- ವಿಷಕಾರಿ ಕೋಲ್ಡ್ರಿಫ್ ಸಿರಪ್ ಸೇವನೆಯಿಂದ 20 ಮಕ್ಕಳ ಸಾ*
- ತಮಿಳುನಾಡಿನ ಶ್ರೀಶನ್ ಫಾರ್ಮಾ ಮಾಲೀಕ ರಂಗನಾಥನ್ ಬಂಧನ
- ಈಗಾಗಲೇ 9 ರಾಜ್ಯಗಳಲ್ಲಿ ಸಿರಪ್ ನಿಷೇಧ ಕಂಪನಿಯ ಪರವಾನಗಿ ಅಮಾನತು (Cough syrup kills 20 childrens)
Madhya Pradesh: ಕಳೆದ ಕೆಲ ದಿನಗಳಿಂದ ಮಧ್ಯಪ್ರದೇಶದಲ್ಲಿ ಕೆಮ್ಮಿನ ಸಿರಪ್(Cough syrup) ಕುಡಿದು ಮಕ್ಕಳು ಸಾ*ಗೀಡಾಗುತ್ತಿದ್ದಾರೆ. ಮಧ್ಯಪ್ರದೇಶದಲ್ಲಿ ನಡೆದ ಭೀಕರ ಘಟನೆಯು ದೇಶವನ್ನು ಬೆಚ್ಚಿಬೀಳಿಸಿದೆ.
ಕೋಲ್ಡ್ರಿಫ್(Coldriff) ಹೆಸರಿನ ಕೆಮ್ಮಿನ ಸಿರಪ್ ಸೇವನೆಯಿಂದ ಕನಿಷ್ಠ 20 ಮಕ್ಕಳು ಸಾ*ನ್ನಪ್ಪಿದ ಹಿನ್ನೆಲೆಯಲ್ಲಿ ತಮಿಳುನಾಡಿನ ಫಾರ್ಮಾ ಕಂಪನಿ ಶ್ರೀಶನ್ ಫಾರ್ಮಾ(Shrishan Pharma) ಮಾಲೀಕ ರಂಗನಾಥನ್(Ranganathan) ಅವರನ್ನು
ಮಧ್ಯಪ್ರದೇಶ ಪೊಲೀಸರು ಚೆನ್ನೈಯಲ್ಲಿ(Chennai) ಬಂಧಿಸಿದ್ದಾರೆ. ಈ ಪ್ರಕರಣದ ಕುರಿತು ಹಲವು ರಾಜ್ಯಗಳಲ್ಲಿ ತನಿಖೆ ಮುಂದುವರಿದಿದೆ. ಕೆಮ್ಮು, ನೆಗಡಿ ಮತ್ತು ಗಂಟಲು ನೋವಿನಿಂದ ಬಳಲುತ್ತಿದ್ದ ಮಕ್ಕಳಿಗೆ
ಕೋಲ್ಡ್ರಿಫ್ ಸಿರಪ್ ನೀಡಲಾಗುತ್ತಿತ್ತು. ಆದರೆ ಈ ಸಿರಪ್ ಸೇವಿಸಿದ ನಂತರ ಮಕ್ಕಳಲ್ಲಿ ತೀವ್ರ ಕಿಡ್ನಿ ಸೋಂಕು, ವಾಂತಿ, ಮತ್ತು ನರವ್ಯೂಹ ಸಮಸ್ಯೆಗಳು ಕಾಣಿಸಿಕೊಂಡು ಕೆಲವೇ ದಿನಗಳಲ್ಲಿ ಅವರ ಸಾ*ಗೆ ಕಾರಣವಾಯಿತು.

ಈ ಘಟನೆ ಬಳಿಕ ಆರೋಗ್ಯ ಇಲಾಖೆ ಸಿರಪ್ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿದಾಗ, ಅದರಲ್ಲಿ ಡೈಥಿಲೀನ್ ಗ್ಲೈಕಾಲ್ (DEG) ಎಂಬ ವಿಷಕಾರಿ ರಾಸಾಯನಿಕ ಪತ್ತೆಯಾಯಿತು.
ಈ ರಾಸಾಯನಿಕವನ್ನು ಸಾಮಾನ್ಯವಾಗಿ ಪ್ರಿಂಟಿಂಗ್ ಇಂಕ್, ಅಂಟು ಮತ್ತು ಇಂಡಸ್ಟ್ರಿಯಲ್ ಸಾಲ್ವೆಂಟ್‌ಗಳಲ್ಲಿ ಬಳಸಲಾಗುತ್ತದೆ. ಮನುಷ್ಯ ದೇಹದಲ್ಲಿ ಇದರ ಸೇವನೆಯು ಕಿಡ್ನಿ,
ಯಕೃತ್ತು ಹಾಗೂ ನರವ್ಯೂಹಗಳಿಗೆ ತೀವ್ರ ಹಾನಿ ಉಂಟುಮಾಡುತ್ತದೆ. ವೈದ್ಯಕೀಯವಾಗಿ ಕೇವಲ 0.1% ಪ್ರಮಾಣದಷ್ಟೇ DEG ಬಳಕೆ ಅನುಮತಿತವಾಗಿದ್ದರೂ,
ಶ್ರೀಶನ್ ಫಾರ್ಮಾ ಕಂಪನಿಯು ಅದನ್ನು ಶೇಕಡಾ 46 ರಿಂದ 48ರಷ್ಟು ಪ್ರಮಾಣದಲ್ಲಿ ಬಳಸಿದ್ದ ಶಾಕಿಂಗ್ ವರದಿ ಬೆಳಕಿಗೆ ಬಂದಿದೆ.
