ನವದೆಹಲಿ, ಜೂ. 07: ದೇಶದಲ್ಲಿ ಕೋವಿಡ್- 19 ಇಳಿಕೆ ಹಾದಿ ಕಂಡಿದ್ದು, ಸೋಮವಾರ 1,00,636 ಪ್ರಕರಣಗಳು ವರದಿಯಾಗಿವೆ. ಇದು ಈ ಎರಡು ತಿಂಗಳಲ್ಲೇ ಅತ್ಯಂತ ದಾಖಲಾದ ಕನಿಷ್ಟ ಪ್ರಕರಣಗಳಾಗಿವೆ. ಇನ್ನು 24 ಗಂಟೆಗಳಲ್ಲಿ 2427 ಕೋವಿಡ್ ಸಂಬಂಧಿತ ಸಾವುಗಳೂ ಸಂಭವಿಸಿವೆ ಎಂದು ಆರೋಗ್ಯ ಸಚಿವಾಲಯದ ಮಾಹಿತಿಯಿಂದ ತಿಳಿದುಬಂದಿದೆ.
ಸದ್ಯ ದೇಶದ ಒಟ್ಟಾರೆ ಸೋಂಕಿತರ ಸಂಖ್ಯೆ 2,89,09,975 ಆಗಿದೆ. ಈ ವರೆಗೆ 2,71,59,180 ಮಂದಿ ಕೋವಿಡ್ನಿಂದ ಚೇತರಿಸಿಕೊಂಡಿದ್ದು, 14,01,609 ಸಕ್ರಿಯ ಪ್ರಕರಣಗಳು ದೇಶದಲ್ಲಿವೆ. ಇನ್ನು ಕೋವಿಡ್ನಿಂದಾಗಿ ದೇಶದಲ್ಲಿ ಈ ವರೆಗೆ 3,49,186 ಮಂದಿ ಮೃತಪಟ್ಟಿದ್ದಾರೆ. ಇನ್ನೂ ಭಾರತದಲ್ಲಿ ಇಲ್ಲಿಯ ವರೆಗೆ 23,27,86,482 ಮಂದಿಗೆ ಲಸಿಕೆ ಹಾಕಲಾಗಿದೆ.