ಶ್ರೀರಾಮ್ ಸೇನೆಯ(Sri Ram Sena) ಮುಖ್ಯಸ್ಥ ಮತ್ತು ಹಿಂದೂಪರ ಹೋರಾಟಗಾರ ಪ್ರಮೋದ್ ಮುತಾಲಿಕ(Pramod Muthalik) ಅವರ ತಲೆ ಕಡಿದರೆ 10 ಲಕ್ಷ ರೂ.ಗಳನ್ನು ನೀಡಲಾಗುವುದು ಎಂದು ಸಾಮಾಜಿಕ ಜಾಲತಾಣದಲ್ಲಿ(Social Media) ಪೋಸ್ಟ್ ಹಾಕಲಾಗಿದೆ.

ಅದೇ ರೀತಿ ಉಡುಪಿ ಸರ್ಕಾರಿ ಮಹಿಳಾ ಕಾಲೇಜಿನ ಉಪಾಧ್ಯಕ್ಷ ಯಶ್ ಪಾಲ್ ಸುವರ್ಣ ಅವರ ತಲೆ ಕಡಿದರು 10 ಲಕ್ಷ ರೂ. ನೀಡಲಾಗುವುದು ಎಂದು ಪೋಸ್ಟ್‍ನಲ್ಲಿ ಉಲ್ಲೇಖಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ‘ಮಾರಿಗುಡಿ’ ಎಂಬ ಪೇಜ್‍ನಲ್ಲಿ ಈ ಪೋಸ್ಟ್ ಹಾಕಲಾಗಿದ್ದು, ಈ ಇಬ್ಬರ ತಲೆ ಕಡಿದರೆ ಒಟ್ಟು 20 ಲಕ್ಷ ರೂ. ನಿಮ್ಮ ಖಾತೆಗೆ ಜಮಾ ಆಗಲಿದೆ. ಇಬ್ಬರ ತಲೆ ಉರುಳೋದು 100% ಖಚಿತ ಎಂದು ಜೀವ ಬೆದರಿಕೆ ಹಾಕಲಾಗಿದೆ. ಇನ್ನು ಪ್ರಮೋದ್ ಮುತಾಲಿಕ ಹಿಂದೂಪರ ಹೋರಾಟಗಾರರಾಗಿದ್ದು, ಇತ್ತೀಚಿಗೆ ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಧರ್ಮದಂಗಲ್‍ನ ಅನೇಕ ಹೋರಾಟಗಳಲ್ಲಿ ಸಕ್ರಿಯರಾಗಿದ್ದರು.
ಶ್ರೀರಾಮ ಸೇನೆಯ ಮೂಲಕ ಅನೇಕ ಹೋರಾಟಗಳ ನೇತೃತ್ವ ವಹಿಸಿದ್ದರು. ಹೀಗಾಗಿ ಅವರು ಕೆಲ ಮತಾಂಧ ಶಕ್ತಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇನ್ನು ಯಶ್ ಪಾಲ್ ಸುವರ್ಣ ಅವರು ಉಡುಪಿಯ(Udupi) ಸರ್ಕಾರಿ ಮಹಿಳಾ ಕಾಲೇಜಿನ ಉಪಾಧ್ಯಕ್ಷರಾಗಿ ಹಿಜಾಬ್(Hijab) ವಿವಾದದಲ್ಲಿ ಕಾಲೇಜಿನ ಪರವಾಗಿ ಕಾನೂನು ಹೋರಾಟ ನಡೆಸಿದ್ದರು. ಪಿಎಫ್‍ಐ ಮತ್ತು ಸಿಎಫ್‍ಐ ಸಂಘಟನೆಗಳನ್ನು ಉಗ್ರರು ಎಂದು ಟೀಕಿಸಿದ್ದರು.

ಇನ್ನು ಪ್ರಮೋದ್ ಮುತಾಲಿಕ ಮತ್ತು ಯಶ್ ಪಾಲ್ ಸುವರ್ಣ ಅವರಿಗೆ ಜೀವ ಬೆದರಿಕೆ ಹಾಕಿರುವ ಕುರಿತು ಕ್ರಮ ಕೈಗೊಳ್ಳುವಂತೆ ಕಾಪು ಪೊಲೀಸ್ ಠಾಣೆಗೆ, ಯುವ ಬಿಜೆಪಿ ಕಾರ್ಯಕರ್ತರು ದೂರು ನೀಡಿದ್ದಾರೆ.