ಉದ್ಯೋಗಾಂಕ್ಷಿಗಳಿಗೊಂದು ಶಾಕಿಂಗ್ ನ್ಯೂಸ್ !
ರಾಜ್ಯದಲ್ಲಿ ನಡೆದಿದೆ ಅತೀ ದೊಡ್ಡ ಜಾಬ್ ದೋಖಾ !
ಕೋರ್ಟ್ನಲ್ಲಿ ಕೆಲಸ ಕೊಡ್ತೀವಿ ಅಂತ ಮೋಸ (Court job scam)
ವಂಚನೆಗೆ ಹೈಕೋರ್ಟ್ ರಿಜಿಸ್ಟರ್ ಸಹಿ ಬಳಕೆ
ಉದ್ಯೋಗಾಂಕ್ಷಿಗಳಿಗೊಂದು ಶಾಕಿಂಗ್ ನ್ಯೂಸ್ (Shocking news) ಎದುರಾಗಿದೆ.ರಾಜ್ಯದಲ್ಲಿ ಅತಿ ದೊಡ್ಡ ಜಾಬ್ ದೋಖಾ ನಡೀತಾ ಇದೆ.ಇಷ್ಟು ದಿನ ಬೇರೆ ಬೇರೆ ಸರ್ಕಾರಿ ಇಲಾಖೆಗಳಲ್ಲಿ (government departments) ಕೆಲಸ ಕೊಡಿಸ್ತೀವಿ ಅಂತ ಹಣಪಡೆದು ವಂಚಿಸುತ್ತಿದ್ದ ಖದೀಮರು ಈಗ ನ್ಯಾಯಾಲಯದ (Court) ಹೆಸರನ್ನು ದುರ್ಬಳಕೆ ಮಾಡಿದ್ದಾರೆ.
ನೇರ ನೇಮಕಾತಿ (Direct Recruitment) ಮೂಲಕ ಜಾಬ್ ಕೊಡಸ್ತೀವಿ ಅಂತ ಹೇಳಿ 500 ರಿಂದ 600 ಜನರಿಗೆ ವಂಚಿಸಿ ಕೋಟಿ ಕೋಟಿ ಲೂಟಿ ಮಾಡಿದ್ದಾರೆ. ಇವರು ವಂಚಿಸಿದ್ದು ಯಾರ ಹೆಸರಲ್ಲಿ ಗೊತ್ತಾ? ಸ್ವತ: ಅಂದಿನ ಹೈಕೋರ್ಟ್ ರಿಜಿಸ್ಟರ್ (High Court Register) ಆಗಿದ್ದ ಮಂಜುನಾಥ್ ನಾಯಕ್ ಅವರ ಹೆಸರಲ್ಲಿ.
ಪ್ರಸ್ತುತ ಇವರು ಶಿವಮೊಗ್ಗ ನ್ಯಾಯಾಲಯದ ನ್ಯಾಯಾಧೀಶರಾಗಿದ್ದಾರೆ. ಮಂಜುನಾಥ್ ನಾಯಕ್ ಅವರ ಹೆಸರು ಹಾಗೂ ಸಹಿಯನ್ನು ಬಳಸಿ ಈ ಮಹಾನ್ ವಂಚಕರು ಒಬ್ಬೊಬ್ಬರಿಂದ 25 ಲಕ್ಷ, 30 ಲಕ್ಷ ಹಣ ಪಡೆದು ಮಕ್ಮಲ್ ಟೋಪಿ ಹಾಕಿದ್ದಾರೆ.
ಈ ಹಗರಣದ ಬಗ್ಗೆ ಇನ್ನಷ್ಟು ತನಿಖೆ ಮಾಡಿದಾಗ ಗೊತ್ತಾಯ್ತು ಈ ಎಲ್ಲಾ ಮೋಸದಾಟ ನಡೆದಿರೋದೇ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ (Civil Court) ಆವರಣದ ವಕೀಲರ ಭವನದಲ್ಲಿ.ರಾಜ್ಯದ ಆರು ನೂರಕ್ಕೂ ಹೆಚ್ಚು ಜನರಿಂದ ಕೋಟ್ಯಾಂತರ ರೂಪಾಯಿಯನ್ನು ಖದೀಮರು ಲೂಟಿ ಮಾಡಿದ್ದಾರೆ.

ಸುದರ್ಶನ್ ಅಡ್ಯಂತಾಯ,ಅರ್ಜುನ್ ಅಡ್ಯಂತಾಯ, ಲವೀನ ಹಾಗೂ ಜೈಸನ್ ಎಂಬುವವರು ಉದ್ಯೋಗಾಂಕ್ಷಿಗಳಿಂದ ಹಣ ಪಡೆದು ಮೋಸ ಮಾಡಿ, ಜನರ ಕೈಗೆ ಚೊಂಬು ಕೊಟ್ಟು ಉಂಡೆ ನಾಮ ಹಾಕಿದ್ದಾರೆ.
