Karnataka : ಕರ್ನಾಟಕ ರಾಜ್ಯದ ವಿಧಾನಸಭಾ ಚುನಾವಣೆ 2023ರ (Assembly Election 2023) ಫಲಿತಾಂಶಕ್ಕೆ ಇಡೀ ಕರುನಾಡೇ ಬಹು ಕಾತುರದಿಂದ ಕಾಯುತ್ತಿದೆ. ಕಳೆದ ಹಲವು ತಿಂಗಳುಗಳ ಹಿಂದೆ (Congress leading by 110 seats) ಆರಂಭವಾದ ಚುನಾವಣಾ ಭರಾಟೆ ಇಂದಿನ ಫಲಿತಾಂಶದ ಬಳಿಕ ಇಂದು ಒಂದು ಹಂತದಲ್ಲಿ ಮುಕ್ತಾಯವಾಗಲಿದೆ.
ಕಾಂಗ್ರೆಸ್, ಬಿಜೆಪಿಗೆಷ್ಟು ಸ್ಥಾನ? ಇಲ್ಲಿದೆ ಅಂಕಿ ಅಂಶ
ಸದ್ಯಕ್ಕೆ ನಡೆಯುತ್ತಿರುವ ಅಂಕಿ ಅಂಶಗಳ ಪ್ರಕಾರ ಕಾಂಗ್ರೆಸ್ ಪಕ್ಷವು 110 ಸ್ಥಾನದಲ್ಲಿದ್ದು ಮುನ್ನಡೆಯಲ್ಲಿದೆ, ಬಿಜೆಪಿ (BJP) ಪಕ್ಷವು 79 ಸ್ಥಾನದಲ್ಲಿದೆ.
ಮತ್ತು ಜೆಡಿಎಸ್ (JDS) ಪಕ್ಷವು 34 ಸ್ಥಾನಗಳಲ್ಲಿದೆ. ಈ ಬಾರಿ ಗಮನಿಸಬೇಕಾಗದ ಪ್ರಮುಖ ಅಂಶಗಳೆಂದರೆ ಅನೇಕ ನಾಯಕರು ಹಿನ್ನಡೆಯಲ್ಲಿದ್ದಾರೆ.
1985 ರಿಂದ ಆಡಳಿತ ಪಕ್ಷ ಎಂದೂ ಕರ್ನಾಟಕದಲ್ಲಿ ಗೆದ್ದ ಇತಿಹಾಸವಿಲ್ಲ. ಕಾಂಗ್ರೆಸ್ (Congress) ಈ ಚುನಾವಣೆಯ ಮೇಲೆ ಹೆಚ್ಚಿನ ನಿರೀಕ್ಷೆಯನ್ನು ಇಟ್ಟುಕೊಂಡಿದೆ.
ಕರ್ನಾಟಕದಲಲ್ಲಿ ಕಾಂಗ್ರೆಸ್ ಗೆಲುವು ಕಂಡರೆ ಅವರ ನೈತಿಕ ಸ್ಥೈರ್ಯವನ್ನು ಹೆಚ್ಚಿಸುತ್ತದೆ ಮತ್ತು 2024ರಲ್ಲಿ ನಡೆಯಲಿರುವ ಲೋಕಸಭೆ (Congress leading by 110 seats) ಚುನಾವಣೆಯಲ್ಲಿ ಪ್ರಮುಖ ಪ್ರತಿಪಕ್ಷವಾಗಿ ಗುರುತಿಸಿಕೊಳ್ಳಲು ಸಹಾಯ ಆಗುತ್ತದೆ.
ಇದನ್ನೂ ಓದಿ : https://vijayatimes.com/congress-crossed-100-seats/
ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಮೇ 10 ರಂದು ಒಟ್ಟು 58,545 ಮತಗಟ್ಟೆಗಳಲ್ಲಿ ಚುನಾವಣೆಯು ನಡೆದಿತ್ತು.ಈ ಬಾರಿ ಒಟ್ಟು 5,30,85,566 ಮಂದಿ ಮತದಾನಕ್ಕೆ ಅರ್ಹತೆ ಪಡೆದಿದ್ದರು,
ಈ ಮತದಾರರ ಪೈಕಿ ಶೇ.72.67 ರಷ್ಟು ಅಂದರೆ ಸರಿ ಸುಮಾರು ಕೇವಲ 3.85 ಕೋಟಿ ಮಂದಿ ಮಾತ್ರ ಮತಚಲಾವಣೆ ಮಾಡಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.
2023 ರ ಚುನಾವಣೆಯ ಅಂಕಿ-ಅಂಶಗಳನ್ನು ನೋಡಿದರೇ ಈ ಬಾರಿ ಮತದಾನ ಪ್ರಮಾಣ ಅತೀ ಕಡಿಮೆಯಾಗಿತ್ತು.
ಸ್ಟಾರ್ ಅಭ್ಯರ್ಥಿಗಳು
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) (ವರುಣಾ),ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) (ಶಿಗ್ಗಾಂವಿ),
ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ (HD Kumaraswamy) (ಚನ್ನಪಟ್ಟಣ) ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Sivakumar) (ಕನಕಪುರ) ಈ ಚುನಾವಣಾ ಕಣದಲ್ಲಿರುವ ಪ್ರಮುಖ ನಾಯಕರು.
ಈ ಬಾರಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ (Hubli-Dharwad Central Constituency) ಮಾಜಿ ಸಿಎಂ ಜಗದೀಶ್ ಶೆಟ್ಟರ್ (CM Jagdish Shettar) ಕಣದಲ್ಲಿದ್ದಾರೆ.
ಇತ್ತೀಚೆಗೆ ಶೆಟ್ಟರ್ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆಂಬುವುದು ಉಲ್ಲೇಖನೀಯ.
ಈ ಬಾರಿ ಒಟ್ಟು 5,30,85,566 ಮಂದಿ ಮತದಾನಕ್ಕೆ ಅರ್ಹತೆ ಪಡೆದಿದ್ದರು, ಈ ಮತದಾರರ ಪೈಕಿ ಶೇ.72.67 ರಷ್ಟು ಅಂದರೆ ಸರಿ ಸುಮಾರು ಕೇವಲ 3.85 ಕೋಟಿ ಮಂದಿ ಮಾತ್ರ ಮತಚಲಾವಣೆ ಮಾಡಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ. 2023 ರ ಚುನಾವಣೆಯ ಅಂಕಿ-ಅಂಶಗಳನ್ನು ನೋಡಿದರೇ ಈ ಬಾರಿ ಮತದಾನ ಪ್ರಮಾಣ ಅತೀ ಕಡಿಮೆಯಾಗಿದ್ದು, ಮತದಾರರು ಇನ್ನಷ್ಟು ಜಾಗೃತಿಯಾಗಬೇಕಿದೆ.
- ರಶ್ಮಿತಾ ಅನೀಶ್