ರೈತನಾಯಕ ರಾಕೇಶ್ ಟಿಕಾಯತ್(Rakesh Tikait) ಮೇಲೆ ನಿನ್ನೆ ಬೆಂಗಳೂರಿನಲ್ಲಿ ನಡೆದ ಹಲ್ಲೆಯ ಕುರಿತು ಸರಣಿ ಟ್ವೀಟ್‍ಗಳನ್ನು ಮಾಡಿರುವ ರಾಜ್ಯ ಕಾಂಗ್ರೆಸ್(State Congress),

ಈ ಷಡ್ಯಂತ್ರದ ಹಿಂದೆ ಬಿಜೆಪಿ(BJP) ಇದೆ ಎಂದು ಆರೋಪಿಸಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ರಾಜ್ಯ ಬಿಜೆಪಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದೆ. ರಾಜ್ಯ ಕಾಂಗ್ರೆಸ್ ಮಾಡಿರುವ ಟ್ವೀಟ್‍ಗಳ ವಿವರ ಇಲ್ಲಿದೆ ನೋಡಿ. ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಪುಡಿ ಪೋಕರಿಗಳ ಕೈಗೆ ನೀಡಿದೆಯೇ ಸರ್ಕಾರ? ಶಾಲೆಗೆ ನುಗ್ಗುತ್ತಿದ್ದಾರೆ, ಅಂಗಡಿಗಳನ್ನು ಧ್ವಂಸ ಮಾಡುತ್ತಾರೆ, ಮೈಕ್ ಏರಿಸಿ ಸವಾಲೆಸೆಯುತ್ತಾರೆ, ರೈತ ನಾಯಕರ ಮೇಲೆ ಹಲ್ಲೆ ಮಾಡುತ್ತಾರೆ. ಕಾನೂನಿನ ಭಯ ಇಲ್ಲದಾಗಿದೆ ಎಂದರೆ ಸರ್ಕಾರದ ದೌರ್ಭಲ್ಯವೋ ಅಥವಾ ಕುಮ್ಮಕ್ಕೊ?
ಎಲ್ಲಿದ್ದಾರೆ ಗೃಹಸಚಿವರು? ರೈತನಾಯಕರ ಮೇಲಿನ ಹಲ್ಲೆ ಬಿಜೆಪಿಯ ಭಯೋತ್ಪಾದನಾ ಕೃತ್ಯ. ಭಯೋತ್ಪಾದನಾ ಕೃತ್ಯ ಎಸಗುವವರೆಲ್ಲ ‘ಮೋದಿ ಮೋದಿ’ ಎನ್ನುತ್ತಿದ್ದಾರೆ. ಭಯೋತ್ಪಾದಕರಿಗೆ, ಹಲ್ಲೆ, ಕೊಲೆ, ಸುಲಿಗೆ, ಅತ್ಯಾಚಾರ, ಅನಾಚಾರ ಮಾಡುವವರಿಗೆಲ್ಲ ಮೋದಿಯವರೇ ಆದರ್ಶವೇ. ರೈತನಾಯಕರ ಮೇಲಿನ ಹಲ್ಲೆ ಕಂಡು ತಾಲಿಬಾನ್ ಕೂಡ ನಾಚಿಕೊಂಡಿರುತ್ತದೆ!. ರಾಜ್ಯ ಬಿಜೆಪಿ ಪಕ್ಷ ತನ್ನ ಕಾರ್ಯಕರ್ತರ ಮೂಲಕ ರೈತ ನಾಯಕರ ಮೇಲೆ ದಾಳಿ ನಡೆಸಿ ಇಡೀ ರೈತ ಸಮುದಾಯಕ್ಕೆ ಅವಮಾನಿಸಿದೆ.

ಗೃಹಸಚಿವರೇ, ತಾವು ನಿದ್ದೆ ಮಾಡ್ತಿದೀರಾ ಅಥವಾ ದಿವ್ಯಾ ಹಾಗರಗಿಯ ಸೌಖ್ಯ ವಿಚಾರಿಸಲು ಹೋಗಿದ್ದೀರಾ? ಅನರ್ಹ ಗೃಹಮಂತ್ರಿಯಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎನ್ನುವುದು ಮಕ್ಕಳಾಟಿಕೆಯಂತಾಗಿದೆ.