ಕಾಂಗ್ರೆಸ್(Congress) ಮತ್ತು ಜೆಡಿಎಸ್ ಪಕ್ಷಗಳು(JDS Party) ಆ ಹೊತ್ತಿನ ಗಂಜಿ ಹುಡುಕಿಕೊಳ್ಳುವ ಕಾರ್ಯದಲ್ಲಿ ಮಗ್ನವಾಗಿವೆ. ಎರಡೂ ಪಕ್ಷಗಳಿಗೆ ಒಂದು ಹೊತ್ತಿನ ಗಂಜಿಯೇ ಮುಖ್ಯವಾಗಿದೆ.

ಇನೊಂದೆಡೆ ರಾಜ್ಯ ಸರ್ಕಾರ ಮಕ್ಕಳಿಗೆ ವಿಷ ಉಣಿಸುತ್ತಿದೆ ಎಂದು ಕಾಂಗ್ರೆಸ್ ಶಾಸಕ(Congress MLA) ರಮೇಶ್ ಕುಮಾರ್(Ramesh Kumar) ಬೇಸರ ವ್ಯಕ್ತಪಡಿಸಿದರು. ಬಾಗೇಪಲ್ಲಿಯಲ್ಲಿ(Bhagepalli) ನಡೆದ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ(GV Sriramareddy) ಅವರ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮಕ್ಕಳು ಓದುವ ಪಠ್ಯಪುಸ್ತಕದಲ್ಲಿ ಕೋಮುವಾದ ತುಂಬಲಾಗುತ್ತಿದೆ. ಪಠ್ಯಪುಸ್ತಕದಲ್ಲಿ ಕೋಮುವಾದಿಗಳ ಅಟ್ಟಹಾಸ ಮೆರೆಯುತ್ತಿದೆ.
ಇದನ್ನು ವಿರೋಧಿಸಿ ಹೋರಾಟ ನಡೆಸಬೇಕಾದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಆ ಹೊತ್ತಿನ ಗಂಜಿಯನ್ನು ಹುಡುಕಿಕೊಳ್ಳುತ್ತಿವೆ ಎಂದು ಅಭಿಪ್ರಾಯಪಟ್ಟರು. ಇಂದು ದೇಶದಲ್ಲಿ ಜನರ ಹಿತಕ್ಕಿಂತ ಜನರನ್ನು ಮರಳು ಮಾಡುವ ಮಾತುಗಳಿಗೆ ಹೆಚ್ಚು ಪ್ರಾಮುಖ್ಯಕತೆ ಇದೆ. ದೇಶದ ಆಡಳಿತ ವಿವಿಧ ವೇಷ ತೊಟ್ಟವರ ಮತ್ತು ಬಹುಮೂರ್ತಿಗಳದ್ದೇ ಆಗಿದೆ. ಹೀಗಾಗಿ ಇದೊಂದು ಬುಡಬುಡಿಕೆ ಆಳ್ವಿಕೆ. ಈ ಆಳ್ವಿಕೆಯಲ್ಲಿ ಜನರ ಹಿತಕ್ಕೆ ಬೆಲೆಯಿಲ್ಲ.

ಎಲ್ಲವೂ ಮಾತಿನಲ್ಲೇ ಮಾಡಲಾಗುತ್ತದೆ ಎಂದು ವ್ಯಂಗ್ಯವಾಡಿದರು. ಇನ್ನು ಕೋಮುವಾದವನ್ನೇ ಜೀವಾಳವಾಗಿಸಿಕೊಂಡಿದ್ದ ಮತ್ತು ರಾಷ್ಟ್ರಧ್ವಜದ ಕುರಿತು ಕಿಂಚಿತ್ತೂ ಗೌರವ ಇಲ್ಲದ ಹೆಡಗೇವಾರ್ ಅವರಂತ ಕೋಮುವಾದಿಗಳ ಲೇಖನ ಪಠ್ಯ ಸೇರುತ್ತಿದ್ದರೂ, ಕಾಂಗ್ರೆಸ್ ಮತ್ತು ಜೆಡಿಎಸ್ ಯಾವುದೇ ಹೋರಾಟ ಮಾಡದಿರುವುದು ಸೋಜಿಗ. ಎರಡೂ ಪಕ್ಷಗಳು ಗಂಜಿಗೆ ಸೀಮಿತವಾಗಿವೆ ಎಂದರು.