ಕೊಚ್ಚಿ, ಜೂ. 01: ದ್ವೀಪಗಳಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳನ್ನು ಪರಿಗಣಿಸಿ, ಲಕ್ಷದ್ವೀಪ ಆಡಳಿತವು ಮೇ 31 ರಿಂದ ಇನ್ನೂ ಏಳು ದಿನಗಳವರೆಗೆ ಸಂಪೂರ್ಣ ಲಾಕ್ಡೌನ್ ಅನ್ನು ವಿಸ್ತರಿಸಲಾಗಿದೆ.
ಮೇ 24 ರಂದು ಒಂದು ವಾರ ಸಂಪೂರ್ಣ ಲಾಕ್ಡೌನ್ ಅನ್ನು ಘೋಷಿಸಲಾಗಿತ್ತು. ಲಕ್ಷದ್ವೀಪ ಜಿಲ್ಲಾಧಿಕಾರಿ ಎಸ್. ಅಸ್ಕರ್ ಅಲಿ ಅವರು ಕಿಲ್ತಾನ್, ಚೆಟ್ಲಾಥ್, ಬಿತ್ರಾ, ಕದ್ಮಠ್ ಮತ್ತು ಅಗಟ್ಟಿ ಸೇರಿದಂತೆ ಐದು ದ್ವೀಪಗಳಲ್ಲಿ ರಾತ್ರಿ ಕರ್ಫ್ಯೂ ಘೋಷಿಸಿದ್ದಾರೆ.
ವೈರಸ್ ಮತ್ತಷ್ಟು ಹರಡುವುದನ್ನು ತಡೆಗಟ್ಟಲು ಜನರ ಓಡಾಟವನ್ನು ನಿಯಂತ್ರಿಸಲು, ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸಲು, ಕಂಟೈನ್ಮೆಂಟ್ ತಂತ್ರಗಾರಿಕೆಯೊಂದಿಗೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸುವುದನ್ನು ಖಚಿತಪಡಿಸಿಕೊಳ್ಳಲು, ಕಣ್ಗಾವಲು ಮತ್ತು ಗೃಹ ಸಚಿವಾಲಯದ ಕೋವಿಡ್-19 ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಪ್ರಸ್ತುತ ಪರಿಸ್ಥಿತಿಯು ಅಗತ್ಯವಾಗಿದೆ ಎಂದು ಅವರು ಹೇಳಿದರು.