ನವದೆಹಲಿ ನ 10 : ಪ್ರಸ್ತುತ 96 ದೇಶಗಳು ಭಾರತದ ಕೋವಿಡ್ ಲಸಿಕಾ ಸರ್ಟಿಫಿಕೇಟ್‌ಗೆ ಮಾನ್ಯತೆ ನೀಡಲು ಒಪ್ಪಿಕೊಂಡಿವೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಮನ್ಸುಖ್ ಮಾಂಡವಿಯಾ ಅವರು ತಿಳಿಸಿದ್ದಾರೆ.
“ವ್ಯಾಕ್ಸಿನೇಷನ್ ಪ್ರಮಾಣಪತ್ರಗಳ ಪರಸ್ಪರ ಅಂಗೀಕಾರಕ್ಕೆ 96 ರಾಷ್ಟ್ರಗಳು ಒಪ್ಪಿಕೊಂಡಿವೆ. ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಮತ್ತು ರಾಷ್ಟ್ರೀಯವಾಗಿ ಅನುಮೋದಿಸಲಾದ ಕೋವಿಡ್ ಲಸಿಕೆಗಳ ಎರಡೂ ಡೋಸ್ ಪಡೆದ ಪ್ರಯಾಣಿಕರ ಭಾರತೀಯ ಲಸಿಕೆ ಪ್ರಮಾಣಪತ್ರಗಳನ್ನು ಮಾನ್ಯ ಮಾಡಲು ಇವುಗಳು ಒಪ್ಪಿಕೊಂಡಿವೆ” ಎಂದು ಹೇಳಿದ್ದಾರೆ.
ಇದು ಭಾರತದ ಲಸಿಕೆಗಳಿಗೆ ವಿಶ್ವಾದ್ಯಂತ ಸ್ವೀಕಾರಾರ್ಹತೆ ಪಡೆದುಕೊಂಡಿದೆ ಎಂಬುದರ ಪ್ರತಿಬಿಂಬವಾಗಿದೆ ಎಂದು ಡಾ ಮಾಂಡವಿಯಾ ಹೇಳಿದ್ದಾರೆ.
ಕೇಂದ್ರ ಸರ್ಕಾರವು ಲಸಿಕೆ ನೀಡುವಿಕೆ ವೇಗವನ್ನು ಹೆಚ್ಚಿಸಲು ಮತ್ತು ಕೋವಿಡ್-19 ವ್ಯಾಕ್ಸಿನೇಷನ್ ವ್ಯಾಪ್ತಿಯನ್ನು ದೇಶಾದ್ಯಂತ ವಿಸ್ತರಿಸಲು ಪ್ರಯತ್ನ ಮುಂದುವರೆಸಿದೆ. ಕೇಂದ್ರ ಸರ್ಕಾರದ ಬದ್ಧತೆಯ ಫಲವಾಗಿ ಅಕ್ಟೋಬರ್ 21, 2021 ರಂದು ಭಾರತ 100 ಕೋಟಿ ಲಸಿಕೆ ಡೋಸ್ ಮೈಲಿಗಲ್ಲನ್ನು ದಾಟಿದೆ ಎಂದು ಅವರು ಹೇಳಿದರು