Telangana : ಪ್ರಜಾಪ್ರಭುತ್ವವನ್ನು ಕೊಲ್ಲುತ್ತಿರುವ ಆಪರೇಷನ್ ಕಮಲ(Congress slams Telangana BJP) ಎಂಬ ಸೋಂಕು ಕರೋನಾಗಿಂತಲೂ ಅಪಾಯಕಾರಿ. ತೆಲಂಗಾಣದಲ್ಲಿ ಬಿಜೆಪಿಯ ಕುದುರೆ ವ್ಯಾಪಾರದ ಬಣ್ಣ ಬಯಲಾಗಿದೆ ಎಂದು ರಾಜ್ಯ ಕಾಂಗ್ರೆಸ್ ಬಿಜೆಪಿ ವಿರುದ್ದ ತೀವ್ರ ವಾಗ್ದಾಳಿ ನಡೆಸಿದೆ.

ತೆಲಂಗಾಣದಲ್ಲಿ ಟಿಆರ್ಎಸ್ ಪಕ್ಷದ(TRS Party) ಶಾಸಕರನ್ನು ಸೆಳೆಯಲು ಬಿಜೆಪಿ ಆಪರೇಷನ್ ಕಮಲ ನಡೆಸಲು ಮುಂದಾಗಿದೆ ಎಂಬ ಮಾದ್ಯಮಗಳ ವರದಿಯ ನಂತರ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿರುವ ರಾಜ್ಯ ಕಾಂಗ್ರೆಸ್
, ತೆಲಂಗಾಣದಲ್ಲಿ ಆಪರೇಷನ್ ಕಮಲ ಮಾಡಲು ಬಂದವರಲ್ಲಿ 15 ಕೋಟಿ ಹಣ (Congress slams Telangana BJP) ದೊರಕಿದೆ,
ಅದಲ್ಲದೆ ನೂರಿನ್ನೂರು ಕೋಟಿಗೂ ಅಧಿಕ ಮೊತ್ತದ ವ್ಯವಹಾರ ಅದಾಗಿದೆ. ಐಟಿ, ಇಡಿಗಳು ಇದುವರೆಗೂ ಆ ಪ್ರಕರಣವನ್ನು ಕೈಗೆತ್ತಿಕೊಂಡಿಲ್ಲವೇಕೆ? ಆ ಅಕ್ರಮ ಹಣದ ಮೂಲ ಹುಡುಕುವ ಮನಸಿಲ್ಲವೇ? ಎಂದು ಪ್ರಶ್ನಿಸಿದೆ.
ಐಟಿ, ಇಡಿಗಳಿಗೆ ಬಿಜೆಪಿಯವರ ಮನೆಗೆ ನುಗ್ಗಲು ಭಯವೇ? ಕರ್ನಾಟಕದಲ್ಲಿ ಶುರುವಾದ ಆಪರೇಷನ್ ಕಮಲ ಎಂಬ ಸೋಂಕು ದೇಶದಾದ್ಯಂತ ಹರಡಿ ಪ್ರಜಾಪ್ರಭುತ್ವವನ್ನು ಕೊಲ್ಲುತ್ತಿದೆ.
ಇದನ್ನೂ ಓದಿ : https://vijayatimes.com/review-of-appu-gandadagudi/
ದೇಶಾದ್ಯಂತ ಶಾಸಕರನ್ನು ಖರೀದಿಸಲು ಏಳರಿಂದ ಎಂಟು ಸಾವಿರ ಕೋಟಿ ಖರ್ಚು ಮಾಡಿರುವ ಆರೋಪ ಬಿಜೆಪಿ ಮೇಲಿದೆ. ಕರ್ನಾಟಕ, ಗೋವಾ, ಮಹಾರಾಷ್ಟ್ರದ ನಂತರ ಈಗ ತೆಲಂಗಾಣಕ್ಕೆ ಭ್ರಷ್ಟ ಹಣ ತಲುಪಿದೆ.
ಕುರುಡು ಕಾಂಚಾಣ ಕುಣಿಯುತಲಿತ್ತು, ಕಾಲಿಗೆ ಸಿಕ್ಕವರ ತುಳಿಯುತಲಿತ್ತು ಎಂಬ ಬೇಂದ್ರೆಯವರ ಸಾಲಿನಂತೆ ಭ್ರಷ್ಟ ಕಾಂಚಾಣದಿಂದ ಬಿಜೆಪಿಯು ಪ್ರಜಾಪ್ರಭುತ್ವವನ್ನು ಕಾಲಡಿಯಲ್ಲಿ ಹಾಕಿಕೊಂಡು ತುಳಿಯುತ್ತಿದೆ ಎಂದು ಲೇವಡಿ ಮಾಡಿದೆ.
ಪ್ರಜಾಪ್ರಭುತ್ವವನ್ನು ಕೊಲ್ಲುತ್ತಿರುವ ಆಪರೇಷನ್ ಕಮಲ ಎಂಬ ಸೋಂಕು ಕರೋನಾಗಿಂತಲೂ ಅಪಾಯಕಾರಿ. ತೆಲಂಗಾಣದಲ್ಲಿ ಬಿಜೆಪಿಯ ಕುದುರೆ ವ್ಯಾಪಾರದ ಬಣ್ಣ ಬಯಲಾಗಿದೆ.
ಬಿಜೆಪಿಗೆ ಈಗ ಭ್ರಷ್ಟ ಹಣದ ಮದವೇರಿದೆ, ಪ್ರಜಾಪ್ರಭುತ್ವವನ್ನೇ ಖರೀದಿಸಲು ಹೊರಟಿದೆ.

ತೆಲಂಗಾಣದ ಆಪರೇಷನ್ ಕಮಲದ ವ್ಯವಹಾರದಲ್ಲಿ ಶಾಸಕರ ಮುಖಂಡತ್ವ ವಹಿಸುವವರಿಗೆ ₹100 ಕೋಟಿ. ಬರುವ ಪ್ರತಿ ಶಾಸಕರಿಗೆ ₹50 ಕೋಟಿ. ಈ ಮೊತ್ತದ ಹಣ ಬಂದಿದ್ದು ಹೇಗೆ? ಎಂದು ಪ್ರಶ್ನಿಸಿದೆ.
- ಮಹೇಶ್.ಪಿ.ಎಚ್