ನವದೆಹಲಿ ನ 1 : , ಆಸ್ಟ್ರೇಲಿಯಾ ಸರ್ಕಾರವು ಕೋವಾಕ್ಸಿನ್‌ಗೆ ಮಾನ್ಯತೆ ನೀಡಿರುವುದಾಗಿ ಸೋಮವಾರ ಘೋಷಿಸಿದ್ದು ಈ ಮೂಲಕ ಭಾರತ್ ಬಯೋಟೆಕ್ ಒಂದು ಪ್ರಮುಖ ಗೆಲುವು ಪಡೆದುಕೊಂಡಿದೆ. ಈ ಹಿನ್ನಲೆಯಲ್ಲಿ ಅದು ಭಾರತೀಯ ಲಸಿಕೆಯಾದ ಕೋವ್ಯಾಕ್ಸಿನ್ ಪಡೆದ ಪ್ರಯಾಣಿಕರಿಗೆ ತನ್ನ ನೆಲ ಪ್ರವೇಶಿಸಲು ಅನುಮತಿ ನೀಡಲಿದೆ.
ಆಸ್ಟ್ರೇಲಿಯಾದ ಔಷಧ ನಿಯಂತ್ರಕ TGA ಈ ಬಗ್ಗೆ ಘೋಷಣೆ ಮಾಡಿದ್ದು, ಕೋವ್ಯಾಕ್ಸಿನ್ ಮತ್ತು ಚೀನಾದ ಸಿನೋಫಾರ್ಮ್‌ಗೆ ಮಾನ್ಯತೆ ನೀಡಲಾಗಿದೆ ಎಂದಿದೆ. ಈ ಮಾನ್ಯತೆಯು ಕೋವಾಕ್ಸಿನ್ ಲಸಿಕೆಯನ್ನು ಪಡೆದ 12 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಪ್ರಯಾಣಿಕರಿಗೆ ಆಸ್ಟ್ರೇಲಿಯಾಕ್ಕೆ ಪ್ರವೇಶ ಒದಗಿಸುತ್ತದೆ.
ಸೋಮವಾರದಿಂದ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ವಿಧಿಸಲಾದ ಪ್ರವೇಶ ಮತ್ತು ನಿರ್ಗಮನ ನಿರ್ಬಂಧಗಳನ್ನು ಆಸ್ಟ್ರೇಲಿಯಾ ಸರಾಗಗೊಳಿಸಲಾರಂಭಿಸಿದ್ದರಿಂದ ಲಸಿಕೆಗೆ ಮಾನ್ಯತೆ ನೀಡುವ ನಿರ್ಧಾರ ಹೊರಬಿದ್ದಿದೆ.
ಕೋವ್ಯಾಕ್ಸಿನ್ ಲಸಿಕೆಗೆ WHO ಇನ್ನೂ ತುರ್ತು ಬಳಕೆಯ ಪಟ್ಟಿಯನ್ನು ನೀಡದ ಕಾರಣ ಕೋವ್ಯಾಕ್ಸಿನ್ ಲಸಿಕೆಯ ಮಾನ್ಯತೆ ಹಲವಾರು ದೇಶಗಳಲ್ಲಿ ವಿಳಂಬವಾಗಿದೆ. ನವೆಂಬರ್‌ನಲ್ಲಿ ಕೋವ್ಯಾಕ್ಸಿನ್‌ಗೆ ಮಾನ್ಯತೆ ನೀಡುವ ವಿಷಯದ ಕುರಿತು WHO ಸಭೆಯನ್ನು ನಡೆಸಲು ನಿರ್ಧರಿಸಿದೆ