ಮಲ್ಲಿಕಾರ್ಜುನ್‌ ಖರ್ಗೆ ಅವರನ್ನು ಕಂಡರೆ ಪ್ರಧಾನಿಗೆ ಅಷ್ಟೊಂದು ಭಯವೇ? : ಕಾಂಗ್ರೆಸ್

ರಾಜ್ಯಸಭೆಯ(Rajyasabha) ವಿಪಕ್ಷ ನಾಯಕ(Opposition Leader) ಮಲ್ಲಿಕಾರ್ಜುನ್‌ ಖರ್ಗೆ(Mallikarjun Kharghe) ಅವರನ್ನು ಹಾಗೂ ಕಾಂಗ್ರೆಸ್ ಪಕ್ಷವನ್ನು(Congress Party) ಕಂಡರೆ ಪ್ರಧಾನಿಗೆ ಅಷ್ಟೊಂದು ಭಯವೇ? ಅವರ ಪ್ರಶ್ನೆಗಳನ್ನು ಎದುರಿಸಲು ಅಷ್ಟೊಂದು ಹಿಂಜರಿಕೆಯೇ? ಇ.ಡಿ(ED) ಸಂಸ್ಥೆಯನ್ನು ಮುಂದಿಟ್ಟು ಪ್ರಶ್ನೆಗಳಿಂದ ಪಲಾಯನ ಮಾಡುವ ಬಿಜೆಪಿಯ(BJP) ತಂತ್ರಗಳು ನಡೆಯದು. ಉತ್ತರ ಕೊಡಬೇಕಾದವರು ಉತ್ತರಕುಮಾರನಂತೆ ವರ್ತಿಸುತ್ತಿದ್ದಾರೆ ಎಂದು ಕಾಂಗ್ರೆಸ್‌, ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದೆ.


ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ್‌ ಖರ್ಗೆ ಅವರಿಗೆ ಇ.ಡಿ ಸಮನ್ಸ್‌(Summons) ನೀಡಿರುವುದನ್ನು ಖಂಡಿಸಿ ಸರಣಿ ಟ್ವೀಟ್‌(Tweet) ಮಾಡಿರುವ ಕಾಂಗ್ರೆಸ್‌, ಬಿಜೆಪಿಯ ಧಮನಕಾರಿ ನೀತಿಗಳಿಂದ ಕಾಂಗ್ರೆಸ್ನ ಧ್ವನಿಯನ್ನು ಅಡಗಿಸಲಾಗದು. ರಾಜ್ಯಸಭೆ ವಿಪಕ್ಷ ನಾಯಕರಾದ ಮಲ್ಲಿಕಾರ್ಜುನ್‌ ಖರ್ಗೆ ಅವರು ಸಂಸತ್ ಅಧಿವೇಶನದಲ್ಲಿ ಇರುವಾಗಲೇ ಸರ್ಕಾರ ಇ.ಡಿಯಿಂದ ಸಮನ್ಸ್ ಜಾರಿ ಮಾಡಿಸಿ ಸಂಸತ್ತಿನಲ್ಲಿ ಖರ್ಗೆಯವರ ಪ್ರಶ್ನೆಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದೆ. ಇದು ಹೇಡಿಗಳ ಲಕ್ಷಣವೇ ಹೊರತು ಪ್ರಜಾಪ್ರಭುತ್ವವಾದಿಗಳದ್ದಲ್ಲ ಎಂದು ಟೀಕಿಸಿದ್ದಾರೆ.


ಇನ್ನು ಉಪರಾಷ್ಟ್ರಪತಿ ಚುನಾವಣೆಗೂ ಮುನ್ನ ಇ.ಡಿ ಉದ್ದೇಶಪೂರ್ವಕವಾಗಿ ಮಲ್ಲಿಕಾರ್ಜುನ್‌ ಖರ್ಗೆ ಅವರಿಗೆ ಹೇಳಿಕೆ ನೀಡಲು ಕರೆ ನೀಡುತ್ತಿದೆ, ಈ ಚುನಾವಣೆಗೂ ಮುನ್ನ ಇಡಿ ದುರ್ಬಳಕೆಯಾಗುತ್ತಿದೆ. ನೀವು ಮೊದಲ ಬಾರಿಗೆ ಕರೆ ಮಾಡುತ್ತಿರುವುದು ಕೂಡ ಅಲ್ಲ, ಈ ಹಿಂದೆಯೂ ವಿಚಾರಣೆ ನಡೆದಿದೆ. ಸದನದ ಕಲಾಪಗಳ ನಂತರ ಕರೆಯಬಹುದಿತ್ತು. ಸಂಸತ್ ಕಲಾಪ ನಡೆಯುತ್ತಿರುವಾಗ ಪ್ರತಿಪಕ್ಷದ ನಾಯಕನನ್ನು ಇ.ಡಿ ಅಥವಾ ಇನ್ನಾವುದೇ ತನಿಖಾ ಸಂಸ್ಥೆಯು ಹೇಳಿಕೆ ನೀಡಲು ಕರೆದದ್ದು, ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಎಂದಿಗೂ ಸಂಭವಿಸಿಲ್ಲ ಎಂದು ಕಾಂಗ್ರೆಸ್‌ ನಾಯಕ ದಿಗ್ವಿಜಯ ಸಿಂಗ್‌ ಹೇಳಿದ್ದಾರೆ.


