ಗುಡ್ಡದ ತುದಿಯಲ್ಲಿರೋ ಒಂಟಿ ಮನೆ. ಆ ಒಂಟಿ ಮನೆಯಿಂದ ಬರ್ತಿದೆ ಅಸಹ್ಯ ವಾಸನೆ. ಮನೆಯ
ಗೋಡೆ ತುಂಬಾ ನೊಣಗಳ ರಾಶಿ. ಆ ಮನೆಯ ಹತ್ತಿರ ಸುಳಿಯಲು ಯಾರಿಂದಲೂ ಸಾಧ್ಯವಿಲ್ಲ.
ಜೊತೆಗೆ ಈ ಕೊರೋನಾ ಭೀತಿ. ಅದರ ನಡುವೆ ಈ ಮನೆಯಿಂದ ಹರಡುತ್ತಿದೆ ನಾನಾ ರೋಗಗಳು.
ಈ ಮನೆಯೊಳಗಿನ ಆ ಭೀಭತ್ಸ ರಹಸ್ಯವನ್ನು ಹೇಗಾದ್ರೂ ಮಾಡಿ ಬಯಲಿಗೆಳೆಯಿರಿ. ಆ ಒಂಟಿ
ಮನೆ ಕಾಟದಿಂದ ಮುಕ್ತಿ ಕೊಡಿ ಅಂತ ಅರಸೀಕೆರೆಯ ಸ್ವಯಂ ಸೇವಾ ಸಂಸ್ಥೆಯ ಪ್ರಾಮಾಣಿಕ
ಕಾರ್ಯಕರ್ತರು ನಮ್ಮಲ್ಲಿ ಮನವಿ ಮಾಡಿದ್ರು. ಅವರ ಮನವಿಗೆ ಒಪ್ಪಿಕೊಂಡ ನಾವು, ಹೊಸ ಒಂದು
ಸಾಹಸಕ್ಕೆ ಕೈ ಹಾಕಿಯೇ ಬಿಟ್ವಿ. ಆ ಒಂಟಿ ಮನೆಯ ರಹಸ್ಯ ಬಯಲು ಮಾಡಲು ವಿಜಯಟೈಮ್ಸ್
ಕವರ್‌ಸ್ಟೋರಿ ತಂಡ ಹಾಸನ ಜಿಲ್ಲೆಯ ಅರಸೀಕೆರೆಯತ್ತ ಪ್ರಯಾಣ ಬೆಳೆಸಿಯೇ ಬಿಟ್ವಿ.
ಆ ಮನೆ ಅರಸೀಕೆರೆಯ ಉದಯಪುರದ ಜೇನ್‌ಕಲ್ ಬೆಟ್ಟದ ಬಳಿ ಇದೆ. ಆ ಮನೆಯತ್ತ
ಹೆಜ್ಜೆ ಹಾಕುತ್ತಿದ್ದಂತೆ ದುರ್ನಾತ ಮೂಗಿಗೆ ಬಡಿಯಲಾರಂಭಿಸಿತು. ಹತ್ತಿರ ಸುಳಿಯಲೂ
ಸಾಧ್ಯವಿಲ್ಲದಂಥಾ ಕೊಳಕು ವಾಸನೆ. ಕೊಳಕು ಅಂತ ಸುಮ್ಮನಿದ್ರೆ ಈ ಒಂಟಿ ಮನೆಯ ರಹಸ್ಯ
ಬಯಲು ಮಾಡಲು ಸಾಧ್ಯವೇ ಇಲ್ಲ. ಅದಕ್ಕಾಗಿ ಧೈರ್ಯ ಮಾಡಿ, ಬೇವಿನ ಸೊಪ್ಪನ್ನ ಪುಡಿ ಮಾಡಿ
ಅದರ ವಾಸನೆಯನ್ನ ಮೂಗಿಗೆ ಎಳೆಯುತ್ತಾ, ಮನೆಯ ಬಳಿ ಹೋಗಿ ಬಾಗಿಲು ಒಡೆದೇ ಬಿಟ್ವಿ.
ಆಗ ಆ ಮನೆಯ ಕೋಣೆಯಿಂದ ಅಸಹ್ಯ ವಾಸನೆಯೊಂದಿಗೆ ಬಿಸಿ ಗಾಳಿ ನಮ್ಮ ನಮಗೆ ಬಡಿಯಿತು.
