ಚಾಮರಾಜನಗರ, ಜೂ. 02: ಕೊರೊನಾ ಮತ್ತು ಲಾಕ್ ಡೌನ್ ನಿಂದ ಆಗಿರುವ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಮೃತರನ್ನು ಮಹದೇವಸ್ವಾಮಿ (45), ಪತ್ನಿ ಮಂಗಳಮ್ಮ ಹಾಗೂ ಮಕ್ಕಳಾದ ಗೀತಾ ಶೃತಿ ಎಂದು ಗುರುತಿಸಲಾಗಿದೆ. ಮೂಕನಹಳ್ಳಿಯ ನಿವಾಸಿ ಮಹದೇವಸ್ವಾಮಿ ಅವರಿಗೆ ಕೊರೊನಾ ಪಾಸಿಟಿವ್ ಆಗಿ ಹೋಂ ಐಸೊಲೇಷನ್ ನಲ್ಲಿದ್ದು ನಂತರ ಗುಣಮುಖರಾಗಿದ್ದರು.
ಆದರೆ ಲಾಕ್ ಡೌನ್ ಕಾರಣದಿಂದಾಗಿ ಕಟುಂಬವು ಆರ್ಥಿಕ ಸಂಕಷ್ಟದಲ್ಲಿತ್ತು ಎಂದು ನೆರೆ ಹೊರೆಯವರು ತಿಳಿಸಿದ್ದಾರೆ. ಬುಧವಾರ ಬೆಳಗ್ಗೆ ಇವರ ಮನೆಯಿಂದ ಯಾರು ಹೊರಬರದಾಗ ಅಕ್ಕ ಪಕ್ಕದವರು ಕಿಟಕಿ ತೆಗೆದು ನೋಡಿದ್ದಾರೆ. ನಾಲ್ವರೂ ಕೂಡ ಮನೆಯ ಮೇಲ್ಚಾವಣಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಕಂಡು ಬಂತು. ಚಾಮರಾಜನಗರ ಪೂರ್ವ ಪೋಲೀಸರು ಮೊಕದ್ದಮೆ ದಾಖಲಿಸಿಕೊಂಡು ತನಿಖೆ ನಡೆಸುತಿದ್ದಾರೆ.