• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ದಸರಾ ಉಧ್ಘಾಟನೆಗೆ ಬಾನು ಮುಷ್ತಾರ್‌ ಆಯ್ಕೆ ಹಿನ್ನೆಲೆ ವಿವಾದ: ದೇವಸ್ಥಾನದ ಕುರಿತಾದ ಅಸಂವೇದನಾಶೀಲ ಹೇಳಿಕೆಯ ಕುರಿತು ರಾಜವಂಶಸ್ಥೆಯ ಬೇಸರ

Shwetha Mohan by Shwetha Mohan
in ಪ್ರಮುಖ ಸುದ್ದಿ, ರಾಜಕೀಯ, ರಾಜ್ಯ, ವಿಜಯ ಟೈಮ್ಸ್‌
ದಸರಾ ಉಧ್ಘಾಟನೆಗೆ ಬಾನು ಮುಷ್ತಾರ್‌ ಆಯ್ಕೆ ಹಿನ್ನೆಲೆ ವಿವಾದ: ದೇವಸ್ಥಾನದ ಕುರಿತಾದ ಅಸಂವೇದನಾಶೀಲ ಹೇಳಿಕೆಯ ಕುರಿತು ರಾಜವಂಶಸ್ಥೆಯ ಬೇಸರ
0
SHARES
21
VIEWS
Share on FacebookShare on Twitter
  • ಮೈಸೂರು ಚಾಮುಂಡಿ ಬೆಟ್ಟ ಹಿಂದುಗಳ ಆಸ್ತಿ ಅಲ್ಲ, ಎಲ್ಲಾ ಧರ್ಮದವರಿಗೂ ಅಲ್ಲಿ ಪ್ರವೇಶವಿದೆ- ಡಿ ಕೆ ಶಿವಕುಮಾರ್‌
  • ‌ಚಾಮುಂಡಿ ಬೆಟ್ಟ ಎಂದಿಗೂ ಹಿಂದುಗಳದ್ದೆ: ಯದುವೀರ್‌ ಒಡೆಯರ್ (Controversy over Banu Mushtars selection to inaugurate Dussehra)
  • ಅದು ಹಿಂದೂ ದೇವಸ್ಥಾನ ಅಲ್ಲದಿದ್ರೆ ಇಂದಿಗೂ ಮುಜರಾಯಿ ಅಡಿಯಲ್ಲಿ ತರುತ್ತಿರಲಿಲ್ಲ ಎಂದ ಪ್ರಮೋದಾ ದೇವಿ

Mysore: ಈ ಬಾರಿ ವಿಶ್ವಪ್ರಸಿದ್ಧ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆಗೆ(Inauguration of Mysore Dasara Festival) ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್(Banu Mushtaq) ಅವರನ್ನು ಆಹ್ವಾನಿಸಿರುವುದು ರಾಜ್ಯ ರಾಜಕೀಯದಲ್ಲಿ ಬಿರುಕು ತಂದಿದೆ.

ಬಿಜೆಪಿ ಹಾಗೂ ಹಲವಾರು ಹಿಂದೂ ಪರ ಸಂಘಟನೆಗಳು ಈ ನಿರ್ಧಾರವನ್ನು ವಿರೋಧಿಸಿ ಆಕ್ರೋಶ ವ್ಯಕ್ತಪಡಿಸಿದ್ದರೆ, ಕಾಂಗ್ರೆಸ್ ನಾಯಕರು ಮುಷ್ತಾಕ್ ಅವರನ್ನು ಸಮರ್ಥಿಸಿಕೊಂಡಿದ್ದಾರೆ.

ವಿರೋಧಿಗಳು – “ಹಿಂದೂ ಸಂಪ್ರದಾಯಗಳ ಬಗ್ಗೆ ಗೌರವವಿಲ್ಲದ ವ್ಯಕ್ತಿ ದಸರಾ ಉದ್ಘಾಟಿಸಬಾರದು” ಎಂಬ ವಾದವನ್ನು ಮುಂದಿಟ್ಟಿದ್ದಾರೆ. ಇನ್ನು ವಿವಾದ ತೀವ್ರಗೊಂಡ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್(D.K. Shivakumar) ಮಾತನಾಡಿ,

“ಕನ್ನಡದಲ್ಲಿ ಲೇಖನ ಬರೆದಾಗ ಬಾನು ಮುಷ್ತಾಕ್‌ರ ವಿರುದ್ಧ ಯಾರೂ ಮಾತಾಡಲಿಲ್ಲ. ಈಗ ಯಾಕೆ ವಿರೋಧ?” ಎಂದು ಪ್ರಶ್ನಿಸಿದರು. ಅಲ್ಲದೆ, ಚಾಮುಂಡಿ ಬೆಟ್ಟ “ಹಿಂದೂಗಳ ಆಸ್ತಿ ಮಾತ್ರವಲ್ಲ” ಎಂಬ ತಮ್ಮ ಹೇಳಿಕೆಯಿಂದ ಮತ್ತಷ್ಟು ಚರ್ಚೆಗೆ ಕಾರಣರಾದರು.

Controversy over Banu Mushtars selection to inaugurate Dussehra
ಮೈಸೂರು ಅರಮನೆ(Mysore Palace) ಕುಟುಂಬದ ಪ್ರಮೋದಾದೇವಿ ಒಡೆಯರ್(Pramodadevi Wodeyar) ಅವರು ಈ ವಿಷಯದ ಬಗ್ಗೆ ಪತ್ರ ಬರೆದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ಚಾಮುಂಡೇಶ್ವರಿ ದೇವಾಲಯ ಹಿಂದೂಗಳಿಗೆ ಸೇರಿಲ್ಲ” ಎಂಬಂತಹ ಹೇಳಿಕೆಗಳು ಅಸಂವೇದನಾಶೀಲ ಹಾಗೂ ತಪ್ಪಿಸಬಹುದಾದವು ಎಂದು ಅವರು ಸ್ಪಷ್ಟಪಡಿಸಿದರು.

ದೇವಾಲಯ ಹಿಂದೂಗಳಿಗೆ ಸೇರಿರದಿದ್ದರೆ ಅದು ಮುಜರಾಯಿ ಇಲಾಖೆಯ(Muzrai Department) ಅಧೀನದಲ್ಲಿರಲು ಸಾಧ್ಯವೇ ಇಲ್ಲವೆಂದು ನೆನಪಿಸಿದರು. ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗದಂತೆ ನೋಡಿಕೊಂಡರೆ

ದಸರಾ ಉದ್ಘಾಟಕರ ಬಗ್ಗೆ ತಮಗೆ ಯಾವುದೇ ಆಕ್ಷೇಪವಿಲ್ಲ ಎಂದೂ ಹೇಳಿದರು. ರಾಜವಂಶಸ್ಥ ಯದುವೀರ್ ಒಡೆಯರ್(Yaduveer Wodeyar) ಅವರು ಸಹ ಸ್ಪಷ್ಟನೆ ನೀಡಿದ್ದು,

“ಬಾನು ಮುಷ್ತಾಕ್ ಅವರ ಸಾಹಿತ್ಯ ಕ್ಷೇತ್ರಕ್ಕೆ(Literary field) ಕೊಡುಗೆ ಅಪಾರ. ಅದರಲ್ಲಿ ಅನುಮಾನವೇ ಇಲ್ಲ” ಎಂದು ಅಭಿಪ್ರಾಯಪಟ್ಟರು. ಹೀಗಾಗಿ ತಮ್ಮದೇ ಪಕ್ಷದ ಕೆಲ ನಾಯಕರ ಅಭಿಪ್ರಾಯದಿಂದ ಭಿನ್ನವಾದ ನಿಲುವು ತಾಳಿದರು.

ಇನ್ನು ಇದೇ ವೇಳೆ ವಿವಾದಕ್ಕೆ ಸ್ಪಂದಿಸಿದ ಬಾನು ಮುಷ್ತಾಕ್ ಅವರು, “ಲಕ್ಷಾಂತರ ಜನರು ನನ್ನನ್ನು ಉದ್ಘಾಟಕರಾಗಿ ಸ್ವಾಗತಿಸಿದ್ದಾರೆ. ಕೆಲವರ ವಿರೋಧದಿಂದ ನನಗೆ ಏನೂ ವ್ಯತ್ಯಾಸ ಇಲ್ಲ” ಎಂದರು.

ರಾಜಕೀಯ ನಾಯಕರ ಆಕ್ಷೇಪವನ್ನು ತೀವ್ರವಾಗಿ ಟೀಕಿಸಿದ ಅವರು, “ಯಾವ ವಿಷಯ ರಾಜಕೀಯಗೊಳಿಸಬೇಕು, ಯಾವುದನ್ನು ಬೇಡ ಎಂಬುದು ಅವರಿಗೆ ತಿಳಿದಿರಬೇಕು. ಬೂಕರ್ ಪ್ರಶಸ್ತಿಯ(Booker Prize) ಮಹತ್ವ ಅರಿತಿದ್ದರೆ ಇಂಥ ಟೀಕೆ ಮಾಡುತ್ತಿರಲಿಲ್ಲ” ಎಂದು ಹೇಳಿದರು.

ಈ ವಿವಾದದ ನಡುವೆ, ಮೈಸೂರಿನಲ್ಲಿ ದಸರಾ ಸಡಗರಕ್ಕೆ ಸಿದ್ಧತೆಗಳು ಜೋರಾಗುತ್ತಿವೆ. ಜನಪರ ಕಾರ್ಯಕ್ರಮಗಳು, ಜಂಬೂಸವಾರಿಯ ರಿಹರ್ಸಲ್‌ಗಳು, ಬೆಳಕು ಮೆರಗು—ಎಲ್ಲ ಸೇರಿ ಹಬ್ಬದ ಸಂಭ್ರಮ ಹರಡುತ್ತಿದೆ.

ಆದರೆ ರಾಜಕೀಯ ಕದನವೇ(Political battle) ಸುದ್ದಿಯ ಮುಖ್ಯ ಕೇಂದ್ರವಾಗಿರುವುದರಿಂದ ದಸರಾ ಹಬ್ಬದ ಮೂಲ ಉದ್ದೇಶ ಸ್ವಲ್ಪ ಮರೆಯಾದಂತಾಗಿದೆ ಎಂಬ ಅಭಿಪ್ರಾಯ ಸಹ ವ್ಯಕ್ತವಾಗುತ್ತಿದೆ.

ಇದನ್ನು ಓದಿ :  ರಾಜ್ಯದಲ್ಲಿ 993 ಅನಧಿಕೃತ ಶಾಲೆಗಳ ಹಾವಳಿ: ಪೋಷಕರಲ್ಲಿ ಹೆಚ್ಚಿದ ಆತಂಕ

ಹಬ್ಬವು ಧಾರ್ಮಿಕ-ಸಾಂಸ್ಕೃತಿಕ ಮಿಶ್ರಣವಾಗಿರುವುದರಿಂದ, ಪ್ರತಿಯೊಬ್ಬರಿಗೂ ತಮ್ಮದೇ ರೀತಿಯ ಭಾವನೆಗಳು ಜೋಡಿಸಿಕೊಂಡಿರುತ್ತವೆ. ಇಂತಹ ಸಂದರ್ಭಗಳಲ್ಲಿ ವಿವಾದಕ್ಕಿಂತ ಸಂಭ್ರಮ ಮುಖ್ಯ ಎಂದು ಹಲವು ಹಿರಿಯರು ಮನವಿ ಮಾಡಿದ್ದಾರೆ. (Controversy over Banu Mushtars selection to inaugurate Dussehra)

Tags: banu mushtaqbooker prizeD.K. ShivakumarinaugurationMysore Dasara FestivalPolitical battlePramoda Deviyaduveer wodeyar

Related News

ಸ್ಕ್ವಾಷ್ ವಿಶ್ವಕಪ್; ಹಾಂಗ್‌ಕಾಂಗ್‌ ವಿರುದ್ಧ ಗೆದ್ದು ಬೀಗಿದ ಭಾರತ
Sports

ಸ್ಕ್ವಾಷ್ ವಿಶ್ವಕಪ್; ಹಾಂಗ್‌ಕಾಂಗ್‌ ವಿರುದ್ಧ ಗೆದ್ದು ಬೀಗಿದ ಭಾರತ

December 15, 2025
ಬೆಂಗಳೂರು ಜನತೆಗೆ ಜಲಮಂಡಳಿಯಿಂದ ಗುಡ್ ನ್ಯೂಸ್: ಜನವರಿಯಿಂದ ಒನ್ ಟೈಮ್ ಸೆಟಲ್‌ಮೆಂಟ್ ಜಾರಿ, ಫೈನ್ ಸಂಪೂರ್ಣ ಮನ್ನಾ
ಪ್ರಮುಖ ಸುದ್ದಿ

ಬೆಂಗಳೂರು ಜನತೆಗೆ ಜಲಮಂಡಳಿಯಿಂದ ಗುಡ್ ನ್ಯೂಸ್: ಜನವರಿಯಿಂದ ಒನ್ ಟೈಮ್ ಸೆಟಲ್‌ಮೆಂಟ್ ಜಾರಿ, ಫೈನ್ ಸಂಪೂರ್ಣ ಮನ್ನಾ

December 15, 2025
ಕೋಲ್ಕತ್ತಾ ಸ್ಟೇಡಿಯಂನಲ್ಲಿ ಮೆಸ್ಸಿ ಫ್ಯಾನ್ಸ್ ದಾಂಧಲೆ:ಮೆಸ್ಸಿ ಮೇನಿಯಾ ಅವ್ಯವಸ್ಥೆಯಿಂದ ಅಂತ್ಯ
ದೇಶ-ವಿದೇಶ

ಕೋಲ್ಕತ್ತಾ ಸ್ಟೇಡಿಯಂನಲ್ಲಿ ಮೆಸ್ಸಿ ಫ್ಯಾನ್ಸ್ ದಾಂಧಲೆ:ಮೆಸ್ಸಿ ಮೇನಿಯಾ ಅವ್ಯವಸ್ಥೆಯಿಂದ ಅಂತ್ಯ

December 13, 2025
ಪ್ರತಿ ತಿಂಗಳು ಹೂಡಿಕೆ ಮಾಡುವ SIP ನ ಅಸಲಿ ಸತ್ಯ
ಪ್ರಮುಖ ಸುದ್ದಿ

ಪ್ರತಿ ತಿಂಗಳು ಹೂಡಿಕೆ ಮಾಡುವ SIP ನ ಅಸಲಿ ಸತ್ಯ

December 13, 2025

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.