- 26 ಸಾಕ್ಷಿಗಳ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಿದ ಕೋರ್ಟ್
- ಪ್ರಜ್ವಲ್ ರಾಜಕೀಯ ಭವಿಷ್ಯಕ್ಕೆ ಬಹು ದೊಡ್ಡ ಆಘಾತ
- ಕೋರ್ಟ್ನಲ್ಲೇ ಕಣ್ಣೀರಿಟ್ಟ ಪ್ರಜ್ವಲ್ ರೇವಣ್ಣ
Bengaluru: ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ(Prajwal Revanna) ಇಂದು ದೊಡ್ಡ ಆಘಾತ ಉಂಟಾಗಿದೆ.
ಮನೆ ಕೆಲಸದ ಮಹಿಳೆಯ ಮೇಲಿನ ಅ*ಚಾರ ಪ್ರಕರಣದಲ್ಲಿ ಅವರು ದೋಷಿ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.
ನ್ಯಾಯಮೂರ್ತಿ ಸಂತೋಷ್ ಗಜಾನನ ಭಟ್(Santosh Gajanana Bhat) ಅವರು 26 ಸಾಕ್ಷಿಗಳ ಆಧಾರದಲ್ಲಿ ಈ ತೀರ್ಪು ನೀಡಿದ್ದು, ಇದರಿಂದ ಪ್ರಜ್ವಲ್ ರಾಜಕೀಯ ಭವಿಷ್ಯಕ್ಕೆ ಭರೆ ಬಿದ್ದಿದೆ .
ಹಾಗಾಗಿ ತೀರ್ಪು ಪ್ರಕಟವಾದ ಕೂಡಲೇ ಪ್ರಜ್ವಲ್ ರೇವಣ್ಣ ಕೋರ್ಟ್‌ನಲ್ಲೇ ಕಣ್ಣೀರಿಟ್ಟಿದ್ದಾರೆ. ಈ ಪ್ರಕರಣದ ವಿಚಾರಣೆಯು ಜುಲೈ 29ರಂದು ಪೂರ್ಣಗೊಂಡಿದ್ದು, ತೀರ್ಪು ಪ್ರಕಟಣೆಯು ಜುಲೈ 30ರಂದು ನಡೆಯಬೇಕಿತ್ತು.
ಆದರೆ, ಕೆಲ ನಿರ್ದಿಷ್ಟವಾದ ಕಾನೂನು ಸಂಗತಿಗಳನ್ನು ವಿವರವಾಗಿ ಸ್ಪಷ್ಟಪಡಿಸುವ ಅಗತ್ಯವಿದ್ದುದು ಕಾರಣದಿಂದ ತೀರ್ಪು ತಡವಾಯಿತು.
ಇದೀಗ ಆ ಸ್ಪಷ್ಟೀಕರಣಗಳಿಗೂ ಉತ್ತರ ಸಿಕ್ಕಿದ ಹಿನ್ನೆಲೆಯಲ್ಲಿ ನ್ಯಾಯಾಲಯ ತನ್ನ ತೀರ್ಪನ್ನು ನೀಡಿದೆ. ಇನ್ನು ಶಿಕ್ಷೆಯ ಪ್ರಮಾಣ ನಾಳೆ ಪ್ರಕಟಗೊಳ್ಳಲಿದೆ.

ಇನ್ನು ಈ ಹಿಂದೆ ನ್ಯಾಯಾಲಯವು ಗೂಗಲ್ ಮ್ಯಾಪ್ ಅನ್ನು ಸಾಕ್ಷಿಯಾಗಿ ಬಳಸಬಹುದೆಂಬ ಕುರಿತು ಪ್ರಶ್ನೆ ಎತ್ತಿತ್ತು. ಪ್ರಾಸಿಕ್ಯೂಷನ್ ಹಾಗೂ ಆರೋಪಿಗಳ ವಕೀಲರು ಮ್ಯಾಪ್‌ನಲ್ಲಿ ನೀಡಲಾದ ಸ್ಥಳದ ಅಕ್ಷಾಂಶ ಮತ್ತು ರೇಖಾಂಶಗಳನ್ನು ವಾದಕ್ಕೆ ಒಳಪಡಿಸಿದರು.
