Visit Channel

ಉತ್ತರಾಖಂಡ ಸಿಎಂ ತೀರಥ್ ಸಿಂಗ್ ರಾವತ್ ಪಡಿತರ ಚೀಟಿ ಕುರಿತು ವಿವಾದಾತ್ಮಕ ಹೇಳಿಕೆ

----------------jpg

ರಾಮ್​ನಗರ್ (ಉತ್ತರಾಖಂಡ), ಮಾ. 22: ಹರಿದ ಜೀನ್ಸ್ ಕುರಿತು ಮಾತನಾಡಿ ವಿವಾದ ಸೃಷ್ಟಿ ಮಾಡಿದ್ದ ಉತ್ತರಾಖಂಡ ಮುಖ್ಯಮಂತ್ರಿ ತೀರಥ್ ಸಿಂಗ್ ರಾವತ್ ಈಗ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಲ್ಲಿದ್ದಾರೆ. ಭಾನುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾವತ್, ಕೊವಿಡ್ ಸಾಂಕ್ರಾಮಿಕದ ಹೊತ್ತಲ್ಲಿ ಬಡಕುಟುಂಬಗಳು ಆಹಾರಕ್ಕಾಗಿ ಕಷ್ಟಪಡುತ್ತಿವೆ. ಆಹಾರ ಧಾನ್ಯಗಳನ್ನು ವಿತರಿಸುವ ಕೇಂದ್ರ ಸರ್ಕಾರದ ಯೋಜನೆಯಡಿಯಲ್ಲಿ ಹೆಚ್ಚಿನ ಪ್ರಮಾಣದ ಆಹಾರವಸ್ತುಗಳನ್ನು ಪಡೆಯಲು, ಆ ಕುಟುಂಬಗಳು 20 ಮಕ್ಕಳನ್ನು ಹೊಂದಲಿ. ಪ್ರತಿ ವ್ಯಕ್ತಿಗೆ 5 ಕೆಜಿ ಪಡಿತರ ನೀಡಲಾಗುತ್ತದೆ. ಮನೆಯಲ್ಲಿ 10 ಮಂದಿ ಇದ್ದರೆ 50 ಕೆಜಿ, 20 ಮಂದಿ ಇದ್ದರೆ ಕ್ವಿಂಟಾಲ್ ಅಕ್ಕಿ ಸಿಗುತ್ತದೆ. ಇಬ್ಬರಿದ್ದರೆ 10 ಕೆಜಿ, 20 ಮಂದಿ ಇದ್ದರೆ ಕ್ವಿಂಟಾಲ್ ಎಂದು ಕೆಲವರು ಅಸೂಯೆ ಪಡುತ್ತಾರೆ. ಯಾಕೆ? ನೀವು ಎರಡು ಮಕ್ಕಳನ್ನು ಹೆರುವ ಬದಲು 20 ಮಕ್ಕಳನ್ನು ಹೆರುವುದಿಲ್ಲವೇಕೆ? ಎಂದು ಕೇಳಿದ್ದಾರೆ.

ಲಾಕ್​ಡೌನ್ ನಿಂದಾಗಿ ಹಲವಾರು ಜನರು ಕೆಲಸ ಕಳೆದುಕೊಂಡರು, ಇದರಿಂದ ಜನರು ಆಹಾರಕ್ಕಾಗಿ ಪರದಾಡುವಂತಾಗಿತ್ತು. ಹೀಗಿರುವಾಗ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರ 5 ಕೆಜಿ ಆಹಾರ ಧಾನ್ಯ, ಕುಟುಂಬದಲ್ಲಿರುವ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಒಬ್ಬ ವ್ಯಕ್ತಿಗೆ 1 ಕೆಜಿ ಧಾನ್ಯ ವಿತರಣೆ ಮಾಡಿತ್ತು. ಮಕ್ಕಳ ಸಂಖ್ಯೆ ಕಡಿಮೆ ಇರುವ ಕುಟುಂಬಗಳಿಗೆ ಕಡಿಮೆ ಪ್ರಮಾಣದ ಆಹಾರ ಧಾನ್ಯಗಳು ಸಿಗುತ್ತದೆ . ಹಾಗಾಗಿ ಹೆಚ್ಚಿನ ಪ್ರಮಾಣದಲ್ಲಿ ಆಹಾರ ಧಾನ್ಯಗಳನ್ನು ಪಡೆಯಲು ಹೆಚ್ಚು ಮಕ್ಕಳನ್ನು ಹುಟ್ಟಿಸಿ ಎಂದು ರಾವತ್ ಹೇಳಿ ಚರ್ಚೆಗೆ ಎಡೆ ಮಾಡಿ ಕೊಟ್ಟಿದ್ದಾರೆ.

