India : ಕೇಂದ್ರ ಗೃಹ ಸಚಿವಾಲಯವು (Union Home Ministry) ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (Central Reserve Police Force) ನಲ್ಲಿ ಖಾಲಿ ಇರುವ ಕಾನ್ಸ್ಟೇಬಲ್ ಹುದ್ದೆಗಳ ವಿವರಣೆಗಳನ್ನು ಪ್ರಕಟಣೆ ಮಾಡಿದೆ. ಇದಲ್ಲದೆ ಈ ಕೆಲಸಗಳ ಭರ್ತಿಗೆ ನೇಮಕಾತಿ ಪ್ರಕ್ರಿಯೆಯನ್ನು ಕರಡು ನಿಯಮಾವಳಿಗಳ ಮೂಲಕ ಪ್ರಕಟಿಸಿದೆ.

ಕೇಂದ್ರ ಸರ್ಕಾರದ ಸದರಿ ಹುದ್ದೆಗಳನ್ನು ನೇಮಕಾತಿ ಪ್ರಾಧಿಕಾರವಾದ ಸಿಬ್ಬಂದಿ ನೇಮಕಾತಿ ಆಯೋಗವು ಪರೀಕ್ಷೆಯನ್ನು ನಡೆಸಿ ಭರ್ತಿ ಮಾಡಲಿದೆ. ಆದಷ್ಟು ಬೇಗ ಈ ಹುದ್ದೆಗಳಿಗೆ ಅಧಿಸೂಚಿಸಿ ಭರ್ತಿ ಮಾಡುವ ಪ್ರಕ್ರಿಯೆ ಪ್ರಾರಂಭವಾಗಲಿದೆ.
ಎಸ್ ಎಸ್ ಸಿ (SSC) ಮೂಲಕ ಸಿ.ಆರ್.ಪಿ.ಎಫ್ (CRPF) ನಲ್ಲಿ ಭರ್ತಿ ಮಾಡಲಿರುವ ಕಾನ್ಸ್ಟೇಬಲ್ ಹುದ್ದೆಗೆ (Constable post) ಒಟ್ಟು 1,29,929 ನೇಮಕ ಮಾಡಲಾಗಿದೆ. 1,25,262 ಸಂಖ್ಯೆ ಪುರುಷ ಮೀಸಲಾತಿ ಹಾಗೂ 4,667 ಮಹಿಳಾ ಮೀಸಲಾತಿ ಹುದ್ದೆಗಳು ಖಾಲಿ ಇದ್ದು,ಕಾನ್ಸ್ಟೇಬಲ್ ಹುದ್ದೆಗೆ ಮೆಟ್ರಿಕ್ಯುಲೇಷನ್ 10ನೇ ತರಗತಿ ಪಾಸ್ ಮಾಡಿರಬೇಕು.
ಇದನ್ನೂ ಓದಿ: https://vijayatimes.com/bollywood-actor-shahrukhkhan/
ದೈಹಿಕ ಸಾಮರ್ಥ್ಯ ಪರೀಕ್ಷೆ, ದೈಹಿಕ ಸಹಿಷ್ಣತೆ ಪರೀಕ್ಷೆ, ಲಿಖಿತ ಪರೀಕ್ಷೆಗಳನ್ನು ನಡೆಸಿ ಆಯ್ಕೆ ಮಾಡಲಾಗುತ್ತದೆ. ಆದರೆ ಮಾಜಿ ಅಗ್ನಿವೀರ್ ಅಭ್ಯರ್ಥಿಗಳಿಗೆ ಇ.ಟಿ, ಪಿ ಎಸ್.ಟಿ (ETPST) ಪರೀಕ್ಷೆ ವಿನಾಯಿತಿ ಇರುತ್ತದೆ. ಈ ಹುದ್ದೆಗೆ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ವಯಸ್ಸಾಗಿರಬೇಕು ಮತ್ತು ಸಾಮಾನ್ಯ ಕೆಟಗರಿ ಅಭ್ಯರ್ಥಿಗಳಿಗೆ ಗರಿಷ್ಠ 23 ವರ್ಷ ವಯಸ್ಸು ಮೀರಿರಬಾರದು,
ಇನ್ನು ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST) ಅಭ್ಯರ್ಥಿಗಳಿಗೆ ಗರಿಷ್ಠ 28 ವರ್ಷ ವಯಸ್ಸು ಮೀರಿರಬಾರದು ಹಾಗೂ ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳ ಗರಿಷ್ಟ 26 ವರ್ಷ ಮೀರಿರಬಾರದು. ಈ ಕಾನ್ಸ್ಟೇಬಲ್ ಹುದ್ದೆಗಳಿಗೆ ಪರೀಕ್ಷಣಾ ಅವಧಿ 2 ವರ್ಷ ಇರುತ್ತದೆ.
ಇದನ್ನೂ ಓದಿ: https://vijayatimes.com/support-for-a-political-party/
ಹಾಗೂ ಈ ಹುದ್ದೆಗಳಿಗೆ ಅರ್ಜಿ ಕರೆಯುವ ಅಧಿಸೂಚನೆ ಹೊರಡಿಸುವ ದಿನಾಂಕದ ಬಗ್ಗೆ ಯಾವುದೇ ಸುಳಿವು ನೀಡಿಲ್ಲ. ಆದರೆ ಸ್ಟಾಫ್ ಸೆಲೆಕ್ಷನ್ ಕಮಿಷನ್ ನೇಮಕಾತಿ ಪ್ರಾಧಿಕಾರವಾಗಿದ್ದು, ಅಭ್ಯರ್ಥಿಗಳು ಇನ್ನಷ್ಟು ಹೆಚ್ಚಿನ ಮಾಹಿತಿಗಾಗಿ https:!!ssc.nic.in! ಈ ವೆಬ್ ಸೈಟ್ ಭೇಟಿ ಮಾಡಿ.