Bengaluru: ಇತ್ತೀಚೆಗಂತೂ ಆಟೋ , ಕಾರ್ ಸೇರಿದಂತೆ ಹಲವು ವಾಹನಗಳ ಮೇಲೆ ತಮ್ಮ ಮೆಚ್ಚಿನ ನಟ ನಟಿಯರ ಫೊಟೋ ಇಲ್ಲವೆ ನಾಲ್ಕು ಸಾಲು ಬರಹಗಳ ಹಾಕಿಕೊಳ್ಳೋದು ಸರ್ವೇ ಸಾಮಾನ್ಯವಾಗಿದೆ.ಆದರೆ ಇದೀಗ ಸಾರಿಗೆ ಅಧಿಕಾರಿಗಳು (Transport officials) ವಾಹನಗಳ ಪೋಸ್ಟರ್ ವಿರುದ್ಧ ಕಾನೂನು ಕ್ರಮ (Legal action) ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.ವಾಹನಗಳ ಮೇಲೆ ವಿವಾದಾತ್ಮಕ, ಕ್ರೌರ್ಯ, ಅಶ್ಲೀಲ ಪೋಸ್ಟರ್ ಹಾಕಿದರೆ ಇನ್ನು ಮುಂದೆ ದಂಡ ಬೀಳಲಿದೆ.

ಇದಕ್ಕೆ ಸಂಬಂಧಿಸಿದಂತೆ ಸಾರಿಗೆ ಅಧಿಕಾರಿಗಳು ಕಣ್ಣಿಟ್ಟಿದ್ದು, ದಂಡದ ಜೊತೆ ಸೀಜ್ (Siege) ಮಾಡುವ ಪ್ಲ್ಯಾನ್ ಮಾಡುತ್ತಿದ್ದಾರೆ.ಹೌದು, ಆಟೋ, ಟ್ಯಾಕ್ಸಿ, ಇತರೆ ವಾಹನ ಚಾಲಕರ ಗಮನದಲ್ಲಿರಲಿ. ವಾಹನಗಳ ಮೇಲೆ ನೆಚ್ಚಿನ ನಟರ ಫೋಟೋ ಹಾಕಿ, ಯಾವುದೋ ವಿವಾದಾತ್ಮಕ ಫೋಟೋ ಅಥವಾ ಬರಹಗಳನ್ನು ಹಾಕಿ ಸಮಾಜದ ಸ್ವಾಸ್ಥ್ಯ ಕೆಡಿಸುವವರ ವಿರುದ್ಧ ಸಾರಿಗೆ ಇಲಾಖೆಯ ಅಧಿಕಾರಿಗಳು (Officials of the Transport Department) ಸಮರ ಸಾರಲು ಮುಂದಾಗಿದ್ದಾರೆ.ನಟರು ಮಚ್ಚು ಹಿಡಿಯುವ ಪೋಸ್ಟರ್ ಅಥವಾ ಕೆಲವರ ಭಾವನೆಗಳನ್ನು ಕೆರಳಿಸುವ ಬರಹಗಳು, ಫೋಟೋಗಳನ್ನು ಹಾಕಿದರೆ ಅಧಿಕಾರಿಗಳು ದಂಡ (Penalty) ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಆಯಾ ಪ್ರಾದೇಶಿಕ ಸಾರಿಗೆ ಕಚೇರಿಯ ಅಧಿಕಾರಿಗಳ ತಂಡ ಇಂತಹ ವಾಹನಗಳ ಪರಿಶೀಲನೆಗೆ ಇಳಿಯಲಿದೆ. ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ಚಾಲಕರು, ತಮ್ಮ ವಾಹನಗಳ ಮೇಲೆ ಯಾವುದಾದರೂ ಹಳೆಯ ಕೇಸುಗಳಿದ್ದರೆ ಅಂತ ವಾಹನಗಳನ್ನ ಅಧಿಕಾರಿಗಳು ಸೀಜ್ ಮಾಡಲಿದ್ದಾರೆ.ಅಶ್ಲೀಲ, ಅಸಭ್ಯ ಹಾಗೂ ಕ್ರೌರ್ಯವನ್ನು ಬಿಂಬಿಸುವ ಬರಹಗಳು, ಕೆಲವು ಪೋಸ್ಟರ್‌ಗಳನ್ನ ಆಟೋ, ಟ್ಯಾಕ್ಸಿಗಳ ಮೇಲೆ ಹಾಕಿರುವುದು ಸಾಮಾಜಿಕ ಜಾಲತಾಣಗಳಲ್ಲಿ (Social networks) ವೈರಲ್ ಆಗ್ತಿವೆ. ಇದು ನಕಾರಾತ್ಮಕ ಪರಿಣಾಮ ಬೀಳುತ್ತಿದ್ದು, ಸಾರಿಗೆ ನಿಯಮಗಳನ್ನ ಉಲ್ಲಂಘಿಸಿ ಇಂತಹ ಪೋಸ್ಟರ್‌ಗಳನ್ನು ಹಾಕುವುದನ್ನು ನಿಲ್ಲಿಸಿ ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳು ಮನವಿ ಮಾಡಿದ್ದಾರೆ.ಕೆಲವು ಕಂಪನಿ, ಸಂಸ್ಥೆಗಳ ಜಾಹೀರಾತುಗಳನ್ನು (Advertisements), ಪೋಸ್ಟರ್ ಕವರ್ (Poster cover) ಹಾಕಿಕೊಳ್ಳಲು ನಗರ ಜಿಲ್ಲಾಧಿಕಾರಿಗಳು (Collectors) ಅನುಮತಿ ಕೊಟ್ಟಿದ್ದು, ಅದನ್ನ ಹೊರತುಪಡಿಸಿ ಇತರೆ ಪೋಸ್ಟರ್‌ಗಳನ್ನು ಹಾಕಿಕೊಳ್ಳುವುದು ಕೂಡ ನಿಯಮ ಉಲ್ಲಂಘನೆ. ಇಷ್ಟು ದಿನ ಸುಮ್ಮನಿದ್ದ ಸಾರಿಗೆ ಇಲಾಖೆಯ ಅಧಿಕಾರಿಗಳು, ಇದೀಗ ನಿಯಮ ಉಲ್ಲಂಘಿಸಿ (Break the rules) ಪೋಸ್ಟರ್ ಹಾಕಿಕೊಂಡವರ ವಿರುದ್ಧ ದಂಡಾಸ್ತ್ರ ಪ್ರಯೋಗ ಮಾಡಲಿದ್ದಾರೆ.