Karnataka : ರಾಜಕೀಯ(Politics) ಹಿತಾಸಕ್ತಿಗೊಸ್ಕರ ಹಿಜಾಬ್(Hijab) ಹೆಸರಲ್ಲಿ ಹೆಣ್ಣುಮಕ್ಕಳ ಶಿಕ್ಷಣದ ಹಕ್ಕು ಕಿತ್ತುಕೊಂಡಿದ್ದು, ಸಿಎಂ ಹುದ್ದೆಯ ಜವಾಬ್ದಾರಿ ಮರೆತು, ಆಕ್ಷನ್ಗೆ ರಿಯಕ್ಷನ್ ಸಹಜ ಎನ್ನುವ ಮೂಲಕ ಸಮಾಜಘಾತುಕರಿಗೆ ಬೆಂಬಲಿಸಿದ, ಕೋಮು ಕಲಹಗಳನ್ನು ಹಬ್ಬಿಸಿ ಕಣ್ಮುಚ್ಚಿ ಕುಳಿತಿದ್ದು ಡರ್ಟಿ ಪಾಲಿಟಿಕ್ಸ್ ಅಲ್ಲವೇ? ಎಂದು ಕಾಂಗ್ರೆಸ್(Congress) ಪ್ರಶ್ನಿಸಿದೆ.

ಈ ಕುರಿತು ಬಿಜೆಪಿ(BJP) ವಿರುದ್ದ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, ಯಾರದ್ದು ಡರ್ಟಿ ಪಾಲಿಟಿಕ್ಸ್ ಪೇಸಿಎಂ ಬೊಮ್ಮಾಯಿ(Basavaraj Bommai) ಅವರೇ? ತಮ್ಮ ಸರ್ಕಾರದ ಭ್ರಷ್ಟಾಚಾರ, ವೈಫಲ್ಯಗಳನ್ನು ಜನಮಾನಸದಿಂದ ಮರೆಮಾಚಲು ವಾರಕ್ಕೊಂದು ಕೋಮು ವಿವಾದ ಸೃಷ್ಟಿಸಿ ಸಮಾಜವನ್ನು ಒಡೆದಿದ್ದು.
ಪ್ರಜಾಪ್ರಭುತ್ವ(Democracy) ಹಾಗೂ ಸಂವಿಧಾನಗಳ ಆಶಯಕ್ಕೆ ವಿರುದ್ಧವಾದ ಶಕ್ತಿಗಳಿಗೆ ‘ಮೌನ’ದಿಂದ ಬೆಂಬಲಿಸಿದ್ದು, ಬಿಜೆಪಿಯ ಡರ್ಟಿ ಪಾಲಿಟಿಕ್ಸ್ ಅಲ್ಲವೇ? ಡರ್ಟಿ ಪಾಲಿಟಿಕ್ಸ್ ಯಾರದ್ದು, ಆತ್ಮಾವಲೋಕ ಮಾಡಿಕೊಳ್ಳಿ ಬೊಮ್ಮಾಯಿ ಅವರೇ, ಪಕ್ಷಕ್ಕೆ ಹಗಲಿರುಳು ದುಡಿದ ಲಿಂಗಾಯತ ಸಮುದಾಯದ ನಾಯಕ ಯಡಿಯೂರಪ್ಪ(BS Yedurappa) ಅವರನ್ನ ಕಾರಣವನ್ನೇ ಹೇಳದೆ,
https://youtu.be/goe0pevvNrg ಭ್ರಷ್ಟ ಜಿವಿಕೆಯ 108 ಹಗರಣ!
