Karnataka : ಕೃಷಿ ಸಚಿವರು(Agriculture Minister) ಕಾಣೆಯಾಗಿದ್ದಾರೆ. ಹೆಸರು: ಬಿ.ಸಿ. ಪಾಟೀಲ್(BC Patil) ಗೋದಿಬಣ್ಣ, ಕಟ್ಟುಮಸ್ತಾದ ಮೈಕಟ್ಟು, ದುಂಡುಮುಖ, ದಪ್ಪ ಮೀಸೆ. ವಯಸ್ಸು : 65.

ಸಿನೆಮಾ ಪ್ರದರ್ಶನದಲ್ಲಿ ಕಾಣಿಸಿಕೊಂಡವರು ನಂತರ ಪತ್ತೆಯಾಗಿಲ್ಲ. ಹಲವು ತಿಂಗಳಿಂದ ಅತಿವೃಷ್ಟಿಯ ಸಂಕಷ್ಟದಲ್ಲಿರುವ ರಾಜ್ಯದ ರೈತರು, ಸಚಿವರನ್ನು ಕಾಣದೆ ಆತಂಕಗೊಂಡಿದ್ದಾರೆ. ದಯಮಾಡಿ ಹುಡುಕಿಕೊಡಿ ಎಂದು ರಾಜ್ಯ ಕಾಂಗ್ರೆಸ್(State Congress) ವ್ಯಂಗ್ಯವಾಡಿದೆ.
ಇದನ್ನೂ ಓದಿ : https://vijayatimes.com/black-beauty-nyakim-gatwech/
ರಾಜ್ಯ ಸರ್ಕಾರದ(State Government) ವಿರುದ್ದ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, ಕೇಂದ್ರ ತಂಡದ ವರದಿಯಂತೆ ಅತಿವೃಷ್ಟಿಯ ನಷ್ಟ ₹3000 ಕೋಟಿ. ವಾಸ್ತವದಲ್ಲಿ ಈ ಮೊತ್ತ ದೊಡ್ಡದಿದೆ. ಬೊಮ್ಮಾಯಿ ಅವರೇ, ಅಸಲಿ ‘ಜನಸ್ಪಂದನೆ’ ಎಂದರೆ ಸಂತ್ರಸ್ತರಿಗೆ ಪರಿಹಾರ ಒದಗಿಸುವುದು, ವಿಶೇಷ ಪ್ಯಾಕೇಜ್ ಘೋಷಿಸುವುದು, ಪರಿಹಾರಕ್ಕಾಗಿ ಕೇಂದ್ರಕ್ಕೆ ಒತ್ತಡ ಹಾಕುವುದು.

‘ಜನಸ್ಪಂದನೆ’ ಹೆಸರಲ್ಲಿ ಸಮಾವೇಶ ಮಾಡಿದರೆ ಜನರಿಗೆ ಸ್ಪಂದಿಸಿದಂತಾಗದು ಎಂದಿದೆ. ಇನ್ನು ಟೆಂಪ್ಟ್ ಆಗಿ ದೋಸೆ ತಿನ್ನಲು ಹೋಗಿದ್ದ ಎಳೆ ಸಂಸದ ತೇಜಸ್ವಿ ಸೂರ್ಯ ಈಗ ದಿಢೀರನೆ ಹೇಳಿಕೆ ಕೊಡಲು ಪ್ರತ್ಯಕ್ಷರಾಗಿದ್ದಾರೆ. ಸಂಸದರ ಪ್ರಕಾರ ಬೆಂಗಳೂರಿನ ಪ್ರವಾಹ ಷಡ್ಯಂತ್ರವಂತೆ.
ಇದನ್ನೂ ಓದಿ : https://vijayatimes.com/information-about-karnataka-unofficial-schools/
ವರುಣದೇವನ ಷಡ್ಯಂತ್ರವೇ? ಮೇಘರಾಜನ ಷಡ್ಯಂತ್ರವೇ? ಅಥವಾ 40% ಕಮಿಷನ್ ಲೂಟಿಕೋರರ ಷಡ್ಯಂತ್ರವೇ? ಸಂಸದರು ಉತ್ತರಿಸುವರೆ? ಎಂದು ಪ್ರಶ್ನಿಸಿದೆ. ನಮ್ಮ ಸರ್ಕಾರ ಇದ್ದಾಗಲೂ ಮಳೆ ಬಂದಿದೆ. ಆಗ ನಾವು ಅಗತ್ಯ ಕ್ರಮ ಕೈಗೊಂಡಿದ್ದೇವೆ. ಬಿಜೆಪಿಯವರಿಗೆ ಬೆಂಗಳೂರಿನ ಬೆಲೆ ಗೊತ್ತಿಲ್ಲ, ದೇಶಕ್ಕೆ ಅತಿ ಹೆಚ್ಚು ತೆರಿಗೆ ಪಾವತಿಸುವ ನಗರಗಳಲ್ಲೊಂದು ಬೆಂಗಳೂರು.

ಸರ್ಕಾರ ತಕ್ಷಣ ಎಚ್ಚೆತ್ತು ಬೆಂಗಳೂರು ನಗರದ ಮೂಲಸೌಕರ್ಯ ವ್ಯವಸ್ಥೆ ಸರಿಪಡಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಅತಿವೃಷ್ಟಿ ಹಾನಿಯಿಂದ ಇಡೀ ರಾಜ್ಯ ನಲುಗಿದೆ, ಆದರೆ ಕೇಂದ್ರ ಅಧ್ಯಯನ ತಂಡದಿಂದ ಫೋಟೋಶೂಟ್ಗಾಗಿ ಕೇವಲ 5 ನಿಮಿಷದಲ್ಲಿ ಕಾಟಾಚಾರದ ಸಮೀಕ್ಷೆ ನಡೆಸಲಾಗಿದೆ, ಇನ್ನು ಪರಿಹಾರ ಎಷ್ಟರ ಮಟ್ಟಿಗೆ ಬರಲಿದೆ? ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivkumar) ಪ್ರಶ್ನಿಸಿದ್ದಾರೆ.