2021ರ ಫೋಟೋಗಳೊಂದಿಗೆ ಫಾರ್ಮ್ ಹೌಸ್‌ನ ಸ್ಥಳವನ್ನೂ ಗುರುತಿಸಲಾಗಿತ್ತು. ಎಸ್‌ಪಿ ಮಹಜರು ದಾಖಲೆ ಮೂಲಕ ಈ ಮಾಹಿತಿಯನ್ನು ಸಮರ್ಥಿಸಿದರು.
ಇದಲ್ಲದೆ, ತನಿಖೆಗಾಗಿ ಜಪ್ತಿ ಮಾಡಲಾಗಿದೆ ಎಂದು ಹೇಳಲಾಗಿದ ಸ್ಯಾಮ್ಸಂಗ್ ಜೆ4 ಮೊಬೈಲ್ ಫೋನ್ ಕುರಿತಂತೆ ಪ್ರಜ್ವಲ್ ರೇವಣ್ಣ ಅವರ ವಕೀಲ ವಿಪಿನ್ ಕುಮಾರ್ ಜೈನ್ ಅವರು ಪ್ರತಿವಾದ ನೀಡಿದರು.
ಅವರು ಮೊಬೈಲ್ ಈ ಪ್ರಕರಣಕ್ಕೆ ಸಂಬಂಧಪಟ್ಟದ್ದಲ್ಲ ಮತ್ತು ಇದು ಎಫ್‌ಎಸ್‌ಎಲ್‌ನಲ್ಲಿಯೂ ದಾಖಲಾಗಿಲ್ಲ ಎಂದು ವಿವರಣೆ ನೀಡಿದರು.
ಹೀಗಾಗಿ ಈ ಸಾಕ್ಷ್ಯವನ್ನು ಮಾನ್ಯತೆಯಿಲ್ಲದದ್ದೆಂದು ಪರಿಗಣಿಸುವಂತೆ ಮನವಿ ಮಾಡಿದ್ದರು.ಇನ್ನು ಈ ಕುರಿತು ಪ್ರಜ್ವಲ್ ಪರ ಹಾಗೂ ಸರಕಾರಿ ವಕೀಲರು ವಾದ ಮಂಡಿಸಬಹುದು ಎಂದು ನ್ಯಾಯಾಲಯ ಸೂಚಿಸಿತ್ತು .
ಅದರಿಂದಾಗಿ ಆಗಸ್ಟ್ 1ಕ್ಕೆ ವಿಚಾರಣೆ ಮುಂದೂಡಿತ್ತು. ಆದರೆ ಇದೀಗ ಪ್ರಜ್ವಲ್ ರೇವಣ್ಣ ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದೆ.
ಇನ್ನು ಘಟನೆಯ ಹಿನ್ನೆಲೆಯನ್ನು ನೋಡುವುದಾದರೆ ಕೆ ಆರ್ ಪೇಟೆ ಮೂಲದ 47 ವರ್ಷದ ಮನೆ ಕೆಲಸ ಮಾಡುತ್ತಿದ್ದ ಮಹಿಳೆಯ ಮೇಲೆ ಲೈಂ*ಕ ಕಿರುಕುಳ, ಅ*ಚಾರ ನೆಡೆಸಿದ್ದರು.
ವಿಷಯ ಹೊರಗೆ ಬರಬಹುದು ಎಂದು ಆ ಸಂತ್ರಸ್ತೆಯನ್ನು ಭವಾನಿ ರೇವಣ್ಣ, ಸತೀಶ್ ಬಾಬು ಸೇರಿದಂತೆ 9 ಜನ ಸೇರಿ ಅಪಹರಿಸಿ ಹುಣಸೂರು ಬಳಿಯ ತೋಟದ ಮನೆಯೊಂದರಲ್ಲಿ ಕೂಡಿ ಹಾಕಿದ್ದರು .