ಸರ್ಕಾರದ 2ನೇ ವರ್ಷದ ಸಂಭ್ರಮದಲ್ಲೇ ಕಣ್ಣೀರು ಹಾಕಿಸಿ ಪದಚ್ಯುತಿಗೊಳಿಸಿದ್ದು, ಬಿಜೆಪಿಯ ಉನ್ನತ ನಾಯಕನನ್ನು ಮೂಲೆಗುಂಪು ಮಾಡಿದ್ದು, ಡರ್ಟಿ ಪಾಲಿಟಿಕ್ಸ್ ಅಲ್ಲವೇ? ಕುರ್ಚಿ ಉಳಿಸಿಕೊಳ್ಳುವ ಏಕೈಕ ಕಾರಣಕ್ಕೆ ಸಂಘ ಪರಿವಾರದ ಅಣತಿಯಂತೆ ಮಕ್ಕಳ ಪಠ್ಯದಲ್ಲೂ ರಾಜಕೀಯ ಅಜೆಂಡಾ ತೂರಿಸಿದ್ದು,
ನಾಡಿನ ಮಹನೀಯರಿಗೆ ಅವಮಾನ ಎಸಗಿದ್ದು, ಡರ್ಟಿ ಪಾಲಿಟಿಕ್ಸ್ ಅಲ್ಲವೇ? ಪಠ್ಯಪುಸ್ತಕಗಳಲ್ಲಿ ರಾಜಕೀಯ ಹಿತಾಸಕ್ತಿ ತೂರಿಸುವುದಕ್ಕಿಂತ ಬೇರೆ ಡರ್ಟಿ ಪಾಲಿಟಿಕ್ಸ್ ಇದೆಯೇ? ಎಂದು ಪ್ರಶ್ನಿಸಿದೆ. ಕಾಂಗ್ರೆಸ್ ವಿರುದ್ಧ ಸುಳ್ಳು ಆರೋಪ ಹೊರಿಸುವ ಷಡ್ಯಂತ್ರ ರೂಪಿಸಿದ್ದು, ತಾವೇ ಬಿಜೆಪಿ ಹೈಕಮಾಂಡಿಗೆ ಕಪ್ಪ ಕೊಟ್ಟಿದ್ದನ್ನ ಒಪ್ಪಿದ್ದು,

ಸುಳ್ಳು ಆರೋಪ ಹಿಡಿದು ಜಗ್ಗಾಡಿ, ತಮ್ಮ ಹುಳುಕು ಹೊರಬಂದಾಗ ಸದನದಲ್ಲಿ ಗಪ್ ಚುಪ್ ಆಗಿದ್ದು ಈ ಎಲ್ಲಾ ಯಾರದ್ದು ಡರ್ಟಿ ಪಾಲಿಟಿಕ್ಸ್? ನೆನಪಿದೆಯೇ ಪೇಸಿಎಂ ಬೊಮ್ಮಾಯಿ ಅವರೇ? ಅಂಬೇಡ್ಕರ್ರವರು ಬರೆದ ಸಂವಿಧಾನದ ವಿರುದ್ಧವಾಗಿ ಆಪರೇಷನ್ ಕಮಲ ಮಾಡಿ ಅಸಂವಿಧಾನಿಕ ಸರ್ಕಾರ ರಚಿಸಿದ್ದು,
ಇದನ್ನೂ ಓದಿ : https://vijayatimes.com/girl-cried-for-rahul-gandhi/
ಮುಂಬೈ ಹೋಟೆಲ್ನಲ್ಲಿಟ್ಟು ಹನಿಟ್ರಾಪ್, ಸಿಡಿ ಮಾಡಿ ಬ್ಲಾಕ್ಮೇಲ್ ಮಾಡಿದ್ದು, ಆಪರೇಷನ್ ಕಮಲಕ್ಕೆ ₹1000 ಕೋಟಿ ಖರ್ಚು ಮಾಡಿದ್ದು ಯಾರದ್ದು ಡರ್ಟಿ ಪಾಲಿಟಿಕ್ಸ್? ಅಲ್ಲವೇ? ಎಂದು ಟೀಕಿಸಿದೆ.
- ಮಹೇಶ್.ಪಿ.ಎಚ್