Health tips : ಕಾಟೇಜ್ ಚೀಸ್ (Cottage cheese) ಎಂದು ಕರೆಯಲ್ಪಡುವ ಪನ್ನೀರ್ ನಮ್ಮ ದೇಹದಲ್ಲಿ ಕೊಬ್ಬಿನಾಂಶವನ್ನು (fat content) ಹೆಚ್ಚಿಸುತ್ತದೆ. ಇದನ್ನು ತಿನ್ನುವುದರಿಂದ ನಮ್ಮ ತೂಕ ಹೆಚ್ಚಾಗುತ್ತದೆ ಎಂದು (cottage cheese benefits) ಹಲವರು ಅಭಿಪ್ರಾಯಿಸುತ್ತಾರೆ. ಪನ್ನೀರ್ ಸೇವನೆಯಿಂದ ನಮ್ಮ ದೇಹಕ್ಕೆ ದೊರೆಯುವ ಆರೋಗ್ಯ ಪ್ರಯೋಜನಗಳ ಬಗ್ಗೆ ಇಲ್ಲಿದೆ ಮಾಹಿತಿ ತಿಳಿಯಿರಿ.
ಪನ್ನೀರ್ ಅನ್ನು ಹಲವು ಬಗೆಯ ತಿಂಡಿಗಳಿಗೆ ಬಳಸುತ್ತಾರೆ. ಪನ್ನೀರ್ ಬಳಸಿ ಆರೋಗ್ಯಕರ, ರುಚಿಕರ ಆಹಾರವನ್ನು ತಯಾರಿಸಬಹುದು.
ನಮ್ಮಲ್ಲಿ ಹೆಚ್ಚಾಗಿ ಚಪಾತಿ, ದೋಸೆ ಇದಕ್ಕೆ ಸರಿಯಾಗಿ ಹೊಂದುವಂತೆ ಪಾಲಕ್ ಪನ್ನೀರ್ ಮಾಡಿ ಸೇವಿಸುತ್ತಾರೆ.
ಇನ್ನು ಕೆಲವರು ಪನ್ನೀರ್ ಬೊಂಡ, ಪನ್ನೀರ್ ಕರೀ ಮಾಡಿ ಸೇವಿಸುತ್ತಾರೆ ಜೊತೆಗೆ ಸಲಾಡ್ ನಲ್ಲಿ ಸೇರಿಸಿಕೊಳ್ಳುತ್ತಾರೆ.
ಪನ್ನೀರ್ ಪ್ರೊಟೀನ್ (Protein) ನಲ್ಲಿ ಹೆಚ್ಚು ಸಮೃದ್ಧವಾಗಿದೆ. ಪನ್ನೀರ್ ಪೂರ್ಣ ಕೆನೆ ಹಾಲಿನಿಂದ ಕೂಡಿರುವುದರಿಂದ, ಇದು ಪ್ರೋಟೀನ್ ಜೊತೆಗೆ (cottage cheese benefits) ಕೊಬ್ಬಿನಂಶವೂ ಅಧಿಕವಾಗಿರುತ್ತದೆ.
ಕಬ್ಬಿಣ ಅಂಶವನ್ನು ಹೊರತುಪಡಿಸಿ, ಬಹುತೇಕ ಎಲ್ಲಾ ಅಗತ್ಯ ಖನಿಜಗಳು ಕಾಟೇಜ್ ಚೀಸ್‌ನಲ್ಲಿ ಅಡಗಿದೆ.
ಕಾಟೇಜ್ ಚೀಸ್ ಅಥವಾ ಪನ್ನೀರ್ ಅನ್ನು ಬೇಯಿಸುವುದಕ್ಕಿಂತ ಹೆಚ್ಚಾಗಿ ಅದನ್ನು ನೇರವಾಗಿ ಸೇವಿಸುವವರ ಸಂಖ್ಯೆ ಇದೆ.
ಇದನ್ನೂ ಓದಿ : https://vijayatimes.com/high-court-important-order/
ಪನ್ನೀರ್‌ನ ಒಂದು ಘನವು ಪ್ರೋಟೀನ್‌ನ ಶಕ್ತಿ ಕೇಂದ್ರ ಎಂದೇ ಹೇಳಬಹುದು. ಪನ್ನೀರ್ ಸೇವನೆ ಮೂಳೆಗಳು ಮತ್ತು ಹಲ್ಲುಗಳನ್ನು ಬಲಪಡಿಸುತ್ತದೆ. ಕಾಟೇಜ್ ಚೀಸ್ ಕ್ಯಾಲ್ಸಿಯಂನ ಅತ್ಯುತ್ತಮ ಮೂಲಗಳಲ್ಲಿ ಒಂದಾಗಿದೆ.
100 ಗ್ರಾಂ ಕಾಟೇಜ್ ಚೀಸ್‌ನಲ್ಲಿ 83 ಗ್ರಾಂ ಪ್ರೋಟೀನ್ ಅನ್ನು ಹೊಂದಿರುತ್ತದೆ!
ಸಾಕಷ್ಟು ಕ್ಯಾಲ್ಸಿಯಂ ಮಟ್ಟಗಳು ಆರೋಗ್ಯಕರ ಮೂಳೆಗಳು, ಹಲ್ಲುಗಳು, ಆರೋಗ್ಯಕರ ಹೃದಯ ಸ್ನಾಯುಗಳು ಮತ್ತು ನಯವಾದ ನರಗಳ ಕಾರ್ಯನಿರ್ವಹಣೆಯನ್ನು ಮಾಡುತ್ತದೆ.
ಪನ್ನೀರ್ ಜೀರ್ಣಕ್ರಿಯೆಗೆ (digestion) ಸಹಾಯ ಮಾಡುತ್ತದೆ. ಕಾಟೇಜ್ ಚೀಸ್ ಯೋಗ್ಯವಾದ ರಂಜಕವನ್ನು ಹೊಂದಿದ್ದು, ಅದು ಜೀರ್ಣಕ್ರಿಯೆ ಮತ್ತು ಮಲ ವಿಸರ್ಜನೆಗೆ ಸಹಾಯ ಮಾಡುತ್ತದೆ.
ಕಾಟೇಜ್ ಚೀಸ್‌ನಲ್ಲಿರುವ ಮೆಗ್ನೀಸಿಯಮ್ ಮಲಬದ್ಧತೆಯನ್ನು ತಡೆಯುತ್ತದೆ. ಮೆಗ್ನೀಸಿಯಮ್ ವಿರೇಚಕ ಪರಿಣಾಮವನ್ನು ಹೊಂದಿದೆ. ಇದರರ್ಥ ಅದು ನೀರಿನ ಅಂಶವನ್ನು ಮಲಕ್ಕೆ ಸೇರಿಸುತ್ತದೆ.
ವಿಶೇಷ ಸೂಚನೆ : ಈ ಮಾಹಿತಿ ಅನ್ನು ಮೂಲಗಳಿಂದ ಕಲೆಹಾಕಿ ನಿಮಗೆ ತಿಳಿಸಿದ್ದೇವೆ. ಇನ್ನು ಹೆಚ್ಚಿನ ಮಾಹಿತಿಗೆ ಒಮ್ಮೆ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯುವುದು ಉತ್ತಮ.