ಇನ್ನು ಕೋಲ್ಡ್ರಿಫ್ ಸಿರಪ್‌ನಿಂದ ಮಕ್ಕಳ ಸಾವಿನ ಪ್ರಕರಣದ ನಂತರ ಮಧ್ಯಪ್ರದೇಶ ಪೊಲೀಸರು ವ್ಯಾಪಕ ತನಿಖೆ ಕೈಗೊಂಡು, ರಂಗನಾಥನ್ ಅವರ ವಿರುದ್ಧ 20,000 ರೂ. ಬಹುಮಾನ ಘೋಷಿಸಿದ್ದರು.
ಕೊನೆಗೆ, ಅವರು ಚೆನ್ನೈಯಲ್ಲಿ ಬಂಧಿತರಾಗಿದ್ದು, ಹೆಚ್ಚಿನ ವಿಚಾರಣೆ ನಡೆಯುತ್ತಿದೆ. ತನಿಖೆಯಲ್ಲಿ ಕಾರ್ಖಾನೆಯೊಳಗೆ ಯಾವುದೇ ಸರಕಾರಿ ಅನುಮೋದನೆ ಇಲ್ಲದೆ ಸಂಗ್ರಹಿಸಿದ್ದ ಡಿಇಜಿ ಕಂಟೇನರ್‌ಗಳು(DEG containers)
ಪತ್ತೆಯಾಗಿವೆ. ತಮಿಳುನಾಡಿನ(Tamil Nadu) ಕಾಂಚೀಪುರಂ ಜಿಲ್ಲೆಯಲ್ಲಿ ಇರುವ ಶ್ರೀಶನ್ ಫಾರ್ಮಾ ಕಾರ್ಖಾನೆಯನ್ನು ರಾಜ್ಯ ಔಷಧ ನಿಯಂತ್ರಣ ಪ್ರಾಧಿಕಾರವು(Drug Regulatory Authority) ತಕ್ಷಣವೇ ಮುಚ್ಚುವಂತೆ ಆದೇಶಿಸಿದೆ.
ಉತ್ಪಾದನಾ ಪರವಾನಗಿಯನ್ನು ಅಮಾನತುಗೊಳಿಸಿ, ಎಲ್ಲಾ ಸಿರಪ್ ದಾಸ್ತಾನುಗಳನ್ನು(Syrup inventory) ವಶಕ್ಕೆ ಪಡೆದಿದೆ. ಕಂಪನಿಗೆ ಶೋ-ಕಾಸ್ ನೋಟಿಸ್ ನೀಡಲಾಗಿದೆ ಮತ್ತು ಕಾನೂನು ಕ್ರಮ ಮುಂದುವರಿಯುತ್ತಿದೆ.
ಇನ್ನು ಈ ವಿಷಕಾರಿ ಸಿರಪ್ ಪ್ರಕರಣವು ದೇಶದಾದ್ಯಂತ ಆತಂಕ ಮೂಡಿಸಿದೆ. ಕನಿಷ್ಠ ಒಂಬತ್ತು ರಾಜ್ಯಗಳು ಈಗಾಗಲೇ ಈ ಸಿರಪ್ ಮಾರಾಟವನ್ನು ನಿಷೇಧಿಸಿವೆ.
ಇದನ್ನು ಓದಿ : ಮಧ್ಯಪ್ರದೇಶದಲ್ಲಿ ಕೆಮ್ಮಿನ ಸಿರಪ್ ಸೇವಿಸಿದ 6 ಮಕ್ಕಳು ಮೂತ್ರಪಿಂಡ ವೈಫಲ್ಯದಿಂದ ಸಾ*: ಸಾ*ನ ಸಂಖ್ಯೆ 20ಕ್ಕೆ ಏರಿಕೆ
ರಾಷ್ಟ್ರದ ಔಷಧ ನಿಯಂತ್ರಕ ಸಂಸ್ಥೆಯು ಈಗ ಔಷಧ ತಯಾರಿಕಾ ಘಟಕಗಳಲ್ಲಿ ಕಚ್ಚಾ ವಸ್ತುಗಳ ಗುಣಮಟ್ಟ ತಪಾಸಣೆಯನ್ನು ಕಡ್ಡಾಯಗೊಳಿಸಲು ಕ್ರಮ ಕೈಗೊಂಡಿದೆ. (Cough syrup kills 20 childrens)