ನಂತರ ಇದೇ ಅಪಹರಣ ಪ್ರಕರಣದಿಂದ ಪ್ರಜ್ವಲ್ ರೇವಣ್ಣ ಸೇರಿದಂತೆ 8 ಜನ ಜೈಲಿಗೆ ಹೋಗಿದ್ದರು. ಭವಾನಿ ರೇವಣ್ಣ ಮತ್ತಿತರು ಬೇಲ್ ಮೇಲೆ ಹೊರಗೆ ಬಂದಿದ್ದರು.
ಈ ಘಟನೆಗೆ ಸಂಬಂಧಿಸಿದ ತನಿಖೆಯನ್ನು ವಿಶೇಷ ತನಿಖಾ ತಂಡ (SIT) ಹೊಣೆ ಹೊತ್ತಿತ್ತು .ನಂತರ, ಸಿಐಡಿ ಸೈಬರ್ ಕ್ರೈಮ್ ವಿಭಾಗವು ಲೈಂ*ಕ ಕಿರುಕುಳ, ಅಪರಾಧಾತ್ಮಕ ಬೆದರಿಕೆ ಮತ್ತು ಐಟಿ ಕಾಯ್ದೆಯಡಿ ಖಾಸಗಿತನ ಹಕ್ಕು ಉಲ್ಲಂಘನೆಗೆ ಸಂಬಂಧಿಸಿದ ಪ್ರತ್ಯೇಕ ಪ್ರಕರಣ ದಾಖಲಿಸಿತು.
ಪ್ರಜ್ವಲ್ ರೇವಣ್ಣರನ್ನು 2024ರ ಮೇ 31ರಂದು ಬಂಧಿಸಲಾಗಿತ್ತು . ಕಳೆದ 14 ತಿಂಗಳಿನಿಂದ ಬೆಂಗಳೂರು ಪರಪ್ಪನ ಅಗ್ರಹಾರದ ಕೇಂದ್ರ ಜೈಲಿನಲ್ಲಿ ಪ್ರಜ್ವಲ್ ರೇವಣ್ಣ ಬಂಧನದಲ್ಲಿದ್ದರು.
ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಮೊಮ್ಮಗನಾದ ಪ್ರಜ್ವಲ್, 2019ರಲ್ಲಿ ಹಾಸನದಿಂದ ಸಂಸದರಾಗಿದ್ದರು. 2024ರ ಚುನಾವಣೆ ಸಮಯದಲ್ಲಿ ಅವರ ಅಶ್ಲೀಲ ವಿಡಿಯೋಗಳು ಎಲ್ಲೆಡೆ ಹರಿದಾಡಿ ಭಾರಿ ವಿವಾದ ಸೃಷ್ಟಿಸಿದ್ದವು.
ಇದನ್ನು ಓದಿ : ಪ್ರಜ್ವಲ್ ರೇವಣ್ಣ ರಾಜಕೀಯ ಭವಿಷ್ಯ ಆ.1 ರಂದು ರಿವೀಲ್: ಪ್ರಜ್ವಲ್ ರೇವಣ್ಣಗೆ ಜೈಲಾ? ಬೇಲಾ?
ಇಂದು ಕೆ ಆರ್ ಪೇಟೆ ಮಹಿಳೆಯ ಮೇಲೆ ಲೈಂ*ಕ ಕಿರುಕುಳ ಹಾಗೂ ಅ*ಚಾರ ಸಾಬೀತಾಗಿದ್ದು ಅದರ ತೀರ್ಪು ಪ್ರಕಟಿಸಿರುವ ನ್ಯಾಯಾಲಯ ನಾಳೆ ಶಿಕ್ಷೆಯ ಪ್ರಮಾಣವನ್ನ ಪ್ರಕಟಿಸಲಿದೆ. ಇನ್ನು ಪ್ರಜ್ವಲ್ ರೇವಣ್ಣ ಅವರ ಮೇಲಿನ ಮೂರು ಪ್ರತ್ಯೇಕ ಪ್ರಕರಣಗಳು ವಿಚಾರಣಾ ಹಂತದಲ್ಲಿವೆ.