ಈ ವಾರದ ಆರಂಭದಲ್ಲಿ ತೀರಥ್ ಸಿಂಗ್ ರಾವತ್ ಮಹಿಳೆಯರು ರಿಪ್​ಡ್ ಜೀನ್ಸ್​ ಧರಿಸುವ ಬಗ್ಗೆ ಆಕ್ಷೇಪಕಾರಿ ಹೇಳಿಕೆ ನೀಡಿದ್ದರು. ರಿಪ್​ಡ್ ಜೀನ್ಸ್ ಧರಿಸಿದ ಮಹಿಳೆಯೊಬ್ಬರು ಸರ್ಕಾರೇತರ ಸಂಸ್ಥೆ ನಡೆಸುವುದನ್ನು ಕಂಡು ಬೇಸರವಾಯಿತು. ಆಕೆ ಸಮಾಜಕ್ಕೆ ಅದೆಂಥ ಮಾದರಿಯನ್ನು ನೀಡುತ್ತಿರಬಹುದು ಎಂದು ಲೇವಡಿ ಮಾಡಿದ್ದರು.

Latest News

E-Shram Card
ಪ್ರಮುಖ ಸುದ್ದಿ

ಇ-ಶ್ರಮ ಕಾರ್ಡ್ ಉಪಯೋಗದ ಬಗ್ಗೆ ನಿಮಗೆ ತಿಳಿದಿಲ್ಲವೆ ?  

ಅಸಂಘಟಿತ ವಲಯದ ಕಾರ್ಮಿಕರಿಗೆ  ಸಂಪೂರ್ಣವಾಗಿ  ವೃತ್ತಿ ಮಾಹಿತಿ  ಮತ್ತು   ಸರ್ಕಾರದ  ಯೋಜನೆಗಳು  ಕಾರ್ಮಿಕರಿಗೆ ನೇರವಾಗಿ ತಲುಪಿಸುವ ,ಹಾಗೂ ದತ್ತಾಂಶ ಸಂಗ್ರಹಿಸುವ ಉದ್ದೇಶದಿಂದ 26  ಆಗಸ್ಟ್‌  2021 ರಂದು  ಕೇಂದ್ರ ಸರ್ಕಾರವು ಈ ಯೋಜನೆಯನ್ನು  ಜಾರಿಗೊಳಿಸಿದೆ. 

inflation
ದೇಶ-ವಿದೇಶ

ಅಗತ್ಯ ವಸ್ತುಗಳ ಬೆಲೆ ತಗ್ಗಿದ ಪರಿಣಾಮ: ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.6.7 ಇಳಿಕೆ ನಿರೀಕ್ಷೆ

ಅಂದು 100 ರೂಪಾಯಿಗೆ ಖರೀದಿಸುವ ಸಾಮಾನು ಈಗ 500 ಕೊಟ್ಟರು ಬರುವುದಿಲ್ಲ. ಕಾರಣ ಹಣದ ಮೌಲ್ಯ ಕಡಿಮೆಯಾಗಿದೆ, ಈ ಹಣದ ಮೌಲ್ಯ ಕಡಿಮೆಯಾಗಿರುವುದನ್ನೇ ನಾವು ಹಣದುಬ್ಬರ ಎನ್ನುತ್ತೇವೆ.