ಬೆಂಗಳೂರು, ಆ. 14: ಮಾಜಿ ಪ್ರಧಾನಿ ವಾಜಪೇಯಿ ಅವರಿಗೆ ದಿನಕ್ಕೆ 2 ಪೆಗ್ ವಿಸ್ಕಿ ಬೇಕಿತ್ತಂತೆ ಅವರು ಹೇವಿ ಡ್ರಿಂಕರ್ ಎಂದು ಕಾಂಗ್ರೆಸ್ ನಾಯಕ ಪ್ರಿಯಾಂಕ ಖರ್ಗೆ ವಿವಾದತ್ಮಕ ಹೇಳಿಕೆ ನೀಡಿದ್ದಾರೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಕುಡಿಯುವ ಚಟವಿತ್ತಂತೆ ಅವರಿಗೆ ದಿನಕ್ಕೆ 2 ಪೆಗ್ ಬೇಕಿತ್ತು, ಹಾಗಂತ ಎಲ್ಲಾ ಅವರ ಹೆಸರಿನಲ್ಲಿ ಬಾರ್ ತೆರೆಯೋಕೆ ಆಗುತ್ತಾ ಸಿ.ಟಿ. ರವಿ ನೆಹರೂ ಬಗ್ಗೆ ಮಾತನಾಡುವುದರಿಂದಾಗಲಿ ಅಥವಾ ನಾನು ವಾಜಪೇಯಿ ಬಗ್ಗೆ ಮಾತನಾಡುವುದರಿಂದಾಗಲಿ ಅವರ ಘನತೆ ಕುಂದುವುದಿಲ್ಲ ಎಂದು ಅವರು ಪ್ರತಿಕ್ರಿಯಿಸಿದರು.
ಇಂದಿರಾ ಕ್ಯಾಂಟಿನ್ ಹೆಸರ ವಿಚಾರದಲ್ಲಿ ಸಿ.ಟಿ. ರವಿ ಅವರು ಕಾಂಗ್ರೆಸ್ ಕಚೇರಿಯಲ್ಲಿ ಬೇಕಾದರೆ ಇಂದಿರಾ ಗಾಂಧಿ ಕ್ಯಾಂಟಿನ್ ಜೊತೆ ನೆಹರೂ ಹುಕ್ಕಾ ಬಾರ್ ಬೇಕಾದರೂ ತೆರೆಯಲಿ ನಮ್ಮ ಅಭ್ಯಂತರವೇನಿಲ್ಲ ಎಂಬ ವಿವಾದತ್ಮಕ ಹೇಳಿಕೆ ನೀಡಿದ್ದರು. ಈ ಹೇಳಿಕೆ ವಿರೋಧಿಸಿ ಇಂದು ಪ್ರಿಯಾಂಕ ಖರ್ಗೆ ಮತ್ತು ಈಶ್ವರ ಖಂಡ್ರೆ ಸಿ.ಟಿ. ರವಿ ಅವರಿಗೆ ತಿರುಗೇಟು ನೀಡಿದ್ದಾರೆ.