Visit Channel

209 ರ್ಯಾಲಿ, 24 ತಿಂಗಳ ಓಡಾಟ, ಸಿಕ್ಕಿದ್ದು 2!

congress

ಪಂಚರಾಜ್ಯಗಳಲ್ಲಿ ಕಾಂಗ್ರೆಸ್ ತೀವ್ರ ಮುಖಭಂಗ ಅನುಭವಿಸಿದ ಬೆನ್ನಲ್ಲೇ ಅನೇಕ ವಿಶ್ಲೇಷಣೆಗಳು ಕೇಳಿಬರುತ್ತಿವೆ. ಉತ್ತರಾಖಂಡ, ಮಣಿಪುರ, ಗೋವಾ, ಪಂಜಾಬ್‍ನಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರುವಲ್ಲಿ ವಿಫಲವಾಗಿದೆ. ಆದರೆ ಉತ್ತರಪ್ರದೇಶದಲ್ಲಿ ಮಾತ್ರ ಕಾಂಗ್ರೆಸ್ ಪ್ರಿಯಾಂಕಾ ಗಾಂಧಿಯಂತ ನಾಯಕಿ ಇದ್ದರು ತೀವ್ರ ಮುಖಭಂಗ ಅನುಭವಿಸಿದೆ.

priyanka gandhi

ಇನ್ನು 2019ರಲ್ಲಿ ಪ್ರಿಯಾಂಕಾ ಗಾಂಧಿ ಸಕ್ರಿಯವಾಗಿ ರಾಜಕೀಯ ಪ್ರವೇಶ ಮಾಡಿದರು. 2019ರ ಲೋಕಸಭಾ ಚುನಾವಣೆ ಇನ್ನೇನು ಕೆಲ ತಿಂಗಳುಗಳಿವೆ ಎಂದಾಗ ಪ್ರಿಯಾಂಕಾ ಗಾಂಧಿ ರಾಜಕೀಯಕ್ಕೆ ಎಂಟ್ರಿ ಕೊಟ್ಟರು. ಮೋದಿಗೆ ಪ್ರಿಯಾಂಕಾ ಗಾಂಧಿ ಸೂಕ್ತ ಎದುರಾಳಿ ಎಂದೇ ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದರು. ಕಾಂಗ್ರೆಸ್‍ನಲ್ಲಿಯೂ ಕೂಡಾ ಹೊಸ ಹುಮ್ಮಸ್ಸು ಮೂಡಿತ್ತು. 2019ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಪೂರ್ವ ಉತ್ತರಪ್ರದೇಶದ 35 ಲೋಕಸಭಾ ಕ್ಷೇತ್ರಗಳ ಉಸ್ತುವಾರಿ ಹೊತ್ತುಕೊಂಡಿದ್ದ ಪ್ರಿಯಾಂಕಾ ಗಾಂಧಿ, ಗೆದ್ದಿದ್ದು ಮಾತ್ರ ಶೂನ್ಯ.

ಇನ್ನು ಇಡೀ ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ರಾಯ್‍ಬರೇಲಿ ಗೆದ್ದು, ರಾಹುಲ್ ಗಾಂಧಿ ಅಮೇಥಿಯಲ್ಲಿ ಸೋಲನ್ನು ಕಂಡಿದ್ದರು. ಇದಾದ ನಂತರ ಪ್ರಿಯಾಂಕಾ ಗಾಂಧಿ 2022ರ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯನ್ನು ಕೇಂದ್ರವಾಗಿಟ್ಟುಕೊಂಡು, ರಾಜಕೀಯದಲ್ಲಿ ಹೆಚ್ಚು ಸಕ್ರಿಯರಾದರು. ಕಳೆದ 24 ತಿಂಗಳಿಂದ ಪ್ರಿಯಾಂಕಾ ಗಾಂಧಿ ತಮ್ಮ ಬಹುತೇಕ ಸಮಯವನ್ನು ಉತ್ತರಪ್ರದೇಶದಲ್ಲೇ ಕಳೆದಿದ್ದಾರೆ. ಯೋಗಿ ಆದಿತ್ಯನಾಥ್, ಅಖಿಲೇಶ್ ಯಾದವ್ ಮತ್ತು ಮಾಯಾವತಿಗಿಂತ ಹೆಚ್ಚಿನ ರ್ಯಾಲಿಗಳನ್ನು ಮತ್ತು ಸಭೆಗಳನ್ನು ನಡೆಸಿದ್ದಾರೆ. 204 ರ್ಯಾಲಿಗಳನ್ನು ಯೋಗಿ ಆದಿತ್ಯನಾಥ್ ನಡೆಸಿದ್ದರೆ, ಪ್ರಿಯಾಂಕಾ ಗಾಂಧಿ 209 ರ್ಯಾಲಿಗಳನ್ನು ನಡೆಸಿದ್ದು ವಿಶೇಷ.

