದ್ದು ಇತಿಹಾಸದಲ್ಲಿದೆ.

ಈಗ ಮತ್ತೊಮ್ಮೆ ಬಳ್ಳಾರಿಗೆ ಕಾಲಿಟ್ಟಿದ್ದೇವೆ, ಇದು ರಾಜಕೀಯ ಬದಲಾವಣೆಗೆ ನಾಂದಿ ಹಾಡುವುದು ನಿಶ್ಚಿತ. ದೇಶ ಹಾಗೂ ರಾಜ್ಯದಲ್ಲಿ ಬದಲಾವಣೆಯ ಪರ್ವಕ್ಕೆ ಬಳ್ಳಾರಿ ಮತ್ತೊಮ್ಮೆ ಸಾಕ್ಷಿಯಾಗಲಿದೆ.
ಪ್ರತಿ ಹೆಜ್ಜೆಯಲ್ಲೂ ಜ್ವಾಲೆಯಿದೆ, ಪ್ರತಿ ದಿನವೂ ಹೊಸ ಪ್ರಕಾಶವಿದೆ. ಬಿರುಗಾಳಿಯಿಂದ ದೇಶವನ್ನೇ ರಕ್ಷಿಸಿದ್ದೇವೆ ತಡೆಯಲು ಸಾಧ್ಯವಿದ್ದವರು ತಡೆಯಿರಿ ಎಂದು ಸವಾಲು ಹಾಕಿದೆ.
ಇದನ್ನೂ ಓದಿ : https://vijayatimes.com/health-tips-of-banana-flower/
ಬಳ್ಳಾರಿಯಲ್ಲಿ ನಡೆಯುತ್ತಿರುವ ಭಾರತ ಐಕ್ಯತಾ ಯಾತ್ರೆಯಲ್ಲಿ ಆಟೋ ಚಾಲಕರು ಶ್ರೀ ರಾಹುಲ್ ಗಾಂಧಿ(Rahul Gandhi) ಅವರೊಂದಿಗೆ ಪಾಲ್ಗೊಂಡು ಯಾತ್ರೆಗೆ ಬೆಂಬಲಿಸಿದರು. ಬೆಲೆ ಏರಿಕೆ, ಆರ್ಥಿಕ ಕುಸಿತದಿಂದ ಚೇತರಿಸಿಕೊಳ್ಳಲಾಗದಂತಹ ಹಂತಕ್ಕೆ ತಲುಪಿರುವ ಆಟೋ ಚಾಲಕರ ಬದುಕಿಗೆ ಭರವಸೆ ತುಂಬಬೇಕಿದೆ.

ಸರ್ವರಿಗೂ ಸುಭದ್ರ ಜೀವನ ಒದಗಿಸಬೇಕಿದೆ. ಬಳ್ಳಾರಿಯಲ್ಲಿ ನಡೆಯುತ್ತಿರುವ ಭಾರತ ಐಕ್ಯತಾ ಯಾತ್ರೆಯಲ್ಲಿ ಶ್ರೀ ಮಲ್ಲಿಕಾರ್ಜುನ್ ಖರ್ಗೆ ಅವರು ರಾಹುಲ್ ಗಾಂಧಿ ಅವರೊಂದಿಗೆ ಹೆಜ್ಜೆ ಹಾಕುತ್ತಿದ್ದಾರೆ.
ಇನ್ನು ಕಾಂಗ್ರೆಸ್ ಎಂದರೆ ಒಂದು ರಾಜಕೀಯ ಪಕ್ಷವಷ್ಟೇ ಅಲ್ಲ, ಕಾಂಗ್ರೆಸ್ ಎಂದರೆ ಚಳುವಳಿ, ಕಾಂಗ್ರೆಸ್ ಎಂದರೆ ಆಂದೋಲನ, ಕಾಂಗ್ರೆಸ್ ಎಂದರೆ ಹೋರಾಟ, ಕಾಂಗ್ರೆಸ್ ಎಂದರೆ ಪರಂಪರೆ ಎಂದಿದೆ.
- ಮಹೇಶ್.ಪಿ.ಎಚ್