Jaipur : ನಿನ್ನೆ ತಡರಾತ್ರಿ ರಾಜಸ್ಥಾನದ (Rajasthan)ರಾಜ್ಯ ರಾಜಕೀಯದಲ್ಲಿ ನಡೆದ ಭಾರೀ ಹೈಡ್ರಾಮಾದಲ್ಲಿ ೮೦ಕ್ಕೂ ಅಧಿಕ ಆಡಳಿತರೂಢ ಕಾಂಗ್ರೆಸ್ (Congress MLAs) ಪಕ್ಷದ ಶಾಸಕರು ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.

ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ನಿನ್ನೆ ತಡರಾತ್ರಿ ೮೦ಕ್ಕೂ ಹೆಚ್ಚು ರಾಜಸ್ಥಾನದ ಕಾಂಗ್ರೆಸ್ ಶಾಸಕರು ತಮ್ಮ ರಾಜೀನಾಮೆ (Congress MLAs resignation) ಪತ್ರವನ್ನು ವಿಧಾನಸಭಾ ಸ್ಪೀಕರ್ ಸಿಪಿ ಜೋಶಿ ಅವರಿಗೆ ಅವರ ನಿವಾಸದಲ್ಲಿ ಸಲ್ಲಿಸಿದ್ದಾರೆ.
ರಾಜೀನಾಮೆ ನೀಡಿರುವ ಎಲ್ಲಾ ಕಾಂಗ್ರೆಸ್‌ಶಾಸಕರು ಸ್ಪೀಕರ್ ಮನೆಯಿಂದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಅಧಿಕೃತ ನಿವಾಸಕ್ಕೆ ಹೋಗಿದ್ದಾರೆ ಎಂದು ವರದಿಯಾಗಿದೆ.
https://vijayatimes.com/russia-replies-to-narendra-modi/

ಸದ್ಯ ಮುಖ್ಯಮಂತ್ರಿಯಾಗಿರುವ ಅಶೋಕ್ ಗೆಹ್ಲೋಟ್ (Ashok Gehlot) ಮುಂದಿನ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದರೆ, ಮುಂದಿನ ಮುಖ್ಯಮಂತ್ರಿಯಾಗಿ ಸಚಿನ್ ಪೈಲಟ್ ಅವರ ಉಮೇದುವಾರಿಕೆ ವಿರುದ್ಧ ಗೆಹ್ಲೋಟ್ ಬಣದ ಶಾಸಕರು ಕ್ಯಾಬಿನೆಟ್ ಸಚಿವ ಶಾಂತಿ ಧರಿವಾಲ್ ಅವರ ನಿವಾಸದಲ್ಲಿ ಸಭೆ ನಡೆಸಿದರು.
ಸಚಿನ್‌ಪೈಲಟ್‌ಅವರನ್ನು ಮುಖ್ಯಮಂತ್ರಿ ಮಾಡಲು ಮುಂದಾದರೆ ನಾವೆಲ್ಲಾ ರಾಜೀನಾಮೆಯನ್ನು (Congress MLAs resignation) ಹಿಂಪಡೆಯುವುದಿಲ್ಲ ಎಂಬ ಎಚ್ಚರಿಕೆಯನ್ನು ಶಾಸಕರು ಕಾಂಗ್ರೆಸ್ ಹೈಕಮಾಂಡ್‌ಗೆ ರವಾನಿಸಿದ್ದಾರೆ.
https://vijayatimes.com/infosys-narayanamurthy-statement/
ಇನ್ನು ಕಾಂಗ್ರೆಸ್ ಪಕ್ಷಕ್ಕೆ ಎದುರಾಗಿರುವ ವಿಪತ್ತನ್ನು ಎದುರಿಸಲು ರಾಹುಲ್ ಗಾಂಧಿ (Rahul Gandhi) ಪಾಳಯವು ಕರ‍್ಯಪ್ರವೃತ್ತವಾಗಿದೆ. ಪಕ್ಷದ ಹಿರಿಯ ನಾಯಕ ಹಾಗೂ ಸಂಸದ ಕೆ.ಸಿ.ವೇಣುಗೋಪಾಲ್ ಅವರು ಪಕ್ಷದ ರಾಜಸ್ಥಾನ ಉಸ್ತುವಾರಿ ಅಜಯ್ ಮಾಕನ್ ಮತ್ತು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರೊಂದಿಗೆ ಈ ಕುರಿತು ರ‍್ಚೆ ನಡೆಸಿದ್ದಾರೆ.
ಆದರೆ “ಮೇರೆ ಹಾತ್ ಮೇ ಕುಚ್ ನಹೀ ಹೈ (ನನ್ನ ಕೈಯಲ್ಲಿ ಏನೂ ಇಲ್ಲ),” ಎಂದು ಗೆಹ್ಲೋಟ್ ಈ ಹಿಂದೆಯೇ ವೇಣುಗೋಪಾಲ್ಗೆ ಹೇಳಿದ್ದರು ಎನ್ನಲಾಗಿದೆ.
ಇನ್ನೊಂದೆಡೆ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಸೂಚನೆ ಮೇರೆಗೆ ಸಂಸದ ಮಲ್ಲಿಕರ‍್ಜುನ ರ‍್ಗೆ ಮತ್ತು ಉಸ್ತುವಾರಿ ಅಜಯ್ ಮಾಕನ್ ಪಕ್ಷದ ಪ್ರತಿಯೊಬ್ಬ ಶಾಸಕರೊಂದಿಗೂ ಸಭೆ ನಡೆಸಲು ಮುಂದಾಗಿದ್ದಾರೆ.
-ಮಹೇಶ್.ಪಿ.ಎಚ್