ಆ ಮನೆಯೊಳಗಿದ್ದಿದ್ದು ರಾಶಿ ರಾಶಿ ಹಸಿ ಹಸಿ ಹಸುವಿನ ಎಲುಬು ಹಾಗೂ ಚರ್ಬಿ. ರಕ್ತ ಎಲ್ಲೆಡೆ
ಚಲ್ಲಾಡಿತ್ತು. ಒಂದು ಕ್ಷಣವೂ ನಿಲ್ಲಲೂ ಸಾಧ್ಯವಿಲ್ಲದಷ್ಟು ಅಸಹ್ಯ ವಾಸನೆ. ಆದ್ರೆ ಸತ್ಯ ಬಯಲು
ಮಾಡಲೇ ಬೇಕಾಗಿದ್ದಿದ್ದರಿಂದ ನಮ್ಮ ತಂಡ ಅಲ್ಲೆಲ್ಲಾ ಶೂಟಿಂಗ್ ಮಾಡಿತು. ಆ ಬಳಿಕ ಆ ಮನೆಯ
ಸುತ್ತಾ ಹುಡುಕಾಡ ಪ್ರಾರಂಭಿಸಿದ್ವಿ. ಆಗ ನಮ್ಮ ಕಣ್ಣಿಗೆ ಬಿತ್ತು ರಾಶಿ ರಾಶಿ ಒಣಗಿದ ಎಲುಬು ಚರ್ಬಿ. ಹಸುವಿನ ಎಲುಬಿಂದ ಎಣ್ಣೆ, ತುಪ್ಪ: ಎಲ್ಲೆಲ್ಲೂ ಕಣ್ಣು ಹಾಯಿಸಿದ್ರೂ ಬರಿ
ಎಲುಬು, ಚರ್ಬಿಯ ರಾಶಿ ಕಾಣಲಾರಂಭಿಸಿತು. ಅದರಿಂದಲೂ ಕೆಟ್ಟ ವಾಸನೆ ಬರುತ್ತಿತ್ತು. ಆದ್ರೆ ಸ್ನೇಹಿತ್ರೆ
ನಿಮಗೆ ಗೊತ್ತಾ ಈ ಎಲುಬು ಚರ್ಬಿಯನ್ನ ಇವರು ಈ ರೀತಿ ಯಾಕೆ ಸಂಗ್ರಹಿಸುತ್ತಿದ್ರು? ಇದನ್ನ
ಆ ಕೋಣೆಯಲ್ಲಿ ಯಾಕೆ ಇಟ್ಟಿದ್ರು. ಇದನ್ನ ಒಣಗಿಸಿ ಏನ್ ಮಾಡ್ತಾರೆ? ಈ ಎಲ್ಲಾ ಪ್ರಶ್ನೆಗಳಿಗೆ
ಉತ್ತರ ಹುಡುಕಲು ಪ್ರಾರಂಭಿಸಿದ್ವಿ. ಆಗ ನಮಗೆ ಗೊತ್ತಾಯ್ತು ಒಂದು ಶಾಕಿಂಗ್ ಸೀಕ್ರೆಟ್
ಗೊತ್ತಾಯ್ತು. ಅದೇನಂದ್ರೆ ಈ ದನದ ಎಲುಬು ಮತ್ತು ಚರ್ಬಿಯನ್ನ ಎಣ್ಣೆ, ತುಪ್ಪ ಮತ್ತು ವನಸ್ಪತಿ
ತಯಾರು ಮಾಡಲು ಬಳಸ್ತಾರೆ ಅಂತ. ಯಸ್, ಈ ಎಲುಬನ್ನ ಕುದಿಸಿ, ಅದನ್ನ ಮೆಷಿನ್ ಹಾಕಿ
ಅದರಿಂದ ನಕಲಿ ಎಣ್ಣೆ, ತುಪ್ಪ ಮತ್ತು ವನಸ್ಪತಿ ತಯಾರಿಸಿ ನಮಗೆ ತಿನ್ನಿಸ್ತಿದ್ದಾರೆ ಅನ್ನೋ ಕೊಳಕು
ಸೀಕ್ರೆಟ್ ಗೊತ್ತಾಯ್ತು. ಅತ್ಯಂತ ಕಡಿಮೆ ಬೆಲೆಗೆ ತಯಾರಾಗೋ ಈ ನಕಲಿ ಎಣ್ಣೆ ತುಪ್ಪ ಮತ್ತು
ವನಸ್ಪತಿಯನ್ನು ಹೊಟೇಲ್, ಹಾಸ್ಟೆಲ್ ಮುಂತಾದ ಜಾಗಗಳಿಗೆ ಸಪ್ಲೆöÊ ಮಾಡಿ ನಮ್ಮ ಆರೋಗ್ಯದ
ಜೊತೆ ಚಲ್ಲಾಟ ಆಡ್ತಿದ್ದಾರೆ. ಈ ನಕಲಿ ಎಣ್ಣೆ, ತುಪ್ಪ ಹಾಗೂ ವನಸ್ಪತಿ ತಿಂದ್ರೆ ಕರುಳು ಬೇನೆ,
ಹೃದಯ ಸಂಬAಧಿ ಕಾಯಿಲೆಗಳು, ಚರ್ಮ ರೋಗ ಕಟ್ಟಿಟ್ಟ ಬುತ್ತಿ. ಅದ್ರಲ್ಲೂ ಮಕ್ಕಳಿಗೆ, ಮುದುಕರು
ತಿಂದ್ರೆ ಸಾವೂ ಸಂಭವಿಸೋ ಸಾಧ್ಯತೆ ಇದೆ. ಈ ಎಣ್ಣೆ, ತುಪ್ಪ ಹಾಗೂ ವನಸ್ಪತಿ ಅತ್ಯಂತ ಕಡಿಮೆ
ಬೆಲೆಗೆ ಸಿಗುವುದರಿಂದ ಮಾರುಕಟ್ಟೆಯಲ್ಲಿ ಇದಕ್ಕೆ ಎಲ್ಲಿಲ್ಲದ ಬೇಡಿಕೆಯೂ ಇದೆ. ಅದಕ್ಕಾಗಿ ಈ
ದಂಧೆಯನ್ನ ರಾಜಾರೋಷವಾಗಿ ಅರಸೀಕೆರೆಯಲ್ಲಿ ನಡೆಸುತ್ತಿದ್ದಾರೆ. ಇನ್ನು ಈ ಒಂಟಿ ಮನೆಗೆ
ಇಷ್ಟೊಂದು ಪ್ರಮಾಣದಲ್ಲಿ ಎಲುಬು ಚರ್ಬಿ ಎಲ್ಲಿಂದ ಬರುತ್ತೆ. ಯಾರು ಇವರಿಗೆ ಸಪ್ಲೆöÊ ಮಾಡ್ತಾರೆ?
ಅಂತ ಕಂಡುಹಿಡಿಯಲೇ ಬೇಕಿತ್ತು. ಸೋ ಆ ಸತ್ಯಶೋಧನೆಗೆ ನಮ್ಮ ಕವರ್‌ಸ್ಟೋರಿ ತಂಡ ಹೊರಟೇ
ಬಿಡ್ತು.
ಅಕ್ರಮ ಕಸಾಯಿಖಾನೆಗಳ ದರ್ಬಾರು: ಗೋ ಘ್ಯಾನ್ ಫೌಂಡೇಷನ್‌ನ ಕಾರ್ಯಕರ್ತರು
ಹಾಗೂ ಕವರ್‌ಸ್ಟೋರಿ ತಂಡ ನಿರಂತರವಾಗಿ ಈ ರಹಸ್ಯ ಭೇಧಿಸಲು ಯತ್ನಿಸಿದಾಗ ನಮಗೆ ಆ ಸತ್ಯ
ಗೊತ್ತಾಗಿಯೇ ಬಿಡ್ತು. ಈ ಒಂಟಿ ಮನೆಗೆ ಎಲುಬು ಚರ್ಬಿ ಸಪ್ಲೆöÊ ಆಗೋದೇ ಅರಸೀಕೆರೆಯಲ್ಲಿ
ತಲೆ ಎತ್ತಿರೋ ಹತ್ತಾರು ಅಕ್ರಮ ಕಸಾಯಿಖಾನೆಗಳಿಂದ ಅಂತ. ಈ ಕಸಾಯಿಖಾನೆಗಳು ಯಾವುದೇ
ಲೈಸೆನ್ಸ್ ಇಲ್ಲದೆ, ಆಹಾರ ಸುರಕ್ಷತಾ ಕಾಯ್ದೆಯನ್ನು ಕಾಲಕಸ ಮಾಡಿ, ಕಾನೂನನ್ನ ಗಾಳಿತೂರಿ
ಕಾರ್ಯನಿರ್ವಹಿಸುತ್ತಿದ್ದವು. ಆ ಜಾಗಗಳಿಗೆ ಹೋಗೋದು ಸ್ವಲ್ಪ ಡೇಂಜರೇ. ಜೊತೆಗೆ ಕೋರೋನಾ
ಭೀತಿ. ಆದ್ರೂ ಎದೆಗುಂದದೆ ನಾವು ನಮ್ಮ ರಹಸ್ಯಕಾರ್ಯಾಚರಣೆ ಮಾಡಿ ಆ ಅಕ್ರಮ
ಕಸಾಯಿಖಾನೆಗಳ ಒಳಗೆ ನುಗ್ಗಿದ್ವಿ. ಅಲ್ಲಿನ ದೃಶ್ಯಗಳನ್ನ ನೋಡಿದಾಗ ನಮಗೆ ಅಚ್ಚರಿ ಕಾದಿತ್ತು.
ಎಲ್ಲೆಂದರಲ್ಲಿ ಮಾಂಸದ ತುಂಡುಗಳು, ಎಲ್ಲೆಲ್ಲೂ ರಕ್ತದೋಕುಳಿ, ಸ್ವಚ್ಛತೆ ಒಂಚೂರು ಇಲ್ಲ. ರಾಶಿ
ರಾಶಿ ನೊಣಗಳು, ಜನರ ಆರೋಗ್ಯದ ಬಗ್ಗೆ ಚೂರೂ ಕಾಳಜಿ ಇಲ್ಲದೆ ಇಲ್ಲಿ ಈ ದಂಧೆ ನಡೆಸುತ್ತಿದ್ರು.
ಕೇಳಿ ಬಂತು ಕರುವಿನ ಕೂಗು: ಅಕ್ರಮ ಕಸಾಯಿಖಾನೆಗಳ ಒಳಗೆ ನುಗ್ಗಿದ ಕವರ್‌ಸ್ಟೋರಿ ತಂಡಕ್ಕೆ
ಮತ್ತೊಂದು ಶಾಕ್ ಕಾದಿತ್ತು. ಅದೇನಂದ್ರೆ ಒಳಗಿನ ಕೊಣೆಯೊಳಗೆ ಎಳೆ ಕರುಗಳ ಕೂಗು
ಕೇಳಲಾರಂಭಿಸಿತು. ಆ ಕೋಣೆಯೊಳಗೆ ಐದಾರು ಎಳೆಕರುಗಳನ್ನ ಕಟ್ಟಲಾಗಿತ್ತು. ಅವುಗಳಲ್ಲಿ
ಕೆಲವುಗಳ ಬಾಯಿ ಕಟ್ಟಿ ಇಡಲಾಗಿತ್ತು. ನಾವು ಅಲ್ಲಿಗೆ ದಾಳಿ ಮಾಡುತ್ತಿರಲಿಲ್ಲದಿದ್ರೆ ಆ ಕರುಗಳು
ಕಟಾವಿಗೆ ರೆಡಿಯಾಗುತ್ತಿದ್ದವು. ಅಲ್ಲದೆ ಅಲ್ಲಿ ಗರ್ಭಿಣಿ ಹಸುವನ್ನೂ ಕೊಂದು ಅದರ ಬ್ರೂಣವನ್ನೂ
ಮಾಂಸಕ್ಕೆ ಎತ್ತಿಟ್ಟ ದೃಶ್ಯ ನಮ್ಮ ಮನಸ್ಸು ಕಲಕಿಸಿ ಬಿಡ್ತು. ಇನ್ನೂ ಹತ್ತಾರು ಆರೋಗ್ಯವಂತ ದನ
ಕರುಗಳನ್ನ ಕಸಾಯಿಖಾನೆಯ ಪಕ್ಕದಲ್ಲೇ ಕಟ್ಟಿ ಇಟ್ಟಿದ್ರು. ಜೊತೆಗೆ ಆ ಕೊಣೆಗಳ ಒಳಗೆ ರಾಶಿ ರಾಶಿ
ಎಲುಬು, ಬುರುಡೆಗಳ ರಾಶಿ ಇತ್ತು. ಆಗ ನಮಗೆ ಪಕ್ಕಾ ಆಯ್ತು. ಈ ಎಲ್ಲಾ ಎಲುಬು ಇಲ್ಲಿಂದಲೇ
ಸಪ್ಲೆöÊ ಆಗೋದಂತ.
