ಬೆಂಗಳೂರು: ಇತ್ತೀಚೆಗಷ್ಟೇ ರಾಜ್ಯ ಸಹಕಾರ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರವಾಗಿದೆ. ತತ್ಸಂಬಂಧ, ಸಹಕಾರ ಇಲಾಖೆಯ ಸಹಾಯಕ ನಿಭಂದಕ ಗಂಗಾಧರ್ ಅವರು ದೂರು ದಾಖಲಿಸಿದ್ದು, ಕೆಆರ್ ಪುರಂ(K R Puram) ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಭ್ರಷ್ಟಾಚಾರದ ಈ ಆರೋಪವು ನಿರ್ದಿಷ್ಟವಾಗಿ ಐಟಿಐ(ITI) ನೌಕರರ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಭೂಮಿ ಹಂಚಿಕೆಗೆ ಸಂಬಂಧಿಸಿದೆ.
ಇದರ ಪರಿಣಾಮವಾಗಿ, 2021-2022ರ ಅವಧಿಯಲ್ಲಿ ನಿರ್ಮಿಸಲಾದ ನಿವೇಶನಗಳ ಹಂಚಿಕೆಗೆ ಸಂಬಂಧಿಸಿದಂತೆ ಸಂಘದ ಅಧ್ಯಕ್ಷ ಜಿ.ಎಸ್. ರಾಮಶಾಮಯ್ಯ, ಕಾರ್ಯದರ್ಶಿ ಶಿವಾನಂದ ಸೇರಿದಂತೆ 13 ವ್ಯಕ್ತಿಗಳ ವಿರುದ್ಧ ಎಫ್‌ಐಆರ್‌ಗಳು(FIR) ದಾಖಲಾಗಿವೆ.

ಬೆಂಗಳೂರಿನ(Bengaluru) ಎಳ್ಳುಕುಂಟೆ ಬಡಾವಣೆಯಲ್ಲಿ ನಿರ್ಮಾಣವಾಗಿದ್ದ ನಿವೇಶನ ಸಂಖ್ಯೆ 895, 896, 897, 898, 899, 900, 901, 902, 905, 907, 908, 910, 912, 913, 914 ಈ ನಿವೇಶನಗಳನ್ನ ಅತೀ ಕಡಿಮೆ ಬೆಲೆಗೆ ಮಾರಾಟ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ . ಅತೀ ಕಡಿಮೆ ಬೆಲೆಗೆ ಮಾರಾಟ ಮಾಡಿ ತನ್ಮೂಲಕ ಸಂಘಕ್ಕೆ ಆರ್ಥಿಕ ನಷ್ಟವನ್ನುಂಟುಮಾಡಲಾಗಿದೆ ಎನ್ನಲಾಗಿದೆ.
ಇದನ್ನೂ ಓದಿ : ಸಾವರ್ಕರ್, ಕೇಶವ ಹೆಡ್ಗೇವಾರ್ ಸ್ವಾತಂತ್ರ್ಯ ಹೋರಾಟಗಾರರೆನ್ನಲು ದಾಖಲೆಗಳನ್ನು ಕೊಡ್ತೇನೆ: ರೋಹಿತ್ ಚಕ್ರತೀರ್ಥ
ಜತೆಗೆ ನಾಯಂಡಳ್ಳಿ(Nayandalli) ಬಡಾವಣೆಯ ಪ್ಲಾಟ್ ನಂಬರ್ 695ನ್ನು ಸಂಘದ ಸದಸ್ಯೆಯಲ್ಲದ ಪಾರ್ವತಮ್ಮ ಎಂಬುವವರಿಗೆ ಕೇವಲ 2.88 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದ ರಾಮಶಾಮಯ್ಯ ವಿರುದ್ಧ ಗಂಭೀರ ಆರೋಪ ಮಾಡಲಾಗಿದೆ.

ಇದಲ್ಲದೆ ವಿದ್ಯಾಪೀಠದ(Vidya Peetha) ಪ್ಲಾಟ್ ನಂಬರ್ 38 ಮತ್ತು ಮಲ್ಲತಳ್ಳಿ ನಿವೇಶನ ಹಂಚಿಕೆಯಲ್ಲಿ ಗೋಲ್ ಮಾಲ್ ಘಟನೆ ನಡೆದಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ನಿವೇಶನಗಳನ್ನು ವಿನಾಕಾರಣ ಕಡಿಮೆ ಬೆಲೆಗೆ ಮಾರಾಟ ಮಾಡಿರುವ ಬಗ್ಗೆ ಪೊಲೀಸರಿಗೆ ದೂರುಗಳು ಬಂದಿವೆ. ಇದರಿಂದ ಸಂಘಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಕ್ರಿಮಿನಲ್ ಮೊಕದ್ದಮೆಯನ್ನು ಒಟ್ಟು 13 ಮಂದಿ ವಿರುದ್ದ ದಾಖಲಿಸಿ ತನಿಖೆ ನಡೆಸುವಂತೆ ಈಗಾಗಲೇ ದೂರು ನೀಡಲಾಗಿದೆ. ಕೆ ಆರ್ ಪುರಂ ಪೊಲೀಸ್ ಠಾಣೆಯಲ್ಲಿ ಇದೀಗ ಎಫ್ ಐ ಆರ್ ದಾಖಲಾಗಿದೆ.
ರಶ್ಮಿತಾ ಅನೀಶ್