ಕಾನ್ಸ್‌ಟೇಬಲ್ ನೇಮಕ ಅರ್ಜಿದಾರ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್

ಬೆಂಗಳೂರು, ಡಿ. 19: ಸಶಸ್ತ್ರ ಪೊಲೀಸ್ ಕಾನ್ಸ್ ಟೇಬಲ್ (ಸಿಎಆರ್/ಡಿಎಆರ್) (ಪುರುಷ) ಎನ್ ಕೆಕೆ-1005 ಮತ್ತು ಕೆಕೆ-444 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ಈಗಾಗಲೇ ಇಟಿ-ಪಿ ಎಸ್ ಟಿ ಪರೀಕ್ಷೆಗಳು ನಿಗಧಿಯಾಗಿರುತ್ತದೆ. ಆದರೆ ಕೆಲವು ಅಭ್ಯರ್ಥಿಗಳು ಕಲ್ಯಾಣ ಕರ್ನಾಟಕ ಮತ್ತು ನಾನ್ ಕಲ್ಯಾಣ ಕರ್ನಾಟಕ ಎರಡೂ ಹುದ್ದೆಗಳಿಗೂ ಸಹ ಇಟಿ, ಪಿ ಎಸ್ ಟಿ ಪರೀಕ್ಷೆಗೆ ಆಯ್ಕೆಯಾಗಿರುತ್ತಾರೆ. ಆದರೆ  ಎರಡಕ್ಕೂ ಒಂದೇ ದಿನಾಂಕದಂದು ಇಟಿ, ಪಿ ಎಸ್ ಟಿ ಪರೀಕ್ಷೆ ನಿಗದಿಯಾಗಿದ್ದರಿಂದಾಗಿ ಹಲವು ಅಬ್ಯರ್ಥಿಗಳು  ಪರೀಕ್ಷೆಗೆ ಹಾಜರಾಗಲು ತೊಂದರೆ ಆಗಿತ್ತು.

ಇದರಿಂದ  ಹಲವಾರು ಅಬ್ಯರ್ಥಿಗಳು  ಪರೀಕ್ಷೆಯಿಂದ ವಂಚಿತರಾಗುವಂತಾಗಿತ್ತು.ಆದರೀಗ  ಇಂತಹ ಅಭ್ಯರ್ಥಿಗಳು, ದಿನಾಂಕ 24-12-2020ರಂದು ಮರು  ನಡೆಸುವಂತ ಇಟಿ, ಪಿ ಎಸ್ ಟಿ ಪರೀಕ್ಷೆಗೆ ಹಾಜರಾಗುವಂತೆ ರಾಜ್ಯ ಪೊಲೀಸ್ ಇಲಾಖೆ ತಿಳಿಸಿದೆ.ಅಬ್ಯರ್ಥಿಗಳು ಯಾವ ಜಿಲ್ಲೆಯ ಇಟಿ/ಪಿಎಸ್ ಟಿ ಗೆ ಹಾಜರಾಗಿಲ್ಲವೋ ಆ ಜಿಲ್ಲೆಗೆ  ದಿನಾಂಕ 24-12-2020 ರಂದು ಹಾಜರಾಗಬೇಕಾಗಿ ಕೋರಿದೆ. ಪರೀಕ್ಷೆಗೆ ವಂಚಿತರಾದವರಿಗೆ ಮತ್ತೊಮ್ಮೆ ಕಾಲ್‌ಶೀಟ್ ನೀಡುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest News

ಪ್ರಮುಖ ಸುದ್ದಿ

ತಾಜುದ್ದೀನ್ಜುನೈದೀ ಮತ್ತು  ಶಿವಮೊಗ್ಗ ಸುಬ್ಬಣ್ಣ ನಿಧನಕ್ಕೆ ಗಣ್ಯರ ಸಂತಾಪ

ಪ್ರಖ್ಯಾತ ಗಾಯಕರು, ತಮ್ಮ ಸುಸ್ವರದ ಮೂಲಕ ಕವಿ ಗೀತೆಗಳಿಗೆ ಮೆರುಗು ತಂದುಕೊಟ್ಟಿದ್ದ ಶ್ರೀ ಶಿವಮೊಗ್ಗ ಸುಬ್ಬಣ್ಣ ಅವರ ನಿಧನದ ಸುದ್ದಿ ಕೇಳಿ ಬಹಳ ದುಃಖವಾಗಿದೆ.

ದೇಶ-ವಿದೇಶ

ಒಡಿಶಾದಲ್ಲಿ ಆಘಾತಕಾರಿ ಘಟನೆ ; ಹಾಡಹಗಲೇ ವೃದ್ಧನನ್ನು ಕಂಬಕ್ಕೆ ಕಟ್ಟಿ, ಥಳಿಸಿ ಕೊಂದ ಕುಟುಂಬಸ್ಥರು!

ಕೊರಾಪುಟ್ ಜಿಲ್ಲೆಯ ಬುಡಕಟ್ಟು ಪ್ರದೇಶದಲ್ಲಿ ಹಾಡಹಗಲೇ ವೃದ್ಧನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ತಮ್ಮ ಕುಟುಂಬಸ್ಥರೇ ಥಳಿಸಿ ಕೊಂದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ!

ಮಾಹಿತಿ

ಕಿಡ್ನಿ ಸ್ಟೋನ್‌ ಸಮಸ್ಯೆಗೆ ಇಲ್ಲಿದೆ ನೈಸರ್ಗಿಕ ಪರಿಹಾರ ; ಈ ಸರಳ ಪರಿಹಾರ ಪಾಲಿಸಿ

ಕೆಲವು ಮನೆಮದ್ದುಗಳು(Home Remedies) ಆರಂಭಿಕ ಹಂತದ ಕಿಡ್ನಿಸ್ಟೋನ್ ಸಮಸ್ಯೆಗೆ ಪರಿಹಾರ ನೀಡುತ್ತವೆ. ಅಂತಹ ಮನೆಮದ್ದುಗಳ ವಿವರ ಇಲ್ಲಿದೆ ನೋಡಿ.