ಅಕ್ರಮ ಅಡ್ಡೆಗಳ ಮೇಲೆ ರೈಡ್: ಸೋ ನಾವು ಈ ಅಕ್ರಮವಾಗಿ ಚಟುವಟಿಕೆ ಮಾಡೋ
ಈ ದಂಧೆಕೋರರನ್ನು ಸುಮ್ಮನೆ ಬಿಡಬಾರದು ಅಂತ ಅರಸೀಕೆರೆ ಪೊಲೀಸರ ನೆರವು ಕೇಳಿದ್ವಿ. ಅವರ
ಜೊತೆಗೆ ಅರಸೀಕೆರೆ ನಗರಸಭೆ ಅಧಿಕಾರಿಗಳನ್ನು ಕರೆದುಕೊಂಡು ಹೋಗಿ ಆ ಅಕ್ರಮ
ಕಸಾಯಿಖಾನೆಗಳ ಮೇಲೆ ದಾಳಿ ಮಾಡಿದ್ವಿ. ಆರೋಪಿಗಳನ್ನ ಬಂಧಿಸಿದ್ವಿ. ಅಂಗಡಿಗಳನ್ನ ಸೀಜ್
ಮಾಡಿಸಿ, ಮಾಂಸ ಮತ್ತಿತ್ತರ ಸಾಮಾಗ್ರಿಗಳನ್ನ ನಗರಸಭೆ ಅಧಿಕಾರಿಗಳ ಮುಟ್ಟುಗೋಲು ಹಾಕಿದ್ರು.
ತಪ್ಪಿತಸ್ಥರ ವಿರುದ್ಧ ಎಫ್‌ಐಆರ್ ದಾಖಲಿಸಿ ಅವರನ್ನು ಜೈಲಿಗಟ್ಟಲಾಯಿತು. ಇನ್ನು ಎಳೆ ಕರುಗಳು
ಹಾಗೂ ಇನ್ನಿತರ ಗೋವುಗಳನ್ನು ಕಟುಕರ ಕೈಯಿಂದ ರಕ್ಷಿಸಿ ಅವುಗಳಿಗೆ ಹಾಲು, ಮೇವು ನೀಡಿ
ಅರಸೀಕೆರೆಯ ಗೋಶಾಲೆಗೆ ರವಾನಿಸಲಾಯಿತು.
ಒಂಟಿ ಮನೆ ಧ್ವಂಸ: ಈ ಒಂಟಿ ಮನೆಯ ಸಂಪೂರ್ಣ ರಹಸ್ಯವನ್ನ ಭೇಧಿಸಿದ ನಾವು ಮುಂದಿನ
ಕಾರ್ಯಾಚರಣೆಗೆ ರೆಡಿಯಾದ್ವಿ. ಅರಸೀಕೆರೆ ಗ್ರಾಮಾಂತರ ಪೊಲೀಸರ ಸಹಾಯದಿಂದ ಆ ಒಂಟಿ
ಮನೆಯ ಮೇಲೂ ರೈಡ್ ಮಾಡಿದ್ವಿ. ಜೆಸಿಬಿ ಮುಖಾಂತರ ಆ ಮನೆಯನ್ನು ನೆಲಸಮ ಮಾಡಲಾಯಿತು.
ಆ ಮೂಲಕ ಒಂದು ದೊಡ್ಡ ಅಪಾಯದಿಂದ ಜನರನ್ನು ಪಾರುಮಾಡಲಾಯಿತು. ಇದು ವಿಜಯಟೈಮ್ಸ್
ಕವರ್‌ಸ್ಟೋರಿ ಇಂಪ್ಯಾಕ್ಟ್.