ಹೊಸದಿಲ್ಲಿ, ಏ. 18: ದೇಶದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಏಪ್ರಿಲ್ 20-30ಕ್ಕೆ ನಿಗದಿಯಾಗಿದ್ದ ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆ ಜೆಇಇ (ಮೇನ್) ಮುಂದೂಡಲಾಗಿದೆ.
‘ಕೋವಿಡ್–19 ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಜೆಇಇ ಮೇನ್ ಪರೀಕ್ಷೆಯನ್ನು ಮುಂದೂಡುವಂತೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ (ಎನ್ಟಿಎ) ಸಲಹೆ ನೀಡಲಾಗಿದೆʼ ಎಂದು ಕೇಂದ್ರದ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಟ್ವೀಟ್ ಮಾಡಿದ್ದಾರೆ.
ʻವಿದ್ಯಾರ್ಥಿಗಳ ಸುರಕ್ಷತೆ ಮತ್ತು ಅವರ ಶೈಕ್ಷಣಿಕ ಜೀವನವನ್ನು ನಿಭಾಯಿಸುವಂತೆ ಮಾಡುವುದು ನಮ್ಮ ಪ್ರಮುಖ ಕಾಳಜಿಯಾಗಿದೆ’ ಎಂದು ಹೇಳಿದ್ದಾರೆ.
‘ಪರಿಷ್ಕೃತ ವೇಳಾ ಪಟ್ಟಿಯನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು. ಪರೀಕ್ಷೆಗಿಂತ 15 ದಿನ ಮುಂಚಿತವಾಗಿ ದಿನಾಂಕವನ್ನು ತಿಳಿಸಲಾಗುವುದು’ ಎಂದು ಎನ್ಟಿಎ ತಿಳಿಸಿದೆ.
👉Please note: The dates of JEE (Main) – 2021 April session will be announced later on and at least 15 days before the examination.
— Dr. Ramesh Pokhriyal Nishank (@DrRPNishank) April 18, 2021