ಚೆನ್ನೈ, ಫೆ. 08: ತಮಿಳುನಟ ಸೂರ್ಯ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಸದ್ಯ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಸೂರ್ಯ ಅವರೇ ಖುದ್ದಾಗಿ ತಮ್ಮ ಟ್ವಿಟರ್ ಖಾತೆಯಲ್ಲಿ ವಿಷಯವನ್ನು ಹಂಚಿಕೊಂಡಿದ್ದು, ನನಗೆ ಕೊರೊನಾ ಸೋಂಕು ದೃಢಪಟ್ಟಿದೆ. ದೇಶದಲ್ಲಿ ಇನ್ನೂ ಕೊರೊನಾ ಸೋಂಕು ಹೋಗಿಲ್ಲ. ಹಾಗಾಗಿ ಎಲ್ಲರು ಎಚ್ಚರದಿಂದ ಇರಿ. ನಾನು ಆರಾಮಾಗಿದ್ದೇನೆ.
ದೇಶದ ಎಲ್ಲ ಕೊರೊನಾ ವಾರಿಯರ್ಗಳಿಗೆ ನನ್ನ ಧನ್ಯವಾದಗಳು ಎಂದು ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.