ಪೆಟ್ರೋಲ್, ಡೀಸೆಲ್ಗಳ ಬೆಲೆ ಏರಿಕೆ ಬಗ್ಗೆ ಮೋದಿಯವರು ‘ಮನ್ ಕಿ ಬಾತ್’ ಆಡುವುದೇ ಇಲ್ಲ. ಅವರ ಪಕ್ಷವೂ ಕೂಡ ಮೌನಕ್ಕೆ ಜಾರುತ್ತದೆ. ಇಂಧನ ತೈಲಗಳ ಮೇಲಿನ ತೆರಿಗೆ ಏರಿಸಿ ಬಡವರ ಸುಲಿಗೆ ಮಾಡುವುದನ್ನೇ ಸಾಧನೆ ಎಂದುಕೊಂಡಿರುವ ಸರ್ಕಾರ ಎಂದಿಗೂ ಜನಪರವಾಗಿ ಯೋಚಿಸಲಾರದು. ಏಕೆಂದರೆ ಅವರಿಗೆ ‘ಸುಲಿಗೆ’ಯೇ ಸಾಧನೆ. ಇನ್ನು ಡಾಲರ್ ಎದುರು ರೂಪಾಯಿ ಐತಿಹಾಸಿಕವಾಗಿ ದಾಖಲೆ ಮಟ್ಟದಲ್ಲಿ ಕುಸಿದಿದೆ, ಮೋದಿಯವರ 8 ವರ್ಷಗಳ ಅವಧಿಯಲ್ಲಿ ರೂಪಾಯಿ ಕುಸಿತದ ಬಗ್ಗೆ ಒಮ್ಮೆಯೂ ಮಾತನಾಡಲಿಲ್ಲ. ವೈಫಲ್ಯ ಮುಚ್ಚಿಕೊಳ್ಳಲು ‘ಮೌನ’ ಪರಿಹಾರ, ದುರಾಡಳಿತ ಮುಚ್ಚಿಕೊಳ್ಳಲು ‘ಮಾತು’ ಪರಿಹಾರ ಎಂದುಕೊಂಡಿದ್ದಾರೆ ಎಂದು ಟೀಕಿಸಿದ್ದಾರೆ.

Latest News

ಆರೋಗ್ಯ

ಸಕ್ಕರೆ ಖಾಯಿಲೆ ಇರುವವರು ಈ ಹಣ್ಣುಗಳನ್ನು ಸೇವಿಸಬಹುದು ; ತಪ್ಪದೇ ಈ ಮಾಹಿತಿ ಓದಿ

ತಜ್ಞರ ಪ್ರಕಾರ, ಸಕ್ಕರೆ ಕಾಯಿಲೆ ಇರುವವರು ಈ 5 ವಿಧದ ಹಣ್ಣುಗಳನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. ಅಂತಹ ಹಣ್ಣುಗಳ ವಿವರ ಇಲ್ಲಿದೆ ನೋಡಿ.

ದೇಶ-ವಿದೇಶ

ದೇಶದ ಹೆಮ್ಮೆ ತ್ರಿವರ್ಣ ಧ್ವಜವೂ ಕೂಡ ಬಿಜೆಪಿಗೆ ವ್ಯಾಪಾರದ ಸರಕಾಗಿದೆ : ಬಿ.ಕೆ.ಹರಿಪ್ರಸಾದ್

38×11,80,000=4.484 ಕೋಟಿ, ಹೇಗಿದೆ ಮೋದಿ ಸರ್ಕಾರದ ಲೂಟಿ? ಕೇಂದ್ರದ ಮೋದಿ ಸರ್ಕಾರ ವಸೂಲಿ ಬಾಜಿತನಕ್ಕೆ ರಾಷ್ಟ್ರಧ್ವಜವನ್ನ ಬಳಸಿಕೊಂಡಿರುವುದು ಅಕ್ಷಮ್ಯ ಅಪರಾಧ

ಕ್ರೀಡೆ

ಕಾಮನ್‌ವೆಲ್ತ್ ಗೇಮ್ಸ್‌ 2022 ; ಕಂಚಿನ ಪದಕ ಗೆದ್ದ ಪತ್ನಿಯನ್ನು ಅಭಿನಂದಿಸಿದ ದಿನೇಶ್ ಕಾರ್ತಿಕ್

ಭಾರತದ ಸ್ಕ್ವ್ಯಾಶ್ ಆಟಗಾರ್ತಿ ದೀಪಿಕಾ ಪಲ್ಲಿಕ್ಕಲ್(Deepika Pallikal) ಮಿಕ್ಸೆಡ್ ಡಬಲ್ಸ್ ವಿಭಾಗದಲ್ಲಿ ಕಂಚಿನ ಪದಕ(Bronze Medal) ಗೆದ್ದುಕೊಂಡಿದ್ದಾರೆ.

ಆರೋಗ್ಯ

ದೇಹ ನೀಡುವ `ಈ’ ಸೂಚನೆಗಳು ಕಿಡ್ನಿ ವೈಪಲ್ಯವನ್ನು ಸೂಚಿಸುತ್ತವೆ ; ಇಲ್ಲಿದೆ ಮಾಹಿತಿ ಓದಿ

ಕಿಡ್ನಿ(Kidney) ನಮ್ಮ ದೇಹದ ಪ್ರಮುಖ ಅಂಗವಾಗಿದೆ. ದೇಹದಲ್ಲಿ ಶುದ್ಧ ರಕ್ತವನ್ನು ಪರಿಚಲನೆ ಮಾಡುವಲ್ಲಿ ಮೂತ್ರಪಿಂಡಗಳು ಮುಖ್ಯ ಪಾತ್ರವಹಿಸುತ್ತವೆ.