congress

ಪೂರ್ವ ಉತ್ತರಪ್ರದೇಶ ಮತ್ತು ಅವಧ್ ಭಾಗಗಳಲ್ಲಿ ಹೆಚ್ಚಿನ ಸಂಘಟನೆ ಕಾರ್ಯಕೈಗೊಂಡಿದ್ದರು. ಯೋಗಿ ಸರ್ಕಾರದ ವಿರುದ್ದ ನಿರಂತರ ವಾಗ್ದಾಳಿ ನಡೆಸುತ್ತಾ, ಮತದಾರರ ಮನದಲ್ಲಿ ಮನೆ ಮಾಡುವ ಪ್ರಯತ್ನ ನಡೆಸಿದ್ದರು, ಆದರೆ ಅದ್ಯಾವುದು ಫಲನೀಡಿಲ್ಲ. ಇನ್ನು ಉತ್ತರಪ್ರದೇಶದ 403 ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಗೆದ್ದಿರುವುದು 2 ಕ್ಷೇತ್ರಗಳನ್ನು ಮಾತ್ರ. ಆ ಮೂಲಕ ಕಾಂಗ್ರೆಸ್ ಉತ್ತರಪ್ರದೇಶದಲ್ಲಿ ನೆಲೆಯನ್ನೇ ಕಳೆದುಕೊಂಡಿದೆ. ಪ್ರಿಯಾಂಕಾ ಗಾಂಧಿ ನಡೆಸಿದ ಪ್ರಚಾರ ಸಭೆಗಳಿಗೆ ಜನ ಸೇರುತ್ತಿದ್ದರು, ಅದು ಮತವಾಗಿ ಪರಿವರ್ತನೆಯಾಗಿಲ್ಲ. ಕಾಂಗ್ರೆಸ್ ಕುರಿತು ಯುವ ಮತದಾರರು ತೀವ್ರ ನಿರಾಸಕ್ತಿ ತೋರುತ್ತಿದ್ದಾರೆ. ಯುವ ಮತದಾರರು ಮತ್ತು ಮಹಿಳೆಯನ್ನು ಸೆಳೆಯಲು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ನಡೆಸಿದ ಪ್ರಯತ್ನಗಳಿಗೆ ಫಲ ದೊರೆತಿಲ್ಲ.

ಬಿಜೆಪಿ, ಎಸ್ಪಿ ಮತ್ತು ಬಿಎಸ್ಪಿ ಪಕ್ಷಗಳಿಗಿಂತ ಹೆಚ್ಚಿನ ಟಿಕೆಟ್‍ಗಳನ್ನು ಕಾಂಗ್ರೆಸ್ ಮಹಿಳೆಯರಿಗೆ ನೀಡಿತ್ತು. ಆದರು ಮಹಿಳಾ ಮತದಾರರು ಕೈ ಹಿಡಿದಿಲ್ಲ. ಇನ್ನು ಪ್ರಿಯಾಂಕಾ ಗಾಂಧಿ 2019ರಲ್ಲಿ ಕಾಂಗ್ರೆಸ್‍ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರಕ್ಕೇರಿದಾಗ ಹೊಸ ಭರವಸೆ ಮೂಡಿಸಿದ್ದರು. ಆದರೆ ಉತ್ತರಪ್ರದೇಶ ಚುನಾವಣೆ ಅದೆಲ್ಲವನ್ನೂ ಅಳಿಸಿಹಾಕಿದೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರ ರಾಜಕೀಯ ಭವಿಷ್ಯ ದಿನೇದಿನೇ ಮಂಕಾಗುತ್ತಿದೆ.

Latest News

E-Shram Card
ಪ್ರಮುಖ ಸುದ್ದಿ

ಇ-ಶ್ರಮ ಕಾರ್ಡ್ ಉಪಯೋಗದ ಬಗ್ಗೆ ನಿಮಗೆ ತಿಳಿದಿಲ್ಲವೆ ?  

ಅಸಂಘಟಿತ ವಲಯದ ಕಾರ್ಮಿಕರಿಗೆ  ಸಂಪೂರ್ಣವಾಗಿ  ವೃತ್ತಿ ಮಾಹಿತಿ  ಮತ್ತು   ಸರ್ಕಾರದ  ಯೋಜನೆಗಳು  ಕಾರ್ಮಿಕರಿಗೆ ನೇರವಾಗಿ ತಲುಪಿಸುವ ,ಹಾಗೂ ದತ್ತಾಂಶ ಸಂಗ್ರಹಿಸುವ ಉದ್ದೇಶದಿಂದ 26  ಆಗಸ್ಟ್‌  2021 ರಂದು  ಕೇಂದ್ರ ಸರ್ಕಾರವು ಈ ಯೋಜನೆಯನ್ನು  ಜಾರಿಗೊಳಿಸಿದೆ. 

inflation
ದೇಶ-ವಿದೇಶ

ಅಗತ್ಯ ವಸ್ತುಗಳ ಬೆಲೆ ತಗ್ಗಿದ ಪರಿಣಾಮ: ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.6.7 ಇಳಿಕೆ ನಿರೀಕ್ಷೆ

ಅಂದು 100 ರೂಪಾಯಿಗೆ ಖರೀದಿಸುವ ಸಾಮಾನು ಈಗ 500 ಕೊಟ್ಟರು ಬರುವುದಿಲ್ಲ. ಕಾರಣ ಹಣದ ಮೌಲ್ಯ ಕಡಿಮೆಯಾಗಿದೆ, ಈ ಹಣದ ಮೌಲ್ಯ ಕಡಿಮೆಯಾಗಿರುವುದನ್ನೇ ನಾವು ಹಣದುಬ್ಬರ ಎನ್ನುತ್ತೇವೆ.