ಬೆಳಗಾವಿ, ಡಿ. 05: ವರ್ಷದ ಕೊನೆ ಬಂದರೆ ಸಾಕು ಹೊಸ ವರ್ಷದ ಆಚರಣೆಯ ಸಿದ್ಧತೆಯಲ್ಲಿ ಇರ್ತಾರೆ ಏನೋ ಒಂತರಾ ಖುಷಿ, ಸಂಭ್ರಮ. ಆದರೆ ಈ ವರ್ಷ ಈ ಸಂಭ್ರಮಕ್ಕೆ ಬ್ರೇಕ್ ಬಿದ್ದಿದೆ ಕಾರಣ ಕೊರೋನಾ ೨ ಅಲೆಯ ಹೆದರಿಕೆ. ವರ್ಷದ ಕೊನೆ ದಿನ ಹಾಗೂ ಹೊಸ ವರ್ಷಾಚರಣೆಯನ್ನ ಸಾರ್ವಜನಿಕವಾಗಿ ಸಂಭ್ರಮಿಸುವಂತಿಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ‘ಕೋವಿಡ್ 2ನೇ ಅಲೆಯ ಕಾರಣದಿಂದಾಗಿ ವಿಜ್ಞಾನಿಗಳ ಸಲಹೆ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಮುಖ್ಯಮಂತ್ರಿ ಅವರೊಂದಿಗೆ ನಾನು ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಇಂದು ಚರ್ಚೆ ಮಾಡಿದ್ದೇವೆ. ಅದಕ್ಕೆ ಮುಖ್ಯಮಂತ್ರಿ ಒಪ್ಪಿಗೆ ಸೂಚಿಸಿದ್ದಾರೆ. ಶೀಘ್ರವೇ ಈ ವಿಷಯದಲ್ಲಿ ಆದೇಶ ಹಾಗೂ ಮಾರ್ಗಸೂಚಿಗಳನ್ನು ಹೊರಡಿಸಲಾಗುವುದು’ ಎಂದು ಹೇಳಿದರು.