ಬಹೂಪಯೋಗಿ ಔಷಧೀಯ ಗುಣವಿರುವ ಶುಂಠಿಯನ್ನು ನಿತ್ಯವೂ ಆಹಾರದಲ್ಲಿ ಸೇವಿಸಿದರೆ ಉತ್ತಮ ಆರೋಗ್ಯವನ್ನು ಪಡೆಯಬಹುದು. ಮಕ್ಕಳಿಗೂ ದೊಡ್ಡವರಿಗೂ ಕಫ ಹೆಚ್ಚಾಗಿದ್ದಾಗ ಶುಂಠಿಯ ರಸವನ್ನು ಈರುಳ್ಳಿ ರಸದೊಂದಿಗೆ ಸೇವಿಸುತ್ತಾ ಬಂದರೆ ಕಫ ನಿವಾರಣೆಯಾಗುತ್ತದೆ. ಅಜೀರ್ಣವಾಗಿದ್ದರೆ ಹಸಿ ಶುಂಠಿಯನ್ನು ಚಿಟಿಕೆ ಉಪ್ಪು ಸೇರಿಸಿ ಜಗಿದು ತಿಂದರೆ ಜೀರ್ಣ ಶಕ್ತಿ ಹೆಚ್ಚಿ ಹೊಟ್ಟೆಯಲ್ಲಿ ಹಸಿವು ಹೆಚ್ಚಾಗುತ್ತದೆ.
ಬಾಯಿಯಲ್ಲಿ ಹುಣ್ಣಾಗಿದ್ದರೆ ಶುಂಠಿಯನ್ನು ಜಜ್ಜಿ ಮೊಸರು ಅಥವಾ ಮಜ್ಜಿಗೆಯಲ್ಲಿ ಹಾಕಿ ಕುಡಿದರೆ ಬಾಯಿ ಹುಣ್ಣು ನಿವಾರಣೆಯಾಗುತ್ತದೆ.ಅತಿಯಾಗಿ ದಾಹವಾಗುತ್ತಿದ್ದರೆ ಮಜ್ಜಿಗೆಗೆ ಶುಂಠಿಯನ್ನು ಜಜ್ಜಿ ಹಾಕಿ ಕುಡಿದರೆ ದಾಹವು ನಿವಾರಣೆಯಾಗಿ ಹೊಟ್ಟೆ ತಂಪಾಗುತ್ತದೆ. ಸಂದಧಿವಾತವಿದ್ದವರು ಶುಂಠಿ ಪುಡಿಯ ಜೊತೆಗೆ ಅಶ್ವಗಂಧದ ಪುಡಿಯನ್ನು ಪ್ರತೀ ದಿನ ಹಾಲಿನೊಂದಿಗೆ ಸೇವಿಸಿದರೆ ಸಂಧಿವಾತವನ್ನು ನಿವಾರಿಸಬಹುದು.
ಸಣ್ಣ ಮಕ್ಕಳಿಗೆ ಶುಂಠಿ ರಸದಲ್ಲಿ ಪ್ರತೀವಾರ ಚಿಹ್ನೆ ಮಾತ್ರೆಯನ್ನು ಕಲಸಿ ಕೊಡುವುದರಿಂದ ಮಕ್ಕಳು ಚುರುಕಾಗುವರು ಹಾಗೂ ಹಾಸಿಗೆಯಲ್ಲಿ ಮೂತ್ರ ಮಾಡುವುದನ್ನು ನಿಲ್ಲಿಸುತ್ತಾರೆ. ಮಲಬದ್ಧತೆಯಾಗಿರುವವರು ಶುಂಠಿರಸವನ್ನು ಮಜ್ಜಿಗೆಗೆ ಸೇರಿಸಿ ಕುಡಿಯುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ.