Kerala : ಕೇರಳ ರಾಜ್ಯದ ನವ ಜೋಡಿ ತಮ್ಮ ಮದುವೆಗೆ ಭಾರತೀಯ ಸೇನೆಯನ್ನು(Couples Invite Indian Army) ವಿಶೇಷ ರೀತಿಯಲ್ಲಿ ಆಹ್ವಾನಿಸಲು ಪತ್ರವನ್ನು ಕಳುಹಿಸಿದ್ದಾರೆ.
10ನೇ ನವೆಂಬರ್ 2022 ರಂದು ವಿವಾಹವಾದ ರಾಹುಲ್ ಮತ್ತು ಕಾರ್ತಿಖಾ ಅವರು ತಮ್ಮ ಮದುವೆಯ ಆಮಂತ್ರಣವನ್ನು ಭಾರತೀಯ ಸೇನೆಗೆ ಪತ್ರದಲ್ಲಿ ಸುದೀರ್ಘವಾಗಿ ಈ ರೀತಿ ಬರೆದಿದ್ದಾರೆ.

ದೇಶದ ಬಗೆಗಿನ ಪ್ರೀತಿ, ಸಂಕಲ್ಪ ಮತ್ತು ದೇಶಪ್ರೇಮಕ್ಕಾಗಿ ಸೇನೆಗೆ ಮೊದಲು ಧನ್ಯವಾದ ಎಂದು ಪತ್ರವನ್ನು ಪ್ರಾರಂಭಿಸಿದ ಅವರು, “ನಮ್ಮನ್ನು ಸುರಕ್ಷಿತವಾಗಿರಿಸಿದ್ದಕ್ಕಾಗಿ ನಾವು ನಿಮಗೆ ಕೃತಜ್ಞತೆಯ ಋಣಿಯಾಗಿದ್ದೇವೆ.
ನಿಮ್ಮಿಂದ ನಾವು ಪ್ರತಿದಿನ ಶಾಂತಿಯುತವಾಗಿ ಮಲಗುತ್ತೇವೆ. ನಮ್ಮ ಪ್ರೀತಿ ಪಾತ್ರರ ಜೊತೆ ನಮಗೆ ಸಂತೋಷದ ದಿನಗಳನ್ನು ಕಳೆಯಲು ನಿಮ್ಮ ತ್ಯಾಗಗಳು ಅಪಾರ.
ನಿಮ್ಮಿಂದ ನಾವು ಇಂದು ಸಂತೋಷದಿಂದ ಮದುವೆಯಾಗುತ್ತಿದ್ದೇವೆ. ನಾವು ನಮ್ಮ ವಿಶೇಷ ದಿನದಂದು ನಿಮ್ಮನ್ನು ಆಹ್ವಾನಿಸಲು ಬಹಳ ಖುಷಿ ಹಾಗೂ ಹೆಮ್ಮೆ ಪಡುತ್ತೀವಿ.
ನಿಮ್ಮ ಉಪಸ್ಥಿತಿ ಮತ್ತು ಆಶೀರ್ವಾದವನ್ನು ನಾವು ಬಯಸುತ್ತೇವೆ ಎಂದು ಬರೆದು ಆ ಪತ್ರವನ್ನು ಭಾರತೀಯ ಸೇನೆಗೆ ರವಾನಿಸಿದ್ದಾರೆ.
https://youtu.be/ZWQ_rEdzKjQ ಈ ಅಂಡರ್ ಪಾಸ್ ಕಳಪೆ ಕಾಮಗಾರಿಯನ್ನು ನೀವೇ ನೋಡಿ!
ಈ ಪತ್ರವನ್ನು ಸ್ವೀಕರಿಸಿದ ಭಾರತೀಯ ಸೇನೆಯು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್(Instagram) ಪುಟದಲ್ಲಿ ಈ ಆಹ್ವಾನವನ್ನು ಹಂಚಿಕೊಂಡಿದೆ.
ನಿಮ್ಮ ದಾಂಪತ್ಯ ಜೀವನ ಸುಖಕರವಾಗಿರಲಿ, ಭಾರತೀಯ ಸೇನೆಯು ರಾಹುಲ್ ಮತ್ತು ಕಾರ್ತಿಕಾ ಅವರಿಗೆ ಶುಭಾಶಯಗಳನ್ನು ತಿಳಿಸುತ್ತದೆ ಮತ್ತು ನವಜೋಡಿಗೆ ಆನಂದದಾಯಕ ವಿವಾಹದ ಜೀವನವನ್ನು ಬಯಸುತ್ತದೆ ಎಂದು ಬರೆದು ದಂಪತಿಗಳನ್ನು ಟ್ಯಾಗ್ ಮಾಡಿ ಪೋಸ್ಟ್ ಮಾಡಿದೆ.

ಈ ಚಿತ್ರವನ್ನು ಭಾರತೀಯ ಸೇನೆ ಹಂಚಿಕೊಂಡ ಒಂದು ದಿನದ ನಂತರ ಈ ಪೋಸ್ಟ್ಗೆ 82,000 ಲೈಕ್ಗಳು ಬಂದಿವೆ ಮತ್ತು ಹಲವಾರು ಕಾಮೆಂಟ್ಗಳು ವ್ಯಕ್ತವಾಗಿದೆ.
ಇನ್ಸ್ಟಾಗ್ರಾಂನಲ್ಲಿ ಕಾಮೆಂಟ್(Comment) ಮಾಡಿದ ಒಬ್ಬ ವ್ಯಕ್ತಿ, ನವ ಜೋಡಿಯಿಂದ ಇದು ಮೆಚ್ಚುವ ನಿರ್ಧಾರ ಎಂದು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ : https://vijayatimes.com/actor-chetan-justifies/
ಮತ್ತೊಬ್ಬರು ಇದು ನಿಜಕ್ಕೂ ಅದ್ಭುತವಾಗಿದೆ! ನಮ್ಮ ನಿಜವಾದ ಹೀರೋಗಳಿಗೆ ನಮ್ಮ ಹೃದಯದಲ್ಲಿರುವ ಪ್ರೀತಿಯನ್ನು ವ್ಯಕ್ತಪಡಿಸಲು ಇದು ಸೂಕ್ತ ಮಾರ್ಗ ಕಮೆಂಟ್ ಮಾಡಿದ್ದಾರೆ. ವಾವ್, ಈ ರೀತಿ ಮದುವೆಯ ಆಹ್ವಾನ ನೀಡಿರುವುದು ಮೆಚ್ಚುವ ಸಂಗತಿ, ನಮ್ಮ ನಿಜವಾದ ಹೀರೋಗಳಿಗೆ ಜೈ ಹಿಂದ್ ಎಂದು ಕಮೆಂಟ್ ಮಾಡಿದ್ದಾರೆ.