ಆರ್ಥಿಕ ಇಲಾಖೆಯ (Finance Department) ಆದೇಶದ ಪ್ರತಿ ಮತ್ತು ನ್ಯೂಸ್ ಪೇಪರ್ ಕಟ್ಟಿಂಗ್ ಹಿಡ್ಕೊಂಡು ಸರ್ಕಾರಿ ಹುದ್ದೆಯ (Govt post) ಹಿಂದೆ ಬಿದ್ದವರಿಗೆ 25 ಲಕ್ಷಕ್ಕೆ sda, 30 ಲಕ್ಷಕ್ಕೆ fda ಕೆಲಸ ಕೊಡ್ತೇವೆ ಅಂತ ಈ ಸುದರ್ಶನ್ ಅಡ್ಯಂತಾಯ, ಅರ್ಜುನ್ ಅಡ್ಯಂತಾಯ, ಲವೀನ ಹಾಗೂ ಜೈಸನ್ ಭರ್ಜರಿಯಾಗಿ ಯಾಮಾರಿಸಿದ್ದಾರೆ.
ಇಷ್ಟೆಲ್ಲಾ ವಂಚನೆ ನಡೆದಿದ್ದು ವಕೀಲರ ಭವನದಲ್ಲಿ. ವಕೀಲರ ಭವನದ ಮೂರನೇ ಮಹಡಿಯ ಒಂದು ಕೋಣೆಯನ್ನು ನೀಟ್ ಆಗಿ ಸೆಟಪ್ ಮಾಡಿ, ಅಲ್ಲಿಗೆ ನೂರಾರು ಉದ್ಯೋಗಾಕಾಂಕ್ಷಿಗಳನ್ನು ಕರೆಸಿ ಆರ್ಡರ್ ಕಾಪಿ (Order copy) ತೋರಿಸಿದ್ದಾರೆ. ಆ ಆರ್ಡರ್ ಕಾಪಿಯಲ್ಲಿ ಮಂಜುನಾಥ್ ನಾಯಕ್ ಅವರ ಸಹಿ ಇತ್ತು, ಆದ್ರೆ ಆ ಕಾಪಿಯನ್ನು ಯಾರ ಕೈಗೂ ಕೊಡಲಿಲ್ಲ.
ಆದ್ರೆ ಅದು ಸುದರ್ಶನ್ ಅಡ್ಯಂತಾಯನ ಕೈಯಲ್ಲಿದೆ ಅನ್ನೋದು ಮೋಸ ಹೋದವರ ದೂರು.ಇದೇ ವಕೀಲರ ಭವನದಲ್ಲಿ ಎರೆಡೆರಡು ಬಾರಿ ಡಾಕ್ಯುಮೆಂಟ್ ವೆರಿಫಿಕೇಷನ್ (Document Verification) ಮಾಡಲು 600 ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಕರೆಸಿದ್ದಾರೆ. ಪ್ಯಾನಲ್ನಲ್ಲಿ ಐದಾರು ಮಂದಿ ಕಪ್ಪು ಕೋಟು ಹಾಕಿರುವವರನ್ನು ಕೂರಿಸಿದ್ದಾರೆ. ಇದೆಲ್ಲವನ್ನು ನೋಡಿ, ನಂಬಿ ಜನರು ಲಕ್ಷಾಂತರ ರೂಪಾಯಿ ಕೊಟ್ಟು ಮೋಸ ಹೋಗಿದ್ದಾರೆ.
ಜಾಬ್ ವಂಚಕರಾದ ಸುದರ್ಶನ್, ಅರ್ಜುನ್, ಲವೀನಾ, ಜೈಸನ್ ವಿರುದ್ಧ ಜಾಲಹಳ್ಳಿ ಮತ್ತು ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ (Byatarayanapura Police Station) ಎಫ್ ಐ ಆರ್ ಕೂಡ ದಾಖಲಾಗಿದೆ. ಆದರೆ ಇವರ ಬಗ್ಗೆ ಪೋಲಿಸರು ತನಿಖೆ ಮಾಡದೆ ಹಾಗೆ ಬಿಟ್ಟಿದ್ದಾರೆ.
ಈ ಜಾಬ್ ದೋಖಾ ಬರೀ ಬೆಂಗಳೂರಲ್ಲಿ ಮಾತ್ರ ನಡೆದಿಲ್ಲ ತುಮಕೂರು (Tumkur), ಕೊಪ್ಪಳ (Koppala) ಸೇರಿದಂತೆ ನಾನಾ ಕಡೆ (Court job scam) ನ್ಯಾಯಾಲಯದ ಆವರಣದಲ್ಲೇ ನಡೆದು ಸಾವಿರಾರು ಮಂದಿಗೆ ಮೋಸ ಆಗಿದೆ. ಈ ವಂಚನಾ ಜಾಲ ರಾಜ್ಯಾದ್ಯಂತ ಹಬ್ಬಿದೆ. ರಾಜ್ಯ ಸರ್ಕಾರ (State Govt) ತಕ್ಷಣವೇ ಎಚ್ಚೆತ್ತುಕೊಂಡು ಈ ಭಾರೀ ಹಗರಣದ ಕುರಿತು ಪ್ರಾಮಾಣಿಕವಾಗಿ ತನಿಖೆ ನಡೆಸಬೇಕು. ಆ ಮೂಲಕ ನ್ಯಾಯಾಲಯದ ಘನತೆ, ಗೌರವವನ್ನು ಎತ್ತಿ ಹಿಡಿಯಬೇಕಿದೆ.