ಹೈದರಾಬಾದ್, ಏ. 29: ಟಾಲಿವುಡ್ ಸೂಪರ್ ಸ್ಟಾರ್ ಅಲ್ಲು ಅರ್ಜುನ್‌ಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಈ ವಿಷಯವನ್ನು ಟ್ವಿಟರ್‌ನಲ್ಲಿ ನಟ ಅಲ್ಲು ಅರ್ಜುನ್ ಅವರೇ ಖಚಿತಪಡಿಸಿದ್ದಾರೆ. ಮನೆಯಲ್ಲೇ ಅಲ್ಲು ಅರ್ಜುನ್ ಹೋಂ ಕ್ವಾರೈಂಟೆನ್ ಆಗಿದ್ದು, ಶೂಟಿಂಗ್‌ಗೆ ಬ್ರೇಕ್ ಬಿದ್ದಿದೆ.
ಸದ್ಯಕ್ಕೆ ‘ಪುಷ್ಪಾ’ ಸಿನಿಮಾ ಶೂಟಿಂಗ್ ನಡೆಯುತ್ತಿತ್ತು. ಅವರ ಹುಟ್ಟುಹಬ್ಬದ ಹಿನ್ನೆಲೆ ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿತ್ತು.
ಅಭಿಮಾನಿಗಳಿಗೆ ಆತಂಕ ಪಡದಂತೆ ಅಲ್ಲು ಅರ್ಜುನ್ ಮನವಿ ಮಾಡಿದ್ದಾರೆ.