Karnataka : ರಾಜ್ಯ ರಾಜಧಾನಿ ಬೆಂಗಳೂರು(Bengaluru) ನಗರದಲ್ಲಿ ಕಳೆದ ವಾರ ಸುರಿದ ಭಾರಿ ಮಳೆಯ ಹಿನ್ನಲೆ ನಗರದ ಪ್ರಮುಖ ರಸ್ತೆಗಳು ಜಲಾವೃತಗೊಂಡಿದ್ದು,
ನಗರದ ಕೆಲ ರಸ್ತೆಗಳು ಸೇರಿದಂತೆ ಮನೆ, ಕಛೇರಿ, ಐಟಿ ಸಂಸ್ಥೆಗಳು ಮಳೆ ನೀರಿಗೆ ಸಿಲುಕಿಕೊಂಡಿದೆ. ವಾರಪೂರ್ತಿ ಸುರಿದ ಭಾರಿ ಮಳೆಗೆ ಬೆಂಗಳೂರಿನ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು.

ಬೆಂಗಳೂರಿನ ಜನರು ಮಳೆ ನೀರಿಗೆ ತತ್ತರಿಸಿ ಹೋಗಿದ್ದು, ಮನೆಯಿಂದ ಹೊರಬರಲಾಗದೆ, ತಮ್ಮ ದಿನನಿತ್ಯದ ಕೆಲಸಕ್ಕೂ ಹೋಗಲಾರದೆ, ಮನೆಯಲ್ಲೂ ಇರಲಾರದೆ ಪರದಾಡುವಂತ ಪರಿಸ್ಥಿತಿ ಎದುರಾಗಿತ್ತು.
ಮಳೆಯ ಆರ್ಭಟಕ್ಕೆ ತುತ್ತಾದ ಕೆಲ ನಗರದ ಜನಸಾಮಾನ್ಯರು, ರಾಜ್ಯ ಸರ್ಕಾರಕ್ಕೆ ಹಿಡಿ ಶಾಪ ಹಾಕುವ ಮುಖೇನ ತಮ್ಮ ಅಸಮಾಧಾನ ಹೊರಹಾಕಿದರು.
ಇನ್ನು ಕೆಲ ಹೊರರಾಜ್ಯಗಳಿಂದ ವಲಸೆ ಬಂದವರು, ಬೆಂಗಳೂರು ರಾಜ್ಯಕ್ಕೆ ಮನಬಂದಂತೆ ಬೈಗುಳವ ನೀಡಿ, ಮಳೆಯ ಅವಾಂತರಕ್ಕೆ ಅನ್ನ ಕೊಟ್ಟ, ಜೀವನ ಕೊಟ್ಟ,
ಬದುಕನ್ನು ಕಟ್ಟಿಕೊಟ್ಟ ಬೆಂಗಳೂರನ್ನು ತಮಗೆ ಬೇಡವೆಂದಾಗ ಬೈದು ಹೋಗಿದ್ದಾರೆ. ಇಂಥವರಿಗೆ ರಾಜ್ಯದ ಜನರು ಧಿಕ್ಕಾರ ಕೂಗಿ, ಹಿಡಿಶಾಪ ಹಾಕಿದ್ದಾರೆ!

ಈ ಮಧ್ಯೆ ರಾಜ್ಯ ಸರ್ಕಾರದ ಸಚಿವರು ಸೇರಿದಂತೆ ಆಡಳಿತ ಅಧಿಕಾರಿಗಳನ್ನು ಜನಸಾಮಾನ್ಯರು ಪ್ರಶ್ನೆ ಮಾಡುತ್ತಿದ್ದರೆ, ಇತ್ತ ಕಾಂಗ್ರೆಸ್(Congress) ಬಿಜೆಪಿ ರಾಜಕೀಯ(Politics) ಹಣಾಹಣಿ ಪ್ರಮುಖವಾದವು. “ಮಳೆಯಿಂದ ಜನರು ಪರದಾಡುತ್ತಿದ್ದರೆ,
ಅತ್ತ ಸಂಸದ ತೇಜಸ್ವಿ ಸೂರ್ಯ(Tejaswi Surya) ಟೆಂಪ್ಟ್ ಆಗಿ ದೋಸೆ ಸವಿಯಲು ಹೋಗಿದ್ದಾರೆ”. ಇಂಥವರಿಗೆ ಏನು ಹೇಳಬೇಕು? ಜನರ ಕಷ್ಟವನ್ನು ಬಗೆಹರಿಸದೆ ದೋಸೆ ಸವಿಯಲು ಹೋದವರು ಎಂಥ ಸಂಸದರು ಎಂದು ಟೀಕೆ ಮಾಡಿದೆ.
ಇದನ್ನೂ ಓದಿ : https://vijayatimes.com/congress-slams-bc-patil/
ಇದಕ್ಕೆ ಪ್ರತ್ಯುತ್ತರ ನೀಡಿದ ತೇಜಸ್ವಿ ಸೂರ್ಯ ಬೆಂಗಳೂರಿನ ಎಲ್ಲಾ ನಗರದಲ್ಲೂ ನೀರು ನಿಂತಿಲ್ಲ, ತೊಂದರೆಯಾಗಿಲ್ಲ. ನನ್ನ ಕ್ಷೇತ್ರಗಳಾದ ವಿಜಯನಗರ, ಗೋವಿಂದರಾಜನಗರ, ಬಸವನಗುಡಿ, ಚಿಕ್ಕಪೇಟೆ ಈ ನಗರಗಳಲ್ಲಿ ಜನಜೀವನ ಎಂದಿನಂತೆ ನಡೆದುಕೊಂಡು ಬರುತ್ತಿವೆ.
ಆದ್ರೆ, ಈ ಕಾಂಗ್ರೆಸ್ಸಿಗರು ನಾನು ದೋಸೆ ಮಾಡುವ ಹೋಟೆಲ್ ಉದ್ಘಾಟನೆಗೆ ಬಂದದ್ದನ್ನು ಅಪಹಾಸ್ಯ ಮಾಡಿದ್ದಾರೆ. ಅವರಿಗೆ ಮಾಡಲು ಬೇರೆ ಕೆಲಸವಿಲ್ಲ!