75 ವರ್ಷಗಳ ಅವಧಿಯಲ್ಲಿ ದೇಶದಲ್ಲಿ ದ್ವೇಷದ ಕಿಚ್ಚು, ಹಿಂಸಾಚಾರದ ಬೆಂಕಿ ಹತ್ತಿ ಉರಿಯುತ್ತಿದ್ದರೇ ಇತ್ತ ದೇಶದ ಪ್ರಧಾನಿಯಾಗಿರುವ(PrimeMinister) ನರೇಂದ್ರ ಮೋದಿಯವರು(Narendra Modi) ಮೌನ ತೋರುವಲ್ಲಿ ಯಶಸ್ವಿಯಾಗಿರುವ ಮೊದಲ ಪ್ರಧಾನಿ ಮೋದಿ ಎಂದು ಹೇಳುವ ಮೂಲಕ ಮಾತಿನ ಚಾವಟಿ ಬೀಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಹಿಜಾಬ್, ಹಲಾಲ್, ಧ್ವನಿವರ್ಧಕ, ಮಾವಿನಹಣ್ಣು ವ್ಯಾಪಾರ ಸೇರಿದಂತೆ ಅನೇಕ ವಿಚಾರಗಳು ಕೋಮು ಸಂಘರ್ಷಕ್ಕೆ ಕಾರಣ ಮಾಡಿಕೊಡುತ್ತಿದೆ. ದೇಶದ ಜನರಲ್ಲಿ ವಿಷ ಬೀಜನೆ ಬಿತ್ತಲಾಗುತ್ತಿದೆ. ಜನಸಾಮಾನ್ಯರಲ್ಲಿ ಸೌಹಾರ್ದತೆ, ಪ್ರೀತಿ, ಭ್ರಾತೃತ್ವ ಬೆಳೆಸುವ ಪ್ರವೃತ್ತಿ ಕಾಣೆಯಾಗಿದೆ! ಒಡೆದಾಟ, ಬಡಿದಾಟ, ಕೋಮು ಸಂಘರ್ಷಗಳು ದೇಶದಲ್ಲಿ ಪ್ರತ್ಯೇಕ ವಿಷಯವಾಗಿ ಹೊರಹೊಮ್ಮುತ್ತಿದೆ ಎಂದು ಹೇಳಲಾಗುತ್ತಿದೆ.
ಸದ್ಯ ಇಂಥ ಹಲವು ವಿಚಾರಗಳನ್ನು ಪ್ರಮುಖ ಅಂಶವಾಗಿ ಗುರಿಯಾಗಿಸಿಕೊಂಡ ಕಾಂಗ್ರೆಸ್ ಹಿರಿಯ ವ್ಯಕ್ತಿ ಮಲ್ಲಿಕಾರ್ಜುನ್ ಖರ್ಗೆ, ಭಾರತದ 75 ವರ್ಷಗಳ ಇತಿಹಾಸದಲ್ಲಿ ದೇಶದಲ್ಲಿ ದ್ವೇಷ, ಹಿಂಸಾಚಾರ ಬೆಂಕಿಯ ಜ್ವಾಲೆಯಾಗಿ ಉರಿಯುತ್ತಿದ್ದರು ಪ್ರಧಾನಿ ಮೋದಿ ಮೌನ ತೋರಿರುವುದೇ ಸಾಕಷ್ಟು ಉತ್ತರ ನೀಡುತ್ತಿದೆ ಎಂದು ಪರೋಕ್ಷವಾಗಿ ಪ್ರಧಾನಿಗಳನ್ನು ಕುಟುಕಿದ್ದಾರೆ. ಮಲ್ಲಿಕಾರ್ಜುನ್ ಖರ್ಗೆ ಅವರ ಈ ಟ್ವೀಟ್ ಬೆನ್ನಲ್ಲೇ ಸಾಕಷ್ಟು ರೀ-ಟ್ವೀಟ್ ಬಂದಿದ್ದು, ಮೋದಿ ಅವರ ಮೌನ ಹಿಂಸಾಚಾರ, ಕೋಮು ಗಲಭೆ ಸೃಷ್ಟಿಸುವುದು ಇದರ ಮೇಲೆ ಮಾತ್ರ ಎಂದು ಹೇಳಿದ್ದಾರೆ.
ಮತ್ತೋರ್ವ ಮೋದಿಯವರು ಮೌನ ಮುರಿದಿರುವುದು ಬಹಳ ಒಳ್ಳೆಯದು, ಇಲ್ಲದಿದ್ದರೇ ಅವರಿಗೆ ನೇರವಾಗಿ ಮತ್ತಷ್ಟು ಬೆಂಬಲ ಲಭಿಸುತ್ತಿತ್ತು ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.