ಮುಂಬೈ, ಏ. 10: ರಾಷ್ಟ್ರೀಯ ಸ್ವಯಂ ಸೇವಕ ಸಂಘದ(ಆರ್ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಮಹಾರಾಷ್ಟ್ರದ ನಾಗ್ಪುರದ ಆಸ್ಪತ್ರೆಗೆ ದಾಖಲಾಗಿ ಕೊರೊನಾ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಆರ್ಎಸ್ಎಸ್ ತನ್ನ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದೆ.
ಪ್ರಸ್ತುತ ಕೊರೊನಾ ಸೋಂಕಿನ ಸಾಮಾನ್ಯ ರೋಗ ಲಕ್ಷಣಗಳು 70 ವರ್ಷ ವಯಸ್ಸಿನ ಭಾಗವತ್ರಲ್ಲಿ ಕಂಡು ಬಂದಿದ್ದು, ನಾಗ್ಪುರದ ಕಿಂಗ್ಸ್ ವೇ (Kingsway) ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರ್ಎಸ್ಎಸ್ ಟ್ವೀಟ್ ಮಾಡಿದೆ.
ಇನ್ನು ಮೋಹನ್ ಭಾಗವತ್ ಮಾರ್ಚ್ 07ರಂದು ಕೊರೊನಾ ಲಸಿಕೆಯ ಮೊದಲ ಡೋಸ್ ಪಡೆದಿದ್ದರು.