ಲವ್ ಜಿಹಾದ್ ಬಿಡಿ, ಮೊದಲು ಡಾಲರ್(Dollar) ಬಗ್ಗೆ ಮಾತಾಡಿ ಮಾನ್ಯ ನಳಿನ್‌ಕುಮಾರ ಕಟೀಲ್ (Nalin kumar kateel)ಅವರೇ. “ಡಾಲರ್ & ರೂಪಾಯಿ” ಬಗ್ಗೆ ಮಾತಾಡಲು ಏಕೆ ಹಿಂಜರಿಕೆ ತಮಗೆ? ವೈಫಲ್ಯಗಳ ಪ್ರಶ್ನೆಗಳನ್ನು ಎದುರಿಸಲಾಗದೆ ಲವ್ ಜಿಹಾದ್ ಮೊರೆ ಹೋಗ್ತಿದೀರಾ? ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ಕುಮಾರ ಕಟೀಲ್(Congress retaliated Nalinkumar statement) ನೀಡಿರುವ ಹೇಳಿಕೆಗೆ ರಾಜ್ಯ ಕಾಂಗ್ರೆಸ್ ತಿರುಗೇಟು ನೀಡಿದೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್(State congress), “ಅಭಿವೃದ್ಧಿಯನ್ನು ಕೇಳಬೇಡಿ, ದ್ವೇಷ ಬಿತ್ತುವುದನ್ನು ಬಿಡಬೇಡಿ” ಇದು ಚುನಾವಣೆಗೆ ಬಿಜೆಪಿಯ ಘೋಷವಾಕ್ಯ ಹಾಗೂ ಕಾರ್ಯಕರ್ತರಿಗೆ ಕಾರ್ಯಸೂಚಿ. ಧರ್ಮ, ದ್ವೇಷಗಳ ಮೊರೆ ಹೋಗಲು ತೀರ್ಮಾನಿಸಿದ ಬಿಜೆಪಿ ತಮ್ಮ ಸರ್ಕಾರ ಅಭಿವೃದ್ಧಿಯಲ್ಲಿ ವಿಫಲವಾಗಿದೆ, ಹೇಳಿಕೊಳ್ಳಲು ಯಾವ ಸಾಧನೆಯನ್ನೂ ಮಾಡಿಲ್ಲ ಎಂಬುದನ್ನು ಘಂಟಾಘೋಷವಾಗಿ ಒಪ್ಪಿಕೊಂಡಿದೆ.
ಒಳಚರಂಡಿ ಮತ್ತು ರಸ್ತೆ ನಿರ್ಮಾಣಕ್ಕೆ “ಮುಖ್ಯಮಂತ್ರಿ ನಗರೋತ್ಥಾನ ಯೋಜನೆ” ಮಾಡುತ್ತೇವೆ ಎಂದಿತ್ತು ಬಿಜೆಪಿ ಸರ್ಕಾರ(BJP Government) ರಾಜ್ಯಕ್ಕೆ ನಯಾಪೈಸೆ ಅಭಿವೃದ್ಧಿ ಕೊಡುಗೆ ನೀಡದ ಬಿಜೆಪಿಗೆ ಇಂದು ಅಭಿವೃದ್ಧಿ ಎಂಬುದು ಸಣ್ಣ ವಿಷಯವಾಗಿದೆ, ಅದರ ಬಗ್ಗೆ ಮಾತೇ ಆಡಬೇಡಿ ಎನ್ನುತ್ತಿದೆ ಎಂದು ಟೀಕಿಸಿದೆ.
ಇನ್ನೊಂದು ಟ್ವೀಟ್‌ನಲ್ಲಿ, ಇದು ಬಿಜೆಪಿಯ ವೈಫಲ್ಯವಲ್ಲವೇ? ರಸ್ತೆ, ಚರಂಡಿ, ರಸ್ತೆಗುಂಡಿಗಳ ಸಣ್ಣ ವಿಚಾರ, ರಸ್ತೆ ಗುಂಡಿಗಳಿಂದ ಜನ ಸತ್ತಿದ್ದೂ ಸಣ್ಣ ವಿಚಾರ, ಭ್ರಷ್ಟಾಚಾರ, ಕಮಿಷನ್ ಸಣ್ಣ ವಿಚಾರ, ಗುತ್ತಿಗೆದಾರರು ಸತ್ತಿದ್ದೂ ಸಣ್ಣ ವಿಚಾರ, 54 ಸಾವಿರ ಪಿಎಸ್‌ಐ (PSI )ಅಭ್ಯರ್ಥಿಗಳ ಭವಿಷ್ಯ ಛಿದ್ರವಾಗಿದ್ದೂ ಸಣ್ಣ ವಿಚಾರ. ಯುವಕರ ನಿರುದ್ಯೋಗವೂ ಸಣ್ಣ ವಿಚಾರ. ಬಿಜೆಪಿಗೆ ದೊಡ್ಡ ವಿಚಾರ ಯಾವುದು? ಎಂದು ಪ್ರಶ್ನಿಸಿದೆ.
https://vijayatimes.com/nalinkumar-love-jihad-statement/

ಮತ್ತೊಂದು ಟ್ವೀಟ್‌ನಲ್ಲಿ, ಬಿಜೆಪಿ ಅಧ್ಯಕ್ಷರೇ, ಲವ್ ಜಿಹಾದ್(Love jihad) ಬಗ್ಗೆ ಆಮೇಲೆ ಮಾತಾಡುವಿರಂತೆ.
ಬಿಟ್ ಕಾಯಿನ್ ಹಗರಣ
PSI ಅಕ್ರಮ
ಕೆಪಿಟಿಸಿಎಲ್ ಅಕ್ರಮ
ಸಾಲು ಸಾಲು ನೇಮಕಾತಿ ಅಕ್ರಮಗಳು
ಗುತ್ತಿಗೆದಾರರ ಆತ್ಮಹತ್ಯೆ
ರಸ್ತೆ ಗುಂಡಿಯ ಸಾವುಗಳು
ಹೆಚ್ಚಿದ ದಲಿತರ ಮೇಲಿನ ದೌರ್ಜನ್ಯ
ಮೊದಲು ಈ ವಿಷಯಗಳನ್ನು ಮಾತಾಡಿ ದಮ್ಮು, ತಾಕತ್ತು ತೋರಿಸಿ. ಬಿಜೆಪಿ ತನ್ನ ವೈಫಲ್ಯಗಳನ್ನು, ಭ್ರಷ್ಟಾಚಾರವನ್ನು ಮರೆಮಾಚಲು ಬಳಸುವುದು ಕೋಮು ಕಲಹವನ್ನು. ರಾಜ್ಯದ ಅಭಿವೃದ್ಧಿ, ಉದ್ಯೋಗ, ಶಿಕ್ಷಣದ ವಿಷಯಗಳು ಬಿಜೆಪಿಗೆ “ಸಣ್ಣ ವಿಷಯಗಳು”.
ಹೇಳಿಕೊಳ್ಳಲು ಅಭಿವೃದ್ಧಿಪರ ಸಾಧನೆಗಳಿಲ್ಲದ ಬಿಜೆಪಿ ಅವುಗಳ ಬಗ್ಗೆ ಮಾತೇ ಆಡಬೇಡಿ ಎಂದು ಕಾರ್ಯಕರ್ತರಿಗೆ ಕರೆ ಕೊಟ್ಟಿರುವುದು ಅತ್ಯಂತ ನಾಚಿಕೆಗೇಡಿನ ವಿಷಯ ಎಂದು ವಾಗ್ದಾಳಿ ನಡೆಸಿದೆ.