Visit Channel

ಮಧ್ಯ ಚೀನಾದ ವುಹಾನ್‌ನಲ್ಲಿ ವರ್ಷದ ನಂತರ ಕಾಣಿಸಿಕೊಂಡ ಕೊರೊನಾ ಸೋಂಕು

1b3364b5-990b-4d29-9b16-da9e6b1ef13f

ಬೀಜಿಂಗ್: ಮಧ್ಯ ಚೀನಾದ ವುಹಾನ್‌ನಲ್ಲಿ ಒಂದು ವರ್ಷದ ನಂತರ ಮತ್ತೆ ಕೊರೊನಾ ವೈರಸ್ ಪ್ರಕರಣ ದಾಖಲಾಗಿದೆ.

ಈಗ ಕೊರೊನಾ ಸೋಂಕು ಪತ್ತೆಯಾದವರಿಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲ, ಇದು ಸ್ಥಳೀಯವಾಗಿಯೇ ಪತ್ತೆಯಾದ ಪ್ರಕರಣ ಎಂದು ಅಲ್ಲಿನ ಆಡಳಿತ ಹೇಳಿದೆ. ಹಾಗೇ, ಇದೀಗ ಕೊರೊನಾ ಪತ್ತೆಯಾದ ಬೆನ್ನಲ್ಲೇ, ಇಡೀ ವುಹಾನ್‌ನಲ್ಲಿ ಪ್ರತಿಯೊಬ್ಬರಿಗೂ ಕೊರೊನಾ ತಪಾಸಣೆ ಮಾಡುವುದಾಗಿ ಸ್ಥಳೀಯ ಸರ್ಕಾರ ತಿಳಿಸಿದೆ.

ವುಹಾನ್‌ನಲ್ಲಿ ಸುಮಾರು 11 ಮಿಲಿಯನ್ ಜನರಿದ್ದು, ಇಲ್ಲೀಗ 1 ವರ್ಷಕ್ಕಿಂತಲೂ ಹೆಚ್ಚು ಸಮಯವಾದ ಬಳಿಕ ಸ್ಥಳೀಯವಾಗಿಯೇ ಕೊರೊನಾ ಸೋಂಕಿನ ಪ್ರಕರಣಗಳು ದಾಖಲಾಗಿವೆ. ಹಾಗಾಗಿ, ಕೂಡಲೇ ಸಮಗ್ರ ನ್ಯೂಕ್ಲಿಯರ್ ಆಯಸಿಡ್ ಟೆಸ್ಟಿಂಗ್ ಪ್ರಾರಂಭಿಸುತ್ತೇವೆ. ಇಲ್ಲಿನ ಪ್ರತಿಯೊಬ್ಬರಿಗೂ ಈ ಟೆಸ್ಟ್ ಮಾಡಲಾಗುವುದು ಎಂದು ವುಹಾನ್ ಹಿರಿಯ ಅಧಿಕಾರಿ ಲಿ ತಾವೋ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ವುಹಾನ್‌ನಲ್ಲಿಯೇ ಮೊದಲು ಕೊರೊನಾ ವೈರಸ್ ಹುಟ್ಟಿದ್ದಾದರೂ, ನಂತರ ಅಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವ ಮೂಲಕ ಸೋಂಕನ್ನು ತೊಡೆದುಹಾಕಲಾಗಿತ್ತು. ಇದೀಗ ಮತ್ತೆ ಏಳು ವಲಸೆ ಕಾರ್ಮಿಕರಲ್ಲಿ ಸೋಂಕು ಪತ್ತೆಯಾಗಿದೆ. ಇನ್ನು ಚೀನಾಕ್ಕೆ ಡೆಲ್ಟಾ ರೂಪಾಂತರಿ ವೈರಾಣುವಿನ ಕಾಟವೂ ಅಧಿಕವಾಗಿದೆ. ಸುಮಾರು ೩೦೦ ಡೆಲ್ಟಾ ರೂಪಾಂತರಿ ಪ್ರಕರಣಗಳು ಪತ್ತೆಯಾಗಿದ್ದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

Latest News

E-Shram Card
ಪ್ರಮುಖ ಸುದ್ದಿ

ಇ-ಶ್ರಮ ಕಾರ್ಡ್ ಉಪಯೋಗದ ಬಗ್ಗೆ ನಿಮಗೆ ತಿಳಿದಿಲ್ಲವೆ ?  

ಅಸಂಘಟಿತ ವಲಯದ ಕಾರ್ಮಿಕರಿಗೆ  ಸಂಪೂರ್ಣವಾಗಿ  ವೃತ್ತಿ ಮಾಹಿತಿ  ಮತ್ತು   ಸರ್ಕಾರದ  ಯೋಜನೆಗಳು  ಕಾರ್ಮಿಕರಿಗೆ ನೇರವಾಗಿ ತಲುಪಿಸುವ ,ಹಾಗೂ ದತ್ತಾಂಶ ಸಂಗ್ರಹಿಸುವ ಉದ್ದೇಶದಿಂದ 26  ಆಗಸ್ಟ್‌  2021 ರಂದು  ಕೇಂದ್ರ ಸರ್ಕಾರವು ಈ ಯೋಜನೆಯನ್ನು  ಜಾರಿಗೊಳಿಸಿದೆ. 

inflation
ದೇಶ-ವಿದೇಶ

ಅಗತ್ಯ ವಸ್ತುಗಳ ಬೆಲೆ ತಗ್ಗಿದ ಪರಿಣಾಮ: ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.6.7 ಇಳಿಕೆ ನಿರೀಕ್ಷೆ

ಅಂದು 100 ರೂಪಾಯಿಗೆ ಖರೀದಿಸುವ ಸಾಮಾನು ಈಗ 500 ಕೊಟ್ಟರು ಬರುವುದಿಲ್ಲ. ಕಾರಣ ಹಣದ ಮೌಲ್ಯ ಕಡಿಮೆಯಾಗಿದೆ, ಈ ಹಣದ ಮೌಲ್ಯ ಕಡಿಮೆಯಾಗಿರುವುದನ್ನೇ ನಾವು ಹಣದುಬ್ಬರ ಎನ್ನುತ್